ನಾಳೆ (ಮೇ,7) ನೆಡೆಯಲಿರುವ ಮತದಾನದ ಹಿನ್ನಲೆಯಲ್ಲಿ ಮತಯಂತ್ರ-ಪರಿಕರ ಗಳೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ಮತಗಟ್ಟೆಗೆ ತೆರಳಿದ ಅಧಿಕಾರಿಗಳು
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಬೈಂದೂರು: ನಾಳೆ ಎರಡನೇ ಹಂತದ ಮತದಾನಕ್ಕೆ ಕರುನಾಡು ಸಜ್ಜಾಗಿನಿಂತಿದೆ.ಅದರಲ್ಲೂ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವೆಂದೆ ಬಿಂಬಿತವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಫರ್ದೆ ಎನ್ನುವಂತೆ ಕಾಣುತ್ತಿದ್ದರು ಮತದಾರರ ಒಳ ಮರ್ಮ ಅರಿಯಲು ಸಾಧ್ಯಾವಾಗುತ್ತಿಲ್ಲ ಒಂದು ಐದು ಗ್ಯಾರಂಟಿಯ ಅಬ್ಬರವಾದರೆ ಇನ್ನೊಂದು ಕಡೆ ಅಭಿವೃದ್ಧಿ ಮತ್ತು ಹಿಂದುತ್ವದ ಭಜನೆ ಬಿಜೆಪಿ ಬಳಗದಲ್ಲಿ ಮೊಳಗುತ್ತಿದೆ ಇನ್ನೂ ಮಗನಿಗೆ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಪಕ್ಷದಿಂದ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರಣಕಹಳೆ ಮೊಳಗಿಸಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ನಾನು ಕಟ್ಟಾ ಹಿಂದುತ್ವವಾದಿ ಎಂದು ಕ್ಷೇತ್ರದೆಲ್ಲೆಡೆ ಮತದಾರನ ಮನ ಮುಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತದಾನ ನಾಳೆ ನೆಡೆಯಲಿದ್ದು ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಬೈಂದೂರು ವಿಧಾನಸಭಾ ಕ್ಷೇತ್ರದ ಡಿಮಸ್ಟ್ರಿಂಗ್ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತಯಂತ್ರ ಸೇರಿದಂತೆ ಮತ್ತಿತರ ಪರಿಕರಗಳನ್ನು ಪಡೆದು ಸೋಮವಾರ ಮತಗಟ್ಟೆಗೆ ತೆರಳಿದರು.
ಮಂಗಳವಾರ ಮತದಾನ ಪ್ರಕ್ರಿಯೆ ನಡೆಯಲಿದ್ದು ಸೋಮವಾರ ಬೆಳಿಗ್ಗೆ ನಿಂದ ಮತಯಂತ್ರಗಳನ್ನು ಸಂಬಂದಪಟ್ಟವರಿಗೆ ವಿತರಿಸುವ ಕಾರ್ಯ ನಡೆದಿದ್ದು ಮಧ್ಯಾಹ್ನದ ವೇಳೆ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳ ಸಹಿತ ಪೊಲೀಸರು ಆಯಾಯ ಮತಗಟ್ಟೆಗೆ ತೆರಳಿದರು.
ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಕೆ., ಉಪವಿಭಾಗದ ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್. ಹಾಗೂ ಸಂಬಂದಪಟ್ಟ ಅಧಿಕಾರಿಗಳಿದ್ದರು.