ಈ ಬಾರಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿ. ನ ಚುನಾವಣೆ ನಿರ್ದೇಶಕ ಸ್ಥಾನಕ್ಕೆ ಸುನೀಲ್ ಕುಮಾರ್ ಎಸ್ ಸ್ಪರ್ಧೆ
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಸಹಕಾರ ಸಂಘಗಳ ಚುನಾವಣೆಗಳು ಹತ್ತಿರವಾಗುತ್ತಿದ್ದು ನಿಧಾನವಾಗಿ ರಂಗೇರುತ್ತಿದೆ ,ಸಹಾಕಾರ ಸಂಘಗಳ ಚುನಾವಣೆಯ ಅಖಾಡಕ್ಕೆ ಇಳಿಯುವ ಸ್ಪರ್ಧಾಕಾಂಕ್ಷಿಗಳ ಸಂಖ್ಯೆಯೂ ಈ ಬಾರಿ ಜೋರಾಗಿದೆ. ಅದರಲ್ಲೂ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಯುವಕರ ಸಂಖೆ ಹೆಚ್ಚಾಗಿದೆ.ಆಯಾ ಸಹಕಾರ ಸಂಘಗಳ ಸದಸ್ಯರಿಗೆ ಅನುಗುಣವಾಗಿ ನಿರ್ದೇಶಕರ ಚುನಾವಣೆ ನಡೆಯುತ್ತಿದ್ದು , ಈ ಹಿನ್ನೆಲೆಯಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿ. ನ ಚುನಾವಣೆ ಕೂಡ ನಡೆಯಲಿದ್ದು ಈ ಬಾರಿ ಸಾಕಷ್ಟು ಮಂದಿ ಸ್ಫರ್ಧಾ ಆಕಾಂಕ್ಷಿಗಳಾಗಿ ಚುನಾವಣೆಯ ಅಖಾಡಕ್ಕೆ ಇಳಿಯಲು ಅಣಿಯಾಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕಾಗಿ ಸ್ನೇಹ ಜೀವಿ ಸುನೀಲ್ ಕುಮಾರ್ ಎಸ್. ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದು. ಸೇವೆಯನ್ನೇ ಆಧಾರವಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದಿರುವ ಇವರು ಈ ಬಾರಿ ಬಿಸಿಎಂ “3ಬಿ” ವಿಭಾಗದಿಂದ ಸ್ಪರ್ಧೆ ಮಾಡಲಿದ್ದಾರೆ.
ಸುನೀಲ್ ಕುಮಾರ್ ಎಸ್, ಅವರು ಈ ಹಿಂದೆ
ನೆಹರು ರೋಡ್ ನಲ್ಲಿದ್ದ ಶಿವಮೊಗ್ಗ ಫ್ರೂಟ್ಸ್ ಸ್ಟಾಲ್ ನ ಮಾಲಿಕರು, ಮುನ್ಸಿಪಲ್ ಸದಸ್ಯರಾಗಿದ್ದ ಹೆಸರಾಂತ ವ್ಯಕ್ತಿ ದಿವಂಗತ ಎಸ್ ಆರ್ ಶಿವಾಜಿ ರಾವ್ ಅವರ ಮೊಮ್ಮಗ, ಹಾಲಿ ರೋವರ್ಸ್ ಕ್ಲಬ್ ನಿರ್ದೇಶಕ, ಕೋಟೆ ಶ್ರೀ ಮಾರಿಕಾಂಬಾ ಸಮಿತಿ ಮತ್ತು ರಾಮಣ್ಣ ಶೆಟ್ಟಿ ಪಾರ್ಕ್ ಸಮಿತಿಯ ನಿರ್ದೇಶರಾಗಿದ್ದರೆ.ಪ್ರಮುಖವಾಗಿ ಹೆಸರಾಂತ SRS ಬೋರ್ ವೇಲ್ಸ್ ನ ಮಾಲೀಕರಾಗಿದ್ದು ಹೀಗೆ ಹತ್ತು ಹಲವು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡಿದ ಅನುಭವ ಕೂಡ ಇವರಿಗಿದೆ. ಅಷ್ಟೇ ಅಲ್ಲದೇ ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ನಿರ್ದೇಶಕರಾಗಿ ಪ್ರತಿ ವರ್ಷವೂ ಮಾರಿಕಾಂಬಾ ಜಾತ್ರೆಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಜಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆಯಲು ಸಮಿತಿಯ ಹಿರಿಯರ ಜೊತೆಗಿದ್ದು ಕೆಲಸ ಮಾಡಿರುವ ಹಿರಿಮೆ ಇವರದಾಗಿದೆ. ರಾಜಕೀಯವಾಗಿಯೂ ತಮ್ಮನ್ನು ಗುರುತಿಸಿಕೊಂಡು ತಮ್ಮ ವಾರ್ಡಿನ ಅಭಿವೃದ್ಧಿ ಕಾರ್ಯದಲ್ಲಿ ಜನಪ್ರತಿ ನಿಧಿಗಳ ಜೋತೆಗೆ ಕೈಜೋಡಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಒಂದಿಷ್ಟು ಕೆಲಸ ಮಾಡುವ ಹಂಬಲದಿಂದ ಬರಲಿರುವ “ಸಿಟಿ ಕೋ ಆಪರೇಟಿವ್ ಬ್ಯಾಂಕ್”ನ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ಚುನಾವಣೆಯ ಕಣಕ್ಕಿಳಿಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ತಾವು ಗೆದ್ದು ಬಂದರೆ ಬ್ಯಾಂಕಿನ ಅಭಿವೃದ್ಧಿಯ ಕೆಲಸದಲ್ಲಿ ಉಳಿದ ಸದಸ್ಯರ ಜೋತೆಗೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ.ಬ್ಯಾಂಕಿನ ಸದಸ್ಯರಿಗೆ ಬ್ಯಾಂಕಿನಿಂದ ಸಿಗಬೇಕಾದ ಸೌಲಭ್ಯಗಳ ಜೋತೆಗೆ ಸಾಲ ಕೊಡಿಸುವುದು, ಉಳಿದಂತೆ ಸದಸ್ಯರ ಅಭಿವೃದ್ಧಿಗೆ ಶ್ರಮಿಸುವುದು. ಪ್ರತಿಯೊಬ್ಬ ಸದಸ್ಯರ ಜೋತೆ ಸೇರಿಕೊಂಡು ಬ್ಯಾಂಕ್ ಅನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಬಯಕೆಯನ್ನು ಸುನೀಲ್ ಕುಮಾರ್.ಎಸ್. ಬಯಸಿದ್ದಾರೆ.
ಹೀಗಾಗಿ ಬರಲಿರುವ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ನಾನು ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿದ್ದು ಸಹಕಾರಿ ಬಂಧುಗಳಾದ ಬ್ಯಾಂಕ್ ನ ಸದಸ್ಯರು ತಮ್ಮ ಅಮೂಲ್ಯವಾದ ಮತ ನೀಡಿ ಸಹಕಾರಿ ಕ್ಷೇತ್ರದಲ್ಲಿಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ನನಗೊಂದು ಅವಕಾಶ ಕೊಡುವುದರ ಜೊತೆಗೆ ಸಲಹೆ ಸಹಕಾರ ನೀಡಬೇಕೆಂದು ಪ್ರತಿಯೊಬ್ಬ ಸದಸ್ಯರಲ್ಲೂ ಮನವಿ ಮಾಡಿರುತ್ತಾರೆ