ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತಿಯ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಬಲ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದ್ದಾರೆ.
ಗೆಲುವು ಸಾಧಿಸಿದ ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿ ಸುಬ್ರಮಣ್ಯ ಬಲ್ಯಾಯ
ಸುಬ್ರಹ್ಮಣ್ಯ ಬಲ್ಯಾಯ ಒಟ್ಟು 499 ಮತಗಳನ್ನು ಪಡೆದು ಗೆಲುವಿನ ನಗೆ ಬಿರಿದರೆ ಇಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು. ಈ ಹಿಂದೆ ಗೆಲುವು ಸಾಧಿಸಿದ್ದ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಪುತ್ತೂರಿನ ನಿಡ್ಪಳ್ಳಿ ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶವೂ ಹೊರಬಿದ್ದಿದ್ದು ಕಾಂಗ್ರೆಸ್ಸಿನ ಸತೀಶ್ ಶೆಟ್ಟಿ 235 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಇಲ್ಲೂ ಕೂಡಾ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಪುತ್ತಿಲ ಪರಿವಾರದ ಅಭ್ಯರ್ಥಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಪುತ್ತೂರಿನ ಎರಡೂ ಕಡೆ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಮತ್ತೊಮ್ಮೆ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಪುತ್ತಿಲ ಪರಿವಾರ
ವಿಧಾನಸಭಾ ಸೋಲಿನಿಂದ ಮತ್ತಷ್ಟು ಗಟ್ಟಿಯಾದ ಅರುಣ್ ಕುಮಾರ್ ಪುತ್ತಿಲ ದಿನದಿಂದ ದಿನಕ್ಕೆ ಕರಾವಳಿ ಭಾಗದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದ್ದಾರೆ.ಪ್ರಬಲ ಹಿಂದೂ ಮುಖಂಡರಾಗಿರುವ ಅರುಣ್ ಕುಮಾರ್ ಪುತ್ತಿಲ ಬಿಜೆಪಿಯವರ ಪಾಲಿಗೆ ಉರುಳಾಗುತ್ತಿದ್ದಾರೆ. ಅದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ ಇದೀಗ ಗ್ರಾಮ ಪಂಚಾಯತಿಯ ಉಪ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸೋಲಿಗೆ ಪುತ್ತಿಲ ನೇರ ಕಾರಣವಾಗಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತಿಯ ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯತಿಯ ತಲಾ ಒಂದೊಂದು ಸ್ಥಾನಕ್ಕೆ ಇತ್ತೀಚೆಗೆ ಉಪ ಚುನಾವಣೆ ನಡೆದಿತ್ತು
ನಿಡ್ಪಳ್ಳಿ ಗ್ರಾಮಪಂಚಾಯತಿಯ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಪುತ್ತಿಲ ಪರಿವಾರ ಯಶಸ್ವಿಯಾಗಿದೆ. ಇದರ ಲಾಭ ಪಡೆದ ಕಾಂಗ್ರೆಸ್
ನಿಡ್ಪಳ್ಳಿ ಗ್ರಾಮಪಂಚಾಯತಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು ದಕ್ಕಿದೆ 235 ಮತಗಳನ್ನು ಪಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ ಗೆಲುವಿನ ನಗೆ ಬಿರಿದ್ದಾರೆ.
ಸತೀಶ್ ಶೆಟ್ಟಿ ಅರುಣ್ ಕುಮಾರ್ ಪುತ್ತಿಲ ಪರಿವಾರದ ಜಗನ್ನಾಥ್ ರೈ ವಿರುದ್ಧ ಕೇವಲ 27 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಪುತ್ತಿಲ ಪರಿವಾರದ ಅಭ್ಯರ್ಥಿ ಸ್ಪರ್ಧೆ ಹಿನ್ನೆಲೆಯಿಂದ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಆರ್ಯಾಪು ಗ್ರಾಮ ಪಂಚಾಯತಿಯ ಉಪ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಪರಿವಾರದಿಂದ ಸುಬ್ರಮಣ್ಯ ಬಲ್ಯಾಯ ಅಖಾಡಕ್ಕೆ ಇಳಿದಿದ್ದರು. ಸುಬ್ರಮಣ್ಯ ಬಲ್ಯಾಯ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು ದಾಖಲಿ ವಿಜಯದ ನಗೆ ಬಿರಿದ್ದಾರೆ
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೆರ ಸ್ಪರ್ಧೆ ಏರ್ಪಡುತ್ತಿತ್ತು. ಇದೀಗ ಪುತ್ತಿಲ ಪರಿವಾರದ ಸದಸ್ಯರು ಕರಾವಳಿ ಭಾಗದಲ್ಲಿ ಎಲ್ಲಾ ಚುನಾವಣೆಯಲ್ಲು ಪುತ್ತಿಲ ಪರಿವಾರದಿಂದ ಸ್ಪರ್ಧಿಸಲು ತಯಾರಿ ನೆಡೆಸುತ್ತಿದ್ದಾರೆ. ಈ ಹಾದಿಯಲ್ಲಿ
ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಮ ಪಂಚಾಯತಿಯ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಸ್ಪರ್ಧೆಯಿಂದಾಗಿ ಕರಾವಳಿ ಭಾಗದಲ್ಲಿ ಪ್ರಬಲವಾಗಿ ಬೇರು ಬಿಟ್ಟಿದ್ದ ಬಿಜೆಪಿ ತನ್ನ ವರ್ಚಸ್ಸನ್ನು ಕಳೆದು ಕೊಳ್ಳುವಂತಾಗಿದೆ.ಇದಕ್ಕೆ ಉದಾಹರಣೆ ಈ ಗ್ರಾಮಪಂಚಾಯತಿಯ ಉಪ ಚುನಾವಣೆಯಲ್ಲು ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ
ಇದರಿಂದ ಮತ್ತಷ್ಟು ಗಟ್ಟಿಯಾದ ಪುತ್ತಿಲ ಆರ್ಯಾಪು ಮತ್ತು ನಿಡ್ಪಳ್ಳಿ ಚುನಾವಣೆಯಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ನನಗಾಗಿ ನಮ್ಮವರಿಗಾಗಿ ದುಡಿದ ಪ್ರತಿಯೊಬ್ಬ ಕಾರ್ಯಕರ್ತರಿಗೂ. ಸಹೋದರ ಸಹೋದರಿಯರಿಗೂ.ನನ್ನ ಎಲ್ಲಾ ಆತ್ಮೀಯರಿಗೂ ಮತ್ತು ಮತದಾನ ಮಾಡಿದ ಮತದಾರ ಬಂಧುಗಳಿಗೆ ಅನಂತ ಅನಂತ ಧನ್ಯವಾದಗಳು ಎಂದು ಅರುಣ್ ಕುಮಾರ್ ಪುತ್ತಿಲ ಅವರು ನೇರವಾಗಿಯು ಮತ್ತು ಸೋಶಿಯಲ್ ಮೀಡಿಯಾದಲ್ಲು ಬರೆದುಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದ ಸೋಲಿನ ನಂತರ ಪುತ್ತಿಲ ಮತ್ತಷ್ಟು ಗಟ್ಟಿಯಾಗುತ್ತಿದ್ದಾರೆ. ನಿತ್ಯ ತನ್ನ ಕ್ಷೇತ್ರದ ಎಲ್ಲೆಡೆ ಸಂಚರಿಸಿ ನೊಂದವರಿಗೆ ಧ್ವನಿಯಾಗುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬರಿಗೂ ಅಣ್ಣನಾಗಿ.ತಮ್ಮನಾಗಿ ಬಂಧು ಮಿತ್ರನಾಗಿ ಮತ್ತು ಮನೆಯ ಮಗನಂತೆ ಸ್ಪಂದಿಸುವ ವ್ಯಕ್ತಿಯಾಗಿ ಅರುಣ್ ಕುಮಾರ್ ಪುತ್ತಿಲ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಇನ್ನೇನು 2024 ರ ಲೋಕಸಭಾ ಚುನಾಣೆಗೆ ಪುತ್ತಿಲ ಸ್ಫರ್ಧಿಸಿದ್ದೆ ಅದರೆ ಗೆಲುವು ಗ್ಯಾರಂಟಿ ಎನ್ನುವ ಮಟ್ಟಕ್ಕೆ ಇವರ ವರ್ಚಸ್ಸು ಹೆಮ್ಮರವಾಗಿ ಬೆಳೆದು ನಿಂತಿದೆ. ಕರಾವಳಿ ಭಾಗದಲ್ಲಿ ಅರುಣ್ ಕುಮಾರ್ ಪುತ್ತಿಲ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೊದಂತೆ ಪ್ರಬಲವಾಗಿ ಬೇರೂರಿದ್ದ ಬಿಜೆಪಿ ವರ್ಚಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಗುತ್ತದೆ.
ಅದೇನೆ ಇರಲಿ ಹಿಂದೂ ಮುಖಂಡನಾಗಿ.ತನ್ನ ಕ್ಷೇತ್ರದ ಮನೆ ಮಗನಾಗಿ ಎಲ್ಲರ ಪ್ರೀತಿಯ ಪುತ್ತಿಲನಾಗಿ ಪುತ್ತಿಲ ಪರಿವಾರದ ಮೂಲಕ ಜನಸೇವೆಗೆ ಮುಂದಾಗಿರುವ ಅರುಣ್ ಕುಮಾರ್ ಪುತ್ತಿಲ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ
ಸುಧೀರ್ ವಿಧಾತ, ಶಿವಮೊಗ್ಗ