ಕೆಎಸ್ ಈಶ್ವರಪ್ಪಗೆ ದೆಹಲಿಗೆ ಬರಲು ಬುಲಾವ್ ನೀಡಿದ ಅಮಿತ್ ಶಾ
ಅಶ್ವಸೂರ್ಯ/ಶಿವಮೊಗ್ಗ
✍️ ಸುಧೀರ್ ವಿಧಾತ
ಶಿವಮೊಗ್ಗ : ಶಿವಮೊಗ್ಗದಲ್ಲಿ ಬಿಜೆಪಿಯ ಬಂಡಾಯದ ಬಾವುಟ ಹಾರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹೊರಟಿರುವ ಬಿಜೆಪಿ ಹಿರಿಯ ನಾಯಕ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪನವರಿಗೆ ದೆಹಲಿಗೆ ಬರುವಂತೆ ಇಂದು ಬೆಂಗಳೂರು ಚುನಾವಣೆಯ ಪ್ರಚಾರಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೋನ್ ಕರೆಮಾಡಿ ದೇಹಲಿಗೆ ಬರುವಂತೆ ಹೇಳಿದ್ದಾರೆ.
ಬೆಂಗಳೂರಿಗೆ ಭೇಟಿ ನೀಡಿರುವ ಅಮಿತ್ ಶಾ ಇಂದು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಜೊತೆಗೆ ರಾಜ್ಯ ನಾಯಕರ ಬಂಡಾಯ ಶಮನಕ್ಕೂ ಮುಂದಾಗಿದ್ದಾರೆ. ರೇಣುಕಾಚಾರ್ಯ ಮತ್ತು ಬಳಗದ ಜೊತೆಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ಇದರ ನಡುವೆ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಯಾರು ಏನೇ ಹೇಳಿದರೂ ನಾನು ಸೊಪ್ಪು ಹಾಕಲ್ಲ. ಶಿವಮೊಗ್ಗದಿಂದ ಸ್ಪರ್ಧಿಸಿಯೇ ಸಿದ್ಧ ಎನ್ನುತ್ತಿರುವ ಈಶ್ವರಪ್ಪ ನವರು ಅಮಿತ್ ಶಾ ಕರೆ ಮಾಡಿದ ಮೇಲೆ ದೆಹಲಿಗೆ ಹೋಗಲು ತಯಾರಾಗಿದ್ದಾರಂತೆ.?
ಇದನ್ನು ಸ್ವತಃ ಈಶ್ವರಪ್ಪನವರೇ ಖಾತ್ರಿಗೊಳಿಸಿದ್ದಾರೆ. ಅಮಿತ್ ಶಾ ದೆಹಲಿಗೆ ಬರಲು ಕರೆ ಮಾಡಿರುವುದು ನಿಜ. ನಾನು ದೆಹಲಿಗೆ ಹೋಗುತ್ತೇನೆ. ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಈಶ‍್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಜೋತೆಗೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯ ಬೇಕೆಂದರೆ ಮೊದಲು ರಾಜ್ಯ ( ಬಿ ವೈ ವಿಜಯೇಂದ್ರ ) ಅಧ್ಯಕ್ಷರನ್ನು ಬದಲಾಯಿಸಿ. ಅವಾಗ ನಾನು ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಇದಕ್ಕೆ ಒಪ್ಪದೆ ಇದ್ದರೆ ನನ್ನ ಸ್ಫರ್ದೆ ಖಚಿತ ಎಂದು ಹೇಳಿದ್ದಾರೆ.!