ಶರತ್ ಭೂಪಾಳಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ಘಾಟನೆ
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರದ ಪಿಳ್ಳಂಗಿರಿಯ ಗ್ರಾಮದಲ್ಲಿ ಸರಕಾರಿ ಶಾಲೆಯನ್ನು ರೌಂಡ್ ಟೇಬಲ್ ಇಂಡಿಯಾ 166 ಶಿವಮೊಗ್ಗ ಘಟಕ ಹಾಗೂ ದಾನಿಗಳ ಸಹಾಯದಿಂದ
ಯುವ ಕೈಗಾರಿಕೋದ್ಯಮಿ ದಿವಂಗತ ಶ್ರೀ ಶರತ್ ಭೂಪಾಳಂ ಅವರ ಸ್ಮರಣಾರ್ಥವಾಗಿ ಅಭಿವೃದ್ಧಿಗೊಳಿಸಿ ಶಾಲೆಗೆ ಶರತ್ ಭೂಪಾಳಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ನಾಮಕರಣ ಮಾಡಿ ಭಾನುವಾರ ಶಾಲೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು.
ನೂತನ ಕೊಠಡಿ ಹಾಗೂ ಶೌಚಾಲಯದ ಊದ್ಘಾಟನೆಯನ್ನು
ನೂತನ ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಧನಂಜಯ ಸರ್ಜಿ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ದಿವಂಗತ ಶರತ್ ಭೂಪಾಳಂ ಅವರ ತಂದೆ ಶ್ರೀ ಶಶಿಧರ್ ಭೂಪಾಳಂ ಅವರು ನೆರವೇರಿಸಿದರು.
ವೇದಿಕೆಯಲ್ಲಿ ರೌಂಡ್ ಟೇಬಲ್ 13 ವಲಯದ ಅಧ್ಯಕ್ಷರಾದ ಶ್ರೀ ದೇವನಂದನ್, ಕಾರ್ಯದರ್ಶಿಗಳಾದ ಶುಶ್ರುತ್, ಶಿವಮೊಗ್ಗ ರೌಂಡ್ ಟೇಬಲ್ 166ರ ಛೇರ್ಮನ್ ವಿಶ್ವಾಸ್ ಕಾಮತ್ , ಕಾರ್ಯದರ್ಶಿ ಈಶ್ವರ್ ಸರ್ಜಿ,
ಯೋಜನಾ ನಿರ್ದೇಶಕರಾದ ವಿನಯ್ ಟಿ.ಆರ್, ಪಿಳ್ಳಂಗಿರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸತೀಶ್, ಪಿಳ್ಳಂಗಿರಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಗಣೇಶ್ , ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಶಾಲಾಕ್ಷಿ ಎಸ್.ಎನ್, ಶ್ರೀಮತಿ ಸಂಗೀತ ಭೂಪಾಳಂ , ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.