ಕಾಸರಗೋಡು: ಪೊಲೀಸ್ ಪತ್ನಿಯನ್ನೇ ತಲವಾರ್ ನಿಂದ ಹತ್ಯೆಗೈದ ಪತಿ ಮಹಾಶಯ.!
ಅಶ್ವಸೂರ್ಯ/ಶಿವಮೊಗ್ಗ: ಕಾಸರಗೋಡು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ನಿಯನ್ನು ಪತಿ ಮಹಾಶಯನೊಬ್ಬ ಲಾಂಗಿನಿಂದ ಕೊಚ್ಚಿ ಕೊಲೆಮಾಡಿದ ಪ್ರಕರಣವೊಂದು ಕಾಸರಗೋಡಿನ ಕಣ್ಣೂರಿನ ಕರಿವೆಳ್ಳೂರಿನಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತರನ್ನು ಕಾಸರಗೋಡು ಚಂದೇರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ದಿವ್ಯಶ್ರೀ ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಪರಾರಿಯಾಗಿರುವ ಗಂಡ ರಾಜೇಶನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ದಿವ್ಯಶ್ರೀ ಹಾಗೂ ರಾಜೇಶ್ ನಡುವೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ಇತ್ತೆಂದು ತಿಳಿದಿದೆ. ಈ ಕಾರಣಕ್ಕೆ ಕೆಲವು ದಿನಗಳಿಂದ ಇಬ್ಬರೂ ಬೇರ್ಪಟ್ಟು ಪ್ರತ್ಯೆಕವಾಗಿ ಜೀವನ ನೆಡೆಸುತ್ತಿದ್ದರಂತೆ.! ನಿನ್ನೆ ಸಂಜೆಯ (ನ,21) ವೇಳೆ ಲಾಂಗು ಹಿಡಿದುಕೊಂಡು ಬಂದ ಪತಿ ರಾಜೇಶ ದಿವ್ಯಶ್ರೀ ಮೇಲೆ ಹಲ್ಲೆ ನಡೆಸಿದ್ದು, ಲಾಂಗಿನ ಹೊಡೆತಕ್ಕೆ ದಿವ್ಯಶ್ರೀಯ ಮುಖ ಹಾಗೂ ಕುತ್ತಿಗೆಗೆ ಬಲವಾದ ಗಾಯವಾಗಿದೆ. ಈ ವೇಳೆ ತಡೆಯಲು ಬಂದ ದಿವ್ಯಶ್ರೀಯ ತಂದೆಗೂ ಗಾಯ ಗಳಾಗಿವೆ. ಬೊಬ್ಬೆ ಕೇಳಿ ಪರಿಸರ ವಾಸಿಗಳು ಬಂದಿದ್ದು, ಈ ವೇಳೆ ರಾಜೇಶ್ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಗಂಭೀರ ಗಾಯಗೊಂಡ ದಿವ್ಯಶ್ರೀ ಅವರನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಆಕೆಯ ಜೀವ ಉಳಿಸಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ವಿಚಾರಣೆ ಒಳಪಡಿಸಿದ್ದಾರೆ.ಗಂಡ ಹೆಂಡತಿಯ ನಡುವೆ ದಾಂಪತ್ಯ ಕಲಹಕ್ಕೆ ಸಂಬಂದಿಸಿದಂತೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.