Headlines

ಮಹಿಳೆಯ ಜೊತೆಗೆ ಆಕೆಯ ಇಬ್ಬರು ಮಕ್ಕಳನ್ನು ಸೇತುವೆ ಮೇಲಿಂದ ನದಿಗೆ ತಳ್ಳಿದ ಪ್ರೀಯತಮ!! ಪೈಪನ್ನು ಹಿಡಿದುಕೊಂಡು ಬದುಕುಳಿದ ಹದಿಮೂರರ ಬಾಲಕಿ!!

ಹರಸಾಹಸ ಪಟ್ಟು ಬದುಕುಳಿದ ಹದಿಮೂರು ವರ್ಷದ ಬಾಲಕಿ ಕೀರ್ತನಾ!

ಸೆಲ್ಫಿ ನೆಪದಲ್ಲಿ ಮಹಿಳೆ, 1 ವರ್ಷ ಹಾಗೂ 13 ವರ್ಷದ ಮಕ್ಕಳನ್ನು ಮಹಿಳೆಯ ಲಿವ್ ಇನ್ ಪಾರ್ಟ್‌ನರ್ ತುಂಬಿ ಹರಿಯುತ್ತಿದ್ದ ನದಿಯ ಸೇತುವೆಯಿಂದ ತಳ್ಳಿದ್ದು, ಘಟನೆಯಲ್ಲಿ 13ರ ಬಾಲಕಿ ಪವಾಡಸದೃಶದಂತೆ ತನ್ನ ಪ್ರಾಣ ಉಳಿಸಿಕೊಂಡಿರುವ ಘಟನೆ …

ಆಂಧ್ರದ ಗುಂಟೂರಿನಲ್ಲಿ ಗಂಡನಿಂದ ದೂರವಾದ ಮಹಿಳೆಯ ಜೋತೆಗೆ ವ್ಯಕ್ತಿಯೊಬ್ಬ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನಂತೆ ಹೀಗೆ ದೂಡಿಕೊಂಡು ನಡೆಯುತ್ತಿದ್ದ ಇವರ ಜೀವನ ಇತ್ತೀಚೆಗೆ ಆತನ ನಿತ್ಯ ಉಪಟಳ ಹಿಂಸಾ ಪ್ರವೃತ್ತಿಯಿಂದ ನಲುಗಿ ಹೊಗಿದ್ದಳಂತೆ ಮಹಿಳೆ ಆತನು ಈಕೆಯಿಂದ ದೂರವಾಗಿ ತನ್ನ ನಿರಂತರ ಅಕ್ರಮ ಸಂಬಂಧಕ್ಕೆ ಬ್ರೇಕ್ ಹಾಕಲು ಮುಂದಾಗಿ ಅ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಸಾಯಿಸುವ ಪ್ಲಾನ್ ಮಾಡಿದ್ದಾನೆ.
ಆ ಮಹಿಳೆ ಸೇರಿದಂತೆ ಆಕೆಯ ಒಂದು ವರ್ಷದ ಮಗು ಹಾಗೂ ಹದಿಮೂರು ವರ್ಷದ ಬಾಲಕಿಯನ್ನು ಉಪಾಯವಾಗಿ ಕರೆದುಕೊಂಡು ಹೋಗಿ ಸೇತುವೆಯಿಂದ ಕೆಳಕ್ಕೆ ತಳ್ಳಿದ ತಳ್ಳಿದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ತಾಯಿ ಹಾಗೂ ಒಂದು ವರ್ಷದ ಮಗು ನದಿಯ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾದರೆ ಹದಿಮೂರು ವರ್ಷದ ಬಾಲಕಿ ಮಾತ್ರ ಪವಾಡವೆಂಬತೆ ನದಿಗೆ ಬೀಳುವ ಸಂಧರ್ಭದಲ್ಲಿ ಸೇತುವೆಗೆ ಅಳವಡಿಸಿದ ಪೈಪನ್ನು ಹಿಡಿದು ಕೊಂಡು ಸಾಕಷ್ಟು ಸಮಯ ನೇತಾಡಿ ಪೋಲಿಸರ ಕಾರ್ಯಚರಣೆಯಿಂದ ಬದುಕುಳಿದಿದ್ದಾಳೆ. ತಾನು ಒಂದು ಕೈಯಲ್ಲಿ ಪೈಪ್ ಹಿಡಿದುಕೊಂಡು ನೇತಾಡುತ್ತಲೆ ಬಾಲಕಿ ಮತ್ತೊಂದು ಕೈಯಿಂದ ತನ್ನ ಜೇಬಿನಲ್ಲಿದ್ದ ಅಮ್ಮನ ಮೊಬೈಲ್ ಅನ್ನು ಹೊರತೆಗೆದುಕೊಂಡು ಪೊಲೀಸರಿಗೆ ಕರೆ ಮಾಡಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ವಿವರ:

ಗಂಡನಿಂದ ದೂರವಾದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಹೇಗೋ ಸಂಸಾರ ಸಾಗಿಸುತ್ತಿದ್ದರು ಆದರೆ ಮಹಿಳೆ ಪಾಲಿಗೆ ಯಮನ ರೂಪದಲ್ಲಿ ಬಂದ ಕಿರಾತಕನೊಬ್ಬ ಆಕೆಯನ್ನು ಬಲೆಗೆ ಬೀಳಿಸಿಕೊಂಡು ಲೀವ್ ಇನ್ ಪಾರ್ಟ್ನರ್ ಆಗಿ ತನ್ನ ತೆವಲು ತೀರಿಸಿಕೊಳ್ಳುತ್ತಿದ್ದ ಹೊಸದರಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದವನಿಗೆ ಯಾಕೊ ಆಕೆ ಸಾಕೆನಿಸಿದ್ದಾಳೆ. ನಂತರ ಇವರುಗಳಿಗೆ ಬದಕು ನರಕವಾಗಿ ಬದಲಾಯಿತು. ಮೂವರಿಗೆ ಚಿತ್ರಹಿಂಸೆ ಕೊಡಲು ಮುಂದಾಗಿದ್ದನಂತೆ.!

ಗುಂಟೂರು ಜಿಲ್ಲೆಯ 36 ವರ್ಷದ ಪುಪ್ಪಾಲ ಸುಹಾಸಿನಿಗೆ ಇಬ್ಬರು ಮಕ್ಕಳು.ಹದಿಮೂರು ವರ್ಷದ ಕೀರ್ತನಾ ಹಾಗೂ ಒಂದು ವರ್ಷದ ಹೆಣ್ಣು ಮಗು ಜೆರ್ಸಿ ಗಂಡನಿಂದ ದೂರವಾಗಿದ್ದ ಪುಪ್ಪಾಲ ಸುಹಾಸಿನಿಗೆ  ಉಲವಾ ಸುರೇಶ್ ಅನ್ನೋ ವ್ಯಕ್ತಿಯ ಪರಿಚಯವಾಗಿತ್ತು. ಸುರೇಶನ ಪ್ರೀತಿಯ ನಾಟಕಕ್ಕೆ ಸುಹಾಸಿನಿ ಮನಸ್ಸು ಬದಲಾಯಿಸಿ ಆತನ ಪ್ರೀತಿಯ ಸುಳಿಗೆ ಸಿಲುಕಿದ್ದಳು. ಬಳಿಕ ಲೀವ್ ಇನ್ ರಿಲೇಶನ್‌ಶಿಪ್ ನಲ್ಲಿ ಸಂಬಂಧ ನಿರಂತರವಾಗಿ ಮುಂದುವರಿಯಿತು.
ಪ್ರೀತಿಯ ನಾಟಕವಾಡಿ ತನ್ನ ಆಸೆಗಳನ್ನು ತೀರಿಸಿಕೊಂಡ ಉಲವಾ ಸುರೇಶನಿಗೆ ಇತ್ತೀಚೆಗೆ ಆಕೆ ಬೇಡವಾಗಿದ್ದಾಳೆ. ಬಳಿಕ ಹಿಂಸಿಸಲು ಮುಂದಾಗಿದ್ದಾನೆ. ಹೀಗಾಗಿ ಪದೇ ಪದೇ ಸಣ್ಣ ಸಣ್ಣ ವಿಚಾರಕ್ಕೆ ಜಗಳವಾಗುತ್ತಿತ್ತು.ಇದಕ್ಕೊಂದು ಕೊನೆ ಮಾಡಲು ಸುರೇಶ ಮೊಹರ್ತ ಫೀಕ್ಸ್ ಮಾಡಿದ್ದ ಪಿಕ್ನಿಕ್ ಎಂದು ಭಾನುವಾರ ಇಬ್ಬರು ಮಕ್ಕಳು ಹಾಗೂ ಸುಹಾಸಿನಿಯನ್ನು ಕರೆದುಕೊಂಡು ಹೋಗಿದ್ದ ಸುರೇಶ್, ಹತ್ಯೆಗೆ ಸ್ಕೆಚ್ ಹಾಕಿದ್ದ. ಹಗಲು ಎಲ್ಲಾ ಸುತ್ತಾಡಿಸಿ ತಿನ್ನಿಸಿ ಭಾನುವಾರ ಬೆಳಗಿನ ಜಾವ ಹೋಗುವ ಹಾದಿಯಲ್ಲಿ ಗೋದಾವರಿ ನದಿಯ ಸೇತುವೆ ಮೇಲೆ ಕಾರು ನಿಲ್ಲಿಸಿದ್ದಾನೆ  ಸುರೇಶ ನಾವೆಲ್ಲರೂ ಸೆಲ್ಫಿ ಫೋಟೊ ತೆಗೆದುಕೊಳ್ಳೋಣ ಎಂದಿದ್ದಾನೆ

ಕಾರಿನಿಂದ ಇಳಿದ ಸುಹಾನಿಸಿ  ಹಾಗೂ ಇಬ್ಬರು ಮಕ್ಕಳನ್ನು ನಿಲ್ಲಿಸಿ ತಾನು ಫೋಟೋ ತೆಗೆಯುವುದಾಗಿ ಹೇಳಿದ್ದಾನೆ. ಸೇತುವೆಯ ಅಂಚಿನಲ್ಲಿ ಮೂವರನ್ನು ನಿಲ್ಲಿಸಿದ್ದಾನೆ ಒಂದು ವರ್ಷದ ಪುತ್ರಿಯನ್ನು ಹಿಡಿದುಕೊಂಡು ಸುಹಾನಿಸಿ ನಿಂತಿದ್ದರೆ ಪಕ್ಕದಲ್ಲಿ 13 ವರ್ಷದ ಕೀರ್ತನಾ ತಾಯಿ ಜೊತೆ ನಿಂತಿದ್ದಾಳೆ ಸುರೇಶ ಫೋಟೋ ತೆಗೆದ ರೀತಿ ನಾಟಕವಾಡಿ ಹತ್ತಿರ ಬಂದು ಸರಿಯಾಗಿ ನಿಲ್ಲಿಸುವಂತೆ ನಾಟಕವಾಡಿ ಮೂವರನ್ನು ಸೇತುವೆಯಿಂದ ಕೆಳಕ್ಕೆ ತಳ್ಳಿದ್ದಾನೆ ಪಾಪಿ ಸುರೇಶ
ತುಂಬಿ ಹರಿಯುತ್ತಿರುವ ಗೋದಾವರಿ ನದಿಗೆ ತಳ್ಳಿದ ಬೆನ್ನಲ್ಲೇ ಸುರೇಶ್ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಇತ್ತ ಸುಹಾನಿಸಿ ಹಾಗೂ ಕೈಯಲ್ಲಿದ್ದ ಒಂದು ವರ್ಷದ ಕಂದ ತಳ್ಳಿದ ರಭಸಕ್ಕೆ ನದಿಗೆ ಬಿದ್ದಿದ್ದಾರೆ. ಆದರೆ ಹದಿಮೂರು ವರ್ಷದ ಕೀರ್ತನಾ ಕೆಳಕ್ಕೆ ಬೀಳುವ ಸಂದರ್ಭದಲ್ಲಿ ಸೇತುವೆ ಪ್ಲಾಸ್ಟಿಕ್ ಪೈಪ್ ಹಿಡಿದುಕೊಂಡಿದ್ದಾಳೆ.ಕೈಗೆ ಸಿಕ್ಕ ಪೈಪನ್ನು ಬಲವಾಗಿ ಹಿಡಿದುಕೊಂಡು ನೇತಾಡುತ್ತಲೆ ಕೀರ್ತನಾ ತನ್ನ ಜೇಬಿನಲ್ಲಿದ್ದ ಅಮ್ಮನ ಫೋನನ್ನು ನಿಧಾನವಾಗಿ ತೆಗೆದು 100 ನಂಬರ್‌ಗೆ ಕರೆ ಮಾಡಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಬೆಳಗಿನ ಜಾವ 3.50ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ತಕ್ಷಣವೇ ಸ್ಥಳ್ಕಕೆ ಆಗಮಿಸಿದ ಪೊಲೀಸರು ಹದಿಮೂರರ ಬಾಲೆಯನ್ನು ರಕ್ಷಿಸಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿರುವ ಕೀರ್ತನಾ ನಡೆದ ಅಷ್ಟೂ ಘಟನೆಯನ್ನು ಪೋಲಿಸರ ಎದಿರು ವಿವರಿಸಿದ್ದಾಳೆ. ಇತ್ತ ಸುಹಾಸಿನಿ ಹಾಗೂ ಇಂದು ವರ್ಷದ ಮಗು ನದಿಯ ನೀರಿನಲ್ಲಿ ಕಣ್ಮರೆಯಾಗಿದ್ದಾರೆ. ನದಿ ಪಾತ್ರದಲ್ಲಿ ಕಾಣೆಯಾದ ತಾಯಿ ಮತ್ತು ಕಂದಮ್ಮನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇತ್ತ ಆರೋಪಿ ಸುರೇಶ್ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೋಲಿಸರು ಬಲೆ ಬಿಸಿದ್ದಾರೆ.

ಸುಧೀರ್ ವಿಧಾತ, ಶಿವಮೊಗ್ಗ
 

Leave a Reply

Your email address will not be published. Required fields are marked *

Optimized by Optimole
error: Content is protected !!