ಸ್ಫೂರ್ತಿಯ ಸಕಾರ ಮೂರ್ತಿಯ “ಜೀವನ್“
ಅಶ್ವಸೂರ್ಯ/ಶಿವಮೊಗ್ಗ: ಜೀವನ ಗಾಯಕವಾಡರ ಯಶೋಯಾನ
“ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿ೦ದ ಎತ್ತ ಸಂಭಂದವಯ್ಯಾ” ಎಂಬ ವಚನದಂತೆ
ಬೀದರ ಜಿಲ್ಲೆಯ ಪರತಪುರ ಎಂಬ ಪುಟ್ಟ ಹಳ್ಳಿಯ ಜೀವನರವರುಸಾಮಾಜಿಕ ಜಾಲತಾಣಗಳ ಶೈಕ್ಷಣಿಕ ಬಳಗವೊಂದರಲ್ಲಿ ಪರಿಚಯಾವಾಗುತ್ತಾರೆ
ನಂಗೆ ಯಾವತ್ತು ಅವರು ಅಂಧರು ಅನಿಸಿಲ್ಲ ಎಲ್ಲ ಸಹೋದರ ಸ್ನೇಹಿತರಂತೆ ಅನಿಸಿದೆ ಅದಕ್ಕೆ ಅವರ ಸ್ವಭಾವ ಮತ್ತು ಸಾಧನೆಯೇ ಸಾಕ್ಷಿ.
ಜೀವನ್ ರವರು ಸ್ವತಃ ಜ್ಞಾನ ಸಂಜೀವಿನಿ ಎಂಬ ಶೈಕ್ಷಣಿಕ ಬಳಗ ನಡೆಸುತ್ತಿದ್ದಾರೆ. ಅಲ್ಲಿ ಸಾಮಾನ್ಯ ಜ್ಞಾನದ ಸಾಕಷ್ಟು ವಿಚಾರಗಳನ್ನು ಹಂಚುತ್ತ ಹಲವು ಸ್ಪರ್ಧಾರ್ಥಿ ಗಳಿಗೆ ದಾರಿದೀಪವಾಗಿದ್ದರೆ.ಅಷ್ಟೇ ಅಲ್ಲ ಬರಹಗಾರರರು ಕೂಡ ಹೌದು ಅವರ ಕಲ್ಪನೆಯ ಕುಸರಿಯಲ್ಲಿ ಹಲವು ಕವಿತೆಗಳು ಅರಳಿವೆ.
ಅವುಗಳ ಒಂದು ಸಣ್ಣ ನೋಟ,
ಅವರ ಬದುಕಿನ ಹಾದಿಯನ್ನು ಅವರದೇ ಅದ ಬರಹದಲ್ಲಿ ಗ್ರಹಿಸೋಣ :
ನನ್ನ ಹೆಸರು ಜೀವನ್ ತಂದೆ ಹೆಸರು ಸುರೇಶ್ ತಾಯಿ ಹೆಸರು ಲಕ್ಷ್ಮಿ ಬಾಯಿ ನನ್ನ ಊರು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕ ಪರತಾಪೂರ ಎಂಬ ಹಳ್ಳಿಯಲ್ಲಿ ನಾನು ಜನಿಸಿದೆ
ನನ್ನ ತಂದೆ ತಾಯಿಗೆ ಆರು ಜನ ಮಕ್ಕಳು ಅದರಲ್ಲಿ ನಾಲ್ಕನೇದವನು ನಾನಾಗಿದೆ ಜೊತೆಗೆ ನನಗೆ ದೃಷ್ಟಿ ಇಲ್ಲ ಆದ್ರೆ ನಾನು ಒಬ್ಬ ಬರಹಗಾರ ಹಾಡುಗಾರ
ಮನೆಯಲ್ಲಿ ಯಾರು ಓದಲಿಲ್ಲ ನಮ್ಮ ದೊಡ್ಡ ಅಣ್ಣ ಸಾಗರ್ 10ನೇ ತರಗತಿಯನ್ನು ಓದಿ ಅವರು ಶಾಲೆಯನ್ನು ಬಿಟ್ಟರು ನಮ್ಮ ಎರಡನೇ ಅಣ್ಣ ಸಾವನ್ ಇವರು ಕೂಡ ಪಿಯುಸಿ ಓದಿ ಬಿಟ್ಟರು ಜೊತೆಗೆ ಮೂರನೇ ಅಣ್ಣ ಸಾಜನ್ ಇವನು ಕೂಡ 7ನೇ ತರಗತಿಯನ್ನು ಓದಿ ಶಾಲೆಯನ್ನು ಬಿಟ್ಟರು ತದನಂತರ ನಾಲ್ಕನೇದವನು ನಾನು ಜೀವನ್ ನಾನು ಗುಲ್ಬರ್ಗ ಸರ್ಕಾರಿ ಅಂದ ಬಾಲಕರ ಪ್ರೌಢಶಾಲೆಯಲ್ಲಿ ಒಂದನೆಯಿಂದ 10ನೇ ತರಗತಿಯವರೆಗೂ ಓದಿದೆ ತದನಂತರ ಪಿಯುಸಿ ಹುಬ್ಬಳ್ಳಿಯಲ್ಲಿ ನೌನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆ ತದನಂತರ ಡಿಗ್ರಿ ಧಾರವಾಡ್ ರಾಯಪುರ್ನಲ್ಲಿ s j m v ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆ ತದನಂತರ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಎಮ್ಮೆ ಕನ್ನಡ ವ್ಯಾಸಂಗ ಮಾಡಿದೆ ಅದು ಆದ ಮೇಲೆ ನನ್ನ ಜಿಲ್ಲೆಯಲ್ಲಿ ಬೀದರ್ ನಲ್ಲಿ ಬಿಎಡ್ ಇವಾಗ ತಾನೆ ಮುಗಿಸಿದೆ
ನನ್ನ ತಮ್ಮನಾದ ಅರ್ಜುನ್ ಇವನು ಕೂಡ 9ನೇ ತರಗತಿಯನ್ನು ಓದಿ ಶಾಲೆಯನ್ನು ಬಿಟ್ಟ ಜೊತೆಗೆ ನನ್ನ ಇನ್ನೊಬ್ಬ ತಮ್ಮನಾದ ನಿಖಿತ್ ಇವನು ಕೂಡ 10ನೇ ತರಗತಿಯನ್ನು ಓದಿದ ಇವರು ಎಲ್ಲರೂ ಯಾಕೆ ಓದಲಿಲ್ಲ ಅಂದರೆ ನಮಗೆ ತುಂಬಾ ಕೊಡು ಬಡತನ ಬಡತನದಲ್ಲೇ ಸಾಕಷ್ಟು ಕಷ್ಟಗಳು ಬಂದವು ಆ ಬಡತನದಲ್ಲೇ ಅವರು ಕಷ್ಟಪಟ್ಟು ನನಗೆ ಓದಿಸಿದರು ನನಗೆ ಓದಿಗೆ ಬೆಂಬಲರಾಗಿ ನಿಂತಂತ ನನ್ನ ಎರಡನೇ ಅಣ್ಣ ಸಾವನ್ ಮತ್ತೆ ನನ್ನ ಐದನೇ ತಮ್ಮ ಅರ್ಜುನ್ ಇವರು ನನ್ನ ಓದಿಕೆ ಸಹಾಯವಾಗಿ ಪ್ರತಿಯೊಂದುರಲ್ಲಿ ಸ್ಪೂರ್ತಿಯಾಗಿ ಇದ್ದಾರೆ, ಅಣ್ಣನಲ್ಲದೆ ಸ್ನೇಹಿತನಾಗಿ ಕೂಡ ನನ್ನ ಸದಾ ನನಗೆ ಪ್ರೋತ್ಸಾಹಿಸುತ್ತಾರೆ ನನ್ನ ತಾಯಿ ಬಗ್ಗೆ ಹೇಳಬೇಕು ಅಂದರೆ ಜಗತ್ತಿನಲ್ಲಿ ಯಾವ ದೇವರಿಗೂ ಹೋಲಿಸದೆ ನನ್ನ ಅಮ್ಮ ಅವಳೇ ನನಗೆ ನನ್ನ ಪ್ರತಿ ಸಾಧನೆಯನ್ನು ನನ್ನ ಅಮ್ಮನೇ ನನಗೆ ಸ್ಪೂರ್ತಿ ನನಗೆ ದೃಷ್ಟಿ ಇಲ್ಲ ಎಂದು ಸಾಕಷ್ಟು ಜನ ನಿನಗೆ ಒಳ್ಳೆಯ ಅವಕಾಶ ಕೊಡುತ್ತೇನೆ ಅಂತ ಆ ಸುವಾಸನೆ ಕೊಟ್ಟರು ಆದರೆ ನನ್ನ ಕುಟುಂಬ ನನಗೆ ಅವತ್ತು ಅನುಕಂಪ ತೋರಿಸಲಿಲ್ಲ ಅವರು ನನಗೆ ಧೈರ್ಯವಾಗಿ ನನ್ನ ಬೆನ್ನಿಂದೆ ನಿಂತಿದ್ದಾರೆ ನಾನು ಶಾಲೆಯಲ್ಲಿ ಇದ್ದಾಗ ನನಗೆ ಹಾಡಲು ತುಂಬಾ ಇಷ್ಟ ಇತ್ತು ಆದರೆ ನನಗೆ ಧ್ವನಿ ಸರಿ ಇಲ್ಲ ಎಂದು ಸಂಗೀತ ತರಗತಿಯಿಂದ ಹೊರಗಡೆ ಹಾಕಿದ್ದರು ನನಗೆ ಓದಲು ಬರೆಯಲು ಬರುವುದಿಲ್ಲ ಎಂದು ಸಾಕಷ್ಟು ನನಗೆ ಶಾಲೆಯಲ್ಲಿ ಹೀಯಾಳಿಸುತ್ತಿದ್ದರು ಆದರೆ ಹೀಯಾಳಿಸುವವರು ನನಗಿಂತ ಹಿಂದೆ ಉಳಿದರು ಅವರಿಗಿಂತ ನಾನು ಓದುವುದರಲ್ಲಿ ಉನ್ನತ ಸ್ಥಾನದಲ್ಲಿ ಬೆಳೆದೇನೆ ಎಂದು ನನಗೆ ತುಂಬಾ ಹೆಮ್ಮೆ ಇದೆ ನಾನು ಶಾಲೆಯಲ್ಲಿದ್ದಾಗ ಕ್ರಿಕೆಟ್ ಆಡಲು ನನಗೆ ತುಂಬಾ ಇಷ್ಟ ಆದರೆ ನನಗೆ ಕೈಯಲ್ಲಿ ಸರಿಯಾಗಿ ಬ್ಯಾಟ್ ಇಡಲು ಬರದೇ ಇದ್ದಾಗ ತುಂಬಾ ಜನ ನನಗೆ ಅವಮಾನಿಸಿದ್ದರು ಆದರೆ ಇವಾಗ ನಾನು ರಾಜ್ಯಮಟ್ಟದ ಕ್ರಿಕೆಟ್ ಸ್ಪರ್ಧೆಯಲ್ಲಿ ಕೂಡ ಗೆದ್ದು ಪ್ರಥಮ ಬಹುಮಾನ ಗೆದ್ದಿದ್ದೇನೆ ಸಂಗೀತದಲ್ಲಿ ಕೂಡ ಅಷ್ಟೇ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಜಿಲ್ಲಾ ಮಟ್ಟದಲ್ಲಿ ತಾಲೂಕ ಮಟ್ಟದಲ್ಲಿ ಸಾಕಷ್ಟರಲ್ಲಿ ಗೆದ್ದೆ ಆದರೆ ನನಗೆ ನಿಜವಾದ ಅವಕಾಶಗಳು ಸಿಗಲಿಲ್ಲ ಆದರೆ ನನಗೆ ನಿಜವಾಗಿ ಅರ್ಥ ಮಾಡಿಕೊಂಡವರು ಡಿಗ್ರಿಯಲ್ಲಿ ಓದುವಾಗ ಕೆಲವು ನನ್ನ ಗುರುಗಳು ಜೊತೆಗೆ ವಿಶ್ವವಿದ್ಯಾಲಯದಲ್ಲಿ ಕೂಡ ಗುರುಗಳು ವಿಶ್ವವಿದ್ಯಾಲಯದಲ್ಲಿ ನನ್ನ ಆಪ್ತ ಮಿತ್ರರಾಗಿರುವಂತಹ ಪರಶುರಾಮ್ ಶ್ರೀಧರ್ ಭೀಮಶಂಕರ್ ತ್ರಿಮೂರ್ತಿ ಇವರೆಲ್ಲರೂ ನನ್ನ ನೋವಿನೊಂದಿಗೆ ಸದಾ ಜೊತೆಗೆ ಇದ್ದಾರೆ ನಾನು ವಿಶ್ವವಿದ್ಯಾಲಯದಲ್ಲಿ ಓದುವಾಗ ನನಗೆ ಓದಲು ತುಂಬಾ ಸಮಸ್ಯೆ ಆಗುತ್ತಿತ್ತು ಏಕೆಂದರೆ ನಾವು ಯಾರು ಓದುತ್ತಾರೆ ಅದನ್ನು ಕೇಳಿಸಿಕೊಳ್ಳಬೇಕಾಗಿತ್ತು ಅದಕ್ಕೆ ನನಗೆ ಓದಿಗೆ ಅಲ್ಲಿ ಏನೂ ತೊಂದರೆ ಆಗದೆ ಪೂರ್ಣಿಮಾ ಅಕ್ಕ ಅವರು ಓದವುದರಲ್ಲಿ ತುಂಬಾ ಸಹಾಯ ಮಾಡಿದ್ದಾಳೆ ಸಾಕಷ್ಟು ಜನ ನನಗೆ ಅವಮಾನಿಸಿದವರು ತುಂಬಾ ಜನ ಇದ್ದಾರೆ ಆದರೆ ಮನಸ್ಸಿಂದ ಅರ್ಥ ಮಾಡಿಕೊಂಡವರು ತುಂಬಾ ಕಡಿಮೆ ಜನ ಇದ್ದಾರೆ ನನ್ನ ಕುಟುಂಬದಲ್ಲಿ ಅಕ್ಕನಿಲ್ಲದಿದ್ದರೂ ನನ್ನ ನೋವಿನೊಂದಿಗೆ ರಾಧಿಕಾ ಅಕ್ಕ ಇವರು ಸದಾ ನನ್ನ ಜೊತೆಗೆ ಇರುತ್ತಾರೆ ಇಷ್ಟೇ ಅಲ್ಲದೆ ಎಲ್ಲೋ ಇರುವವರು ಶಿವಮೊಗ್ಗ ಜಿಲ್ಲೆಯ ಭವ್ಯ ಮೇಡಂ ಬೀದರ್ ಜಿಲ್ಲೆಯಲ್ಲಿರುವ ನಾನು ಆದರೆ ಇಬ್ಬರಿಗೆ ಒಂದು ಪರಿಚಯ ಆದಾಗ ನನ್ನ ಸಾಧನೆಯನ್ನು ಕಂಡು ಅವರು ನನಗೆ ಒಂದು ಸ್ಪೂರ್ತಿಯಾಗಿ ನನಗೆ ಪ್ರೋತ್ಸಾಹ ಕೊಡಬೇಕು ಎಂದು ನನಗೆ ಕರೆ ಮಾಡಿ ಹೇಳಿದಾಗ ತುಂಬಾ ಹೆಮ್ಮೆ ಅನಿಸಿತು ಜೊತೆಗೆ ನಿನಗೆ ದೃಷ್ಟಿ ಇಲ್ಲ ಎಂದು ನಾನು ಯಾವತ್ತು ನೋಡುವುದಿಲ್ಲ ಅಂತರಾಳದ ದೃಷ್ಟಿ ಇದೆ ಎಂದು ನಾನು ಭಾವಿಸುತ್ತೇನೆ ಎಂದು ನನಗೆ ಹೇಳಿದವರು ಭವ್ಯ ಮೇಡಂ ಜೊತೆಗೆ ನಿನಗೆ ನಾನು ಯಾವತ್ತೂ ಅನುಕಂಪ ತೋರಿಸುವುದಿಲ್ಲ ನನ್ನ ಕಡೆಯಿಂದ ಎಷ್ಟು ಆಗುತ್ತದೆಯೋ ಅಷ್ಟು ನಿನಗೆ ಅವಕಾಶಗಳನ್ನು ಕೊಡಿಸುತ್ತೇನೆ ಎಂದು ಹೇಳಿದವರು ತುಂಬಾ ತುಂಬಾ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಮೇಡಂ ನಿಮಗೆ ನಿಮ್ಮ ಬಗ್ಗೆ ಎಷ್ಟು ಹೇಳಿದರು ಕಡಿಮೆ ಇದೆ ಏಕೆಂದರೆ ನನಗೆ ನೀವು ದೂರದಿಂದ ನೋಡಿದ್ದೀರಿ ಜೊತೆಗೆ ದೂರದಿಂದ ನೋಡಿ ನೀವು ನನ್ನ ಬಗ್ಗೆ ಮನಸ್ಸಿಂದ ಅರ್ಥ ಮಾಡಿಕೊಂಡಿದ್ದೀರಿ ಅದಕ್ಕೆ ನಿಮಗೆ ಎಷ್ಟು ಧನ್ಯವಾದಗಳು ತಿಳಿಸಿದರು ಕಡಿಮೆ,
ಜೀವನ ರೀತಿ ಹಲವರು ನಾವು ನೋಡಿರುತ್ತೇವೆ. ಇಂಥವರಿಗೆ ನಾವು ಅನುಕಂಪ ತೋರಬೇಕು.ಆದ್ರೆ ಅದು ಅವರಿಗೆ ಇರಿಸು ಮುರಿಸು ಆಗುವಂತೆ ಇರಬಾರದು, ಹಾಗೆಯೇ ಅವರ ಜಡತ್ವವ ಬರಿಸುವಂತಿರಬಾರದು. ಅದಕ್ಕಿಂತ ಮುಖ್ಯವಾಗಿ ಅವರ ಸಾಧನೆಗೆ ಸಹಕರಿಸಿ ಬೆನ್ನು ತಟ್ಟೋಣ. ನಮ್ಮೊಳಗೆ ಎಲ್ಲರಂತೆ ಅವರು ಎಂದು ಸಾಮಾರಸ್ಯದಿ ಬದುಕೋಣ.
ಜೀವನ್ ರವರ ಯಶೋಯಾನ ಅನೇಕರ ಜೀವನಕ್ಕೆ ಸ್ಫೂರ್ತಿಯ ಸೆಲೆಯಾಗಿದೆ. ಜೀವನರವರು ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿ ಅಜರಾಮರವಾಗಲಿ ಎಂದು ಶುಭ ಹಾರೈಸೋಣ.
✍️ ಭವ್ಯ ಸುಧಾಕರ ಜಗಮನೆ
” ಇಷ್ಟೇ ಜೀವನ “
ನಿಷ್ಕಲ್ಮಶ ಮನಸ್ಸಿಗೆ ಜೀವನವೊಂದು ರುವಾರಿ
ವರ್ಣಿಸಲಸಾಧ್ಯ ಹರಸಿ
ಹಾರೈಸುವ ಕಾಳಜಿಯ ಪರಿ!
ಎಲ್ಲರಿಗೂ ಅವರವರ ನಿರ್ಧಾರದ ಜೀವನವೇ ಸರಿಸಾಟಿ
ಜೀವನವೆಂಬ ಮೂರಕ್ಷರದ ಮುಂದೆ ಎಷ್ಟಿದ್ದರೂ ಲೆಕ್ಕವಿಲ್ಲ ಕೋಟಿ ಕೋಟಿ!!
ವಾಸ್ತವದಲಿ ಯಾರ ಕಾಳಜಿಗೆ ಯಾರು ಬರುವವರಿಲ್ಲ
ಕಾರಣ ಜಗತ್ತು ಅವರಿಗೆ ತಕ್ಕಂತೆ ಚಲಿಸುತ್ತಿರುವುದಲ್ಲ!
ಹೇ ಮನುಜ ನೀ ನೆನಪಿಡಬೇಕಿರುವುದು ಒಂದು ಮಾತ್ರ
ನಿನ್ನ ಕೊನೆಯ ಉಸಿರಿರೋವರೆಗು
ಜೀವನದಲ್ಲಿ ನನ್ನದು ನಿನ್ನದು ಎಂಬುದೇನಿಲ್ಲ ಸಾವನ್ನ ಬಿಟ್ಟು ಎಂದು ಮನುಜ ತಿಳಿಯಬೇಕಲ್ಲ!!
ಮೆಚ್ಚಿಕೊಂಡವರೆಲ್ಲರು ನೆನಪಿನ ಹಚ್ಚೆ ಹಾಕಿ ಮರೆಯಾದರು!
ಮರೆಯಾದ ಮರುಕ್ಷಣ ಸಿಕ್ಕ ಅನುಭವಗಳು
ಸ್ವಚ್ಛ ಹಾದಿಗೆ ಸ್ವಾಗತಿಸಿಹವು!!
ಕಷ್ಟದಿಂದ ಪಾರಾದ ಮೇಲೆ ಸ್ನೇಹಿತ ಭಾರ
ಸಂಬಂಧಗಳು ಮುಗಿದ ಮೇಲೆ ಬಂಧಗಳು ಭಾರ!
ಸ್ವಾರ್ಥಿ ಮನುಷ್ಯನಿಗೆ ತನ್ನ ಕೆಲಸ ಮುಗಿದಮೇಲೆ ಎಲ್ಲವೂ ಭಾರ ಹೀಗೆ ಸ್ವಾರ್ಥಿಯಾಗಿ ಸಾಗಿದರೆ ತಿಳಿಯುವುದೆಂದಿಗವನಿಗೆ
ನಿಜ ಜೀವನದ ಸಾರ!!
ಕಲ್ಪನೆಯ ಕಣ್ಣಲ್ಲಿ ಕಣ್ರೆಪ್ಪೆಗಳ ಬಡಿತ
ರೆಪ್ಪೆಯ ಸೆಳೆತಕೆ ಕಾಣುವ ಕನಸಿನ ಒಲವೇ ಅಗಣಿತ!
ಅರಘಳಿಗೆಯು ನಿಲ್ಲದೇ ಸಾಗುತಿದೆ ಜೀವನ ಪಯಣ
ಒಂದೆಡೆ ಸೇರುವ ಪ್ರೀತಿಯ ಮನದಲಿ ನೂರಾರು ತಲ್ಲಣ!!
ಇತರರಿಗೆ ನೋವು ಕೊಟ್ಟು ಕೊಲ್ಲುತಿರುವೆಯಲ್ಲ
ಮನುಜ ನಿನ್ನಾಸೆಯ ಸ್ವಾರ್ಥ ಪ್ರಪಂಚದಲ್ಲಿ!
ಸ್ವಾರ್ಥ ನಿಸ್ವಾರ್ಥಕ್ಕಾಗಿ ಬದುಕುತಿರುವೆಯಲ್ಲ
ನಿನ್ನ ಜೀವನದ ಹೋರಾಟದಲ್ಲಿ!!
ನಗು ನಗುತಾ ಬರುವ ನಾವೆಲ್ಲರೂ
ಅಳುವ ನೀಡುತ್ತಾ ಸಾಗುವೆವು ಸಾವಿನೆಡೆಗೆ!
ಸಾಗುವಾಗ ಕಂಡ ಕನಸು ನನಸಾಗದೆ ಕನಸಾಗಿ ಉಳಿದು ಬಿಟ್ಟವೇ ಕೊನೆಗೆ!!
ನೆನ್ನೆ ಕಂಡದ್ದು ಕನಸೋ
ಇಂದು ಕಾಣುತಿರುವುದು ಕನಸೋ ನನಸೋ
ಎಂಬ ಪ್ರಶ್ನೆಯೊಂದು ಬರಿದಾಗಿದೆ!
ಕನಸು ನನಸು ಏಳು ಬೀಳುಗಳ ನಡುವೆ ಸಾಗಿದ ಜೀವನವಿಷ್ಟೇ ಕ್ಷಣಿಕವೆಂದೆನಿಸಿದೆ!!