ಕೌಶಲ್ಯ ಅಭಿವೃದ್ದಿ ಪ್ರಾಧಿಕಾರದ ಮುಖಾಂತರ ದುಡಿಯುವ ಕೈಗಳಿಗೆ ಕೌಶಲ್ಯ ತರಬೇತಿ ನೀಡುವ ಕಾರ್ಯವನ್ನು ನಿರಂತರವಾಗಿ ಮೋದಿ ಸರ್ಕಾರ ಮಾಡುತ್ತಿದೆ : ಬಿಜೆಪಿ ಲೋಕಸಭಾ ಅಭ್ಯರ್ಥಿ ಸಂಸದ ಬಿ ವೈ ರಾಘವೇಂದ್ರ
ASHWASURYA/SHIVAMOGGA
ಸುಧೀರ್ ವಿಧಾತ ಸಾರಥ್ಯದಲ್ಲಿ….
ಅಶ್ವಸೂರ್ಯ/ಶಿಕಾರಿಪುರ : ಯುವಕರಿಗೆ ಕೌಶಲ್ಯ ನೀಡುವ ಕಾರ್ಯಕವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಏರ್ಪಡಿಸಿದ್ದ ಯುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವಕರ ಶ್ರೇಯೋಭಿವೃದ್ದಿಗಾಗಿ ಹಾಗೂ ಯುವ ಸಮುದಾಯ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವಂತಾಗಲು ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಕೌಶಲ್ಯ ಅಭಿವೃದ್ದಿ ಪ್ರಾಧಿಕಾರದ ಮುಖಾಂತರ ದುಡಿಯುವ ಕೈಗಳಿಗೆ ಕೌಶಲ್ಯ ತರಬೇತಿ ನೀಡುವ ಕಾರ್ಯವನ್ನು ನಿರಂತರವಾಗಿ ಮೋದಿ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಸಮಾಜವನ್ನು ಶುದ್ದಿ ಮಾಡುವ ಕಾರ್ಯ ಯುವಸಮುದಾಯದಿಂದ ಮಾತ್ರ ಸಾಧ್ಯ. ನಮ್ಮ ಸಮಾಜದಲ್ಲಿ ಶೇ.65ರಷ್ಟು ಯುವಕರಿದ್ದಾರೆ. ಸ್ವಾತಂತ್ರ್ಯ ನಂತರ 65 ವರ್ಷದಲ್ಲಿ 700 ವಿವಿಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಮೋದಿ ಸರ್ಕಾರ 10 ವರ್ಷದ ಅವಧಿಯಲ್ಲಿ 450 ಹೊಸ ವಿವಿಗಳನ್ನು ಸ್ಥಾಪನೆ ಮಾಡುವ ಮೂಲಕ ಯುವ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ರಾಷ್ಟ್ರದ ಒಟ್ಟು ಉದ್ಯೋಗದಲ್ಲಿ ಶೇ.3ರಷ್ಟು ಸರ್ಕಾರಿ ನೌಕರರಿದ್ದಾರೆ. ಶೇ.10ರಿಂದ15ರಷ್ಟು ಕೃಷಿ ಅವಲಂಬಿಸಿದ್ದಾರೆ. ಶೇ.10ರಷ್ಟು ಯುವಕರು ಖಾಸಗಿ ಸಂಸ್ಥೆ, ಕಾರ್ಖಾನೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಉಳಿದವರಿಗಾಗಿ ಕೌಶಲ್ಯ ನೀಡುವಂತಹ ಕಾರ್ಯವನ್ನು ನಮ್ಮ ಮೋದಿ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಇನ್ನೂ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಮಾತನಾಡಿ..
ಯುವ ಸಮುದಾಯ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಿ.ವೈ.ರಾಘವೇಂದ್ರ ರವರಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಜಯಶಾಲಿಯನ್ನಾಗಿಸಬೇಕು. ಅಂದು ಬೆಳಿಗ್ಗೆ 11 ಗಂಟೆಯೊಳಗೆ ಅತಿ ಹೆಚ್ಚು ಮತದಾನವಾಗಿರಬೇಕು ಎಂದರು
–
ಕಾರ್ಯಕ್ರಮದಲ್ಲಿ ಗುರುಮೂರ್ತಿ, ಹುನುಮಂತಪ್ಪ ಸಂಕ್ಲಾಪುರ, ಪ್ರಶಾಂತ್ ಕುಕ್ಕೆ, ಹುಲ್ಮಾರ್ ಮಹೇಶ್, ಪ್ರವೀಣ್, ಇತರರು ಉಪಸ್ಥಿತರಿದ್ದರು.