ಮನಸ್ಸು ಸದಾ ಒಳಿತಲಿ ಅರಳುತಿರಲಿ….

ಮನಸ್ಸು ಸದಾ ಒಳಿತಲಿ ಅರಳುತಿರಲಿ

  ಅಶ್ವಸೂರ್ಯ/ಶಿವಮೊಗ್ಗ: ನಾವು ಈಗ ಮನೋಲೋಕದಲ್ಲಿ ಸುತ್ತಾಡೋಣ.ಮನಸ್ಸು ಪ್ರತಿಯೊಬ್ಬರಲ್ಲಿ ಇರುತ್ತೆ.ಆದರೆ ಒಬ್ಬರಿಂದ ಒಬ್ಬರಿಗೆ ಪರಸ್ಪರ ವಿಭಿನ್ನವಾಗಿರುತ್ತೆ.ನವಜಾತ ಶಿಶುವಿನ ಮನಸ್ಸು ಮುಗ್ದವಾಗಿರುತ್ತದೆ.ಕಲಿಯುತ್ತ ಬೆಳೆಯುತ್ತ ದೊಡ್ಡವರಾದಂತೆ ಮನಸ್ಸು ಪಕ್ವವಾಗುತ್ತ ಸಾಗುತ್ತದೆ. ಅದು ಇದು ಕಂಡಾಗ ಕೇಳಿದಾಗ ಮನಸ್ಸು ಚಂಚಲವಾಗೋದು ಸಹಜ.ಮನಸ್ಸನ್ನು ಹುಚ್ಚು ಕುದುರೆಯಂತೆ ಓಡಲು ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಅದು ಕುಣಿಸಿದಂತೆ ಕುಣಿದರೆ ನಮಗೆ ನಾವೇ ಶತ್ರುಗಳು. ಯಾವಾಗ ಹೇಗೆ ಏನು ಮಾಡಬೇಕು ಹೇಗಿರಬೇಕೆಂದು ಅರಿತು ಮನಸ್ಸನ್ನು ಒಳಿತಲಿ ಒಲಿಸಿಕೊಳ್ಳಬೇಕು. 

ಒಂದು ಉದಾಹರಣೆ ಮೂಲಕ ಅರ್ಥೈಸಿಕೊಳ್ಳೋಣ.
ನಂಜು ಮತ್ತು ಮಂಜು ಎಂಬ ಇಬ್ಬರು ಸ್ನೇಹಿತರು ಪ್ರವಾಸಕ್ಕೆ ಹೋಗಿರುತ್ತಾರೆ. ಅವರಿಬ್ಬರಿಗೂ ಮದುಮೇಹ ಕಾಯಿಲೆಯಿರುತ್ತೆ.ಇಬ್ಬರು ಹೋಟೆಲ್ಗೆ ಹೋಗುತ್ತಾರೆ. ಮಂಜು ರಾಗಿ ಮುದ್ದೆ ಊಟ ಮಾಡುತ್ತಾನೆ. ನಂಜು ಮಂಜು ಎಷ್ಟು ಹೇಳಿದರು ಕೇಳಲಿಲ್ಲ.ಫಿಜಾ ಬರ್ಗರ್ ತಿಂದು ಜ್ಯುಸ್ ಕುಡಿತಾನೆ. ಬೆಳಗ್ಗೆ ಹೊತ್ತಿಗೆ ಮದುಮೇಹ ಹೆಚ್ಚಾಗಿ ಸುಸ್ತಾಗುತ್ತಾನೆ. ಮಂಜು ತನ್ನ ಗೆಳೆಯ ನಂಜನನ್ನು ಆಸ್ಪತ್ರೆಗೆ ಕರ್ಕೊಂಡುಹೋಗಿ ಚಿಕಿತ್ಸೆಕೊಡಿಸ್ತಾನೆ. ನಂಜು ಸುಧಾರಿಸಿಕೊಂಡ ಮೇಲೆ ಪ್ರವಾಸ ಮುಂದುವರಿಸುತ್ತಾರೆ. ಹೋಟೆಲ್ ರೆಸೆಪ್ಸೆಷನ್ ಲೀಲಾ ಮೇಲೆ ಇಬ್ಬರಿಗೂ ಮೋಹವಾಗುತ್ತೆ. ಹೋಟೆಲ್ ಸಿಬ್ಬಂದಿಯಿಂದ ಅವಳು ವಿವಾಹಿತಳು ಎಂದು ತಿಳಿಯುತ್ತದೆ. ಮಂಜು ತಕ್ಷಣವೇ ಲೀಲಾಳ ಬಗ್ಗೆ ಸಹೋದರಿ ಎಂಬ ಭಾವನೆ ತಾಳುತ್ತಾನೆ. ನಂಜನಿಗೆ ಲೀಲಾಳನ್ನು ತನ್ನವಳಾಗಿಸಿಕೊಳ್ಳಬೇಕು ಎಂದು ಲೆಕ್ಕಾಚಾರ ಹಾಕಿಕೊಂಡು ಮೋಹದ ಅಲೆಯನ್ನು ಹೆಚ್ಚಿಸಿಕೊಳ್ಳುತ್ತಾನೆ. ಮಾರನೇ ದಿನ ಲೀಲಾಳಿಗೆ ಹೂಗುಚ್ಚದೊಡನೆ ಪ್ರೇಮ ನಿವೇದನೆ ಮಾಡುತ್ತಾನೆ. ಅವಳು ಅದನ್ನು ನಯವಾಗಿ ನಿರಾಕರಿಸುತ್ತಾಳೆ. ಅವನು ತಕ್ಷಣಕ್ಕೆ ಸುಮ್ಮನಾಗುತ್ತಾನೆ. ನಂಜು ಮಂಜು ಪ್ರವಾಸ ಮುಗಿಸಿ ಅವರವರ ಮನೆಗೆ ಮರಳುತ್ತಾರೆ. ಮಂಜು ತನ್ನಪಾಡಿಗೆ ತಾನು ತನ್ನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾನೆ. ಇತ್ತ ನಂಜನೂ ಹೋಟೆಲ್ ರೆಸೆಪ್ಷನ್ ನಂಬರ್ಗೆ ಪದೇ ಪದೇ ಕರೆ ಮಾಡಿಲೀಲಾಳಿಗೆ ಕಾಟ ಕೊಡುತ್ತಿರುತ್ತಾನೆ. ಅವಳು ಒಮ್ಮೆ ಪೊಲೀಸ್ರಿಗೆ ಈ ವಿಷಯವಾಗಿ ದೂರು ಕೊಡುತ್ತಾಳೆ. ನಂಜು ಪೋಲೀಸರ ವಶಕ್ಕೆ ಸಿಕ್ಕು ಶಿಕ್ಷೆ ಪಡೆಯುತ್ತಾನೆ.
ಇಂಥ ಹತ್ತಾರು ಉದಾಹರಣೆಗಳನ್ನು ನಾವು ಗಮನಿಸಿರುತ್ತೇವೆ. ಆದರೂ ಕೆಲವರು ಮತ್ತೆ ಮತ್ತೆ ಎಡವುತ್ತಿರುತ್ತಾರೆ.
ಯೋಗ ಧ್ಯಾನ, ಪ್ರಾಣಯಾಮ ಮಾಡುವುದರಿಂದ ಮನಸ್ಸನ್ನು ನಿಗ್ರಹಿಸಲು ಸಹಕಾರಿಯಾಗುತ್ತದೆ. ದ್ವೇಷ, ಅಸೂಯೆ, ಅಹಂಕಾರ, ದ್ರೋಹ,ಕೆಟ್ಟಕಾಮ ವಂಚನೆಯಂತಹ ನಕಾರಾತ್ಮಕ ಕೆಟ್ಟತನವನ್ನು ಸಂಪೂರ್ಣ ನಶಿಸಬೇಕು. ಸದಾ ಸಕಾರಾತ್ಮ ಆಲೋಚನೆ ಮಾಡಬೇಕು. ಪರೋಪಕಾರ ಸ್ನೇಹ, ಸೌಹಾರ್ದತೆ, ಪ್ರೀತಿ ಕರುಣೆಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನಸ್ಸಿದ್ದರೆ ಮಾರ್ಗ, ವಲ್ಲದ ಮನಸ್ಸಿನಿಂದ ಮಾಡಿದರೆ ಹುಲ್ಲು ಕಡ್ಡಿ ಅಲ್ಲಾಡಿಸುವುದು ಕಷ್ಟವೆ ! , ಸಧೃಡ ಮನಸ್ಸಿನಿಂದ ಇಷ್ಟಪಟ್ಟು ಮಾಡಿದರೆ ಬೆಟ್ಟದಷ್ಟು ಕೆಲಸವೂ ಸಲಿಸು.
ಕಹಿ ಘಟನೆಗಳಿಂದ ಕೊರಗುತ್ತಾ ಕೂರಬಾರದು. ಅದನ್ನು ಅನುಭವದ ಪಾಠ ವಾಗಿಸಿಕೊಂಡು ಸ್ಫೂರ್ತಿಯಿಂದ ಮುನ್ನೆಡೆಯಬೇಕು.
ಅವರು ಹಾಗೆಂದರು ಇವರು ಈಗೆಂದರು ಎಂದು ಮನಸ್ಸು ಮುದುಡಿಸಿಕೊಳ್ಳಬಾರದು.ಬೇಡವಾದದ್ದು ತುಂಬಿಕೊಂಡು ಮನಸ್ಸನ್ನು ಕಸದ ತೊಟ್ಟಿ ಮಾಡಿಕೊಳ್ಳಬಾರದು. ಬೇಡವಾದದ್ದು ತೆಗೆದುಹಾಕಿ ಬೇಕಾದಕ್ಕೆ ಜಾಸ್ತಿ ಜಾಗ ಮಾಡಿಕೊಂಡಾಗ ಮನಸ್ಸು ಸವಿಬನವಾಗುತ್ತದೆ
ಮನಸ್ಸು ಸೋಮಾರಿತ ಉದಾಸಿನದಿಂದ ಜಡ್ಡುಗಟ್ಟರಬಾರದು, ಪ್ರತಿಕ್ಷಣವು ಚೈತನ್ಯಭರಿತವಾಗಿಟ್ಟುಕೊಳ್ಳಬೇಕು. ಮನಸ್ಸು ಪ್ರಫುಲಿತವಾಗಿರಬೇಕಾದರೆ ಕನಿಷ್ಠ ಏಳರಿಂದ ಎಂಟು ಗಂಟೆ ನಿದ್ರೆ ಮಾಡಬೇಕು. ಚಿಂತೆಯಿಂದ ಚಿತ್ತವನ್ನು ಚಿತೆಯಾಗಿಸಬಾರದು. ಚಿಂತೆಯನ್ನು ಚಿಂತನೆಯಾಗಿ ಅರಳಿಸಿ ಸಂತೃಪ್ತ ಜೀವನ ಮಾಡಬೇಕು.ದೇಹದ ಆರೋಗ್ಯದಂತೆ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನಸ್ಸು ಮನಸ್ಸುಗಳ ಮಧ್ಯೆ ಮುನಿಸು ಮನಸ್ತಾಪವಾಗದಂತೆ ಸಂತಸದಿ ಒಳಿತು ಒಲಮೆಯಲಿ ಬೆರೆತು ನಲಿಯೋಣ.

Leave a Reply

Your email address will not be published. Required fields are marked *

Optimized by Optimole
error: Content is protected !!