ನನ್ನ ಹತ್ತಿರ ಬ್ರಹ್ಮ ಬಂದು ಬೇಡ ಅಂದ್ರು ಬಂಡಾಯ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ; ಕೆ ಎಸ್ ಈಶ್ವರಪ್ಪ
ASHWASURYA/SHIVAMOGGA
✍️ SUDHIR VIDHATA
ಅಶ್ವಸೂರ್ಯ/ಶಿವಮೊಗ್ಗ; ನನ್ನ ಬಳಿಗೆ ಬ್ರಹ್ಮ ಬಂದು ಸ್ಫರ್ದೆಯಿಂದ ಹಿಂದೆ ಸರಿ ಅಂದರೂ ನಾನು ಬಂಡಾಯ ಸ್ಪರ್ಧೆಯಿಂದ ಹಿಂದೆ ಸರಿಯೊ ಮಾತೆ ಇಲ್ಲ ಈಗಾಗಲೇ ಚುನಾವಣೆಯ ಅಖಾಡಕ್ಕೆ ಇಳಿದಿದ್ದೇನೆ ಬಿರುಸಿನ ಪ್ರಚಾರದಲ್ಲಿ ನನ್ನ ಬೆಂಬಲಿಗರೊಂದಿಗೆ ತೋಡಗಿದ್ದೇನೆ ಇದು ನನಗೆ ಕೇವಲ ಬಂಡಾಯ ಅಲ್ಲ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ಇದೇ 28ರಂದು ಬೆಳಗ್ಗೆ ನನ್ನ ಚುನಾವಣಾ ಪ್ರಚಾರಕ್ಕೆ ಸಂಬಂದಿಸಿದಂತೆ ಕಾರ್ಯಾಲಯ ಉದ್ಘಾಟನೆ ಇರುತ್ತದೆ. ಕರ್ನಾಟಕದ ಲೋಕಸಭೆ ಚುನಾವಣೆ ಮುಗಿದು ಫಲಿತಾಂಶ ಬಂದ ಒಂದೆರಡು ದಿನದಲ್ಲಿ ಯಡಿಯೂರಪ್ಪನವರ ಮಗ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಕೆ.ಎಸ್. ಈಶ್ವರಪ್ಪ ಗುಡುಗಿದರು.
ಶಿವಮೊಗ್ಗ ತಮ್ಮ ನಿವಾಸದಲ್ಲಿ ಸುದ್ಧಿ ಗೋಷ್ಟಿ ನೆಡೆಸಿ ಮಾತನಾಡಿದ ಅವರು ಶಿವಮೊಗ್ಗಕ್ಕೆ ಬ್ರಹ್ಮ ಬಂದರೂ ಬಂಡಾಯ ವಾಪಸ್ ಪಡೆಯುವುದಿಲ್ಲ ಇದು ಕೇವಲ ಬಂಡಾಯವಲ್ಲ ಚುನಾವಣೆಯನ್ನು ಗೆಲ್ಲುವುದಕ್ಕಾಗಿಯೆ ಸ್ಪರ್ಧೆಗೆ ಇಳಿದಿದ್ದೇನೆ. ಮಾಜಿ ಮುಖ್ಯಮಂತ್ರಿ ಅವರ ಮನೆಯಲ್ಲಿ ಒಬ್ಬರು ಕೇಂದ್ರ ಚುನಾವಣಾ ಸಮಿತಿ ಸದಸ್ಯರು (ಬಿ.ಎಸ್.ಯಡಿಯೂರಪ್ಪ), ಒಬ್ಬ ಎಂಪಿ (ಬಿ.ವೈ. ರಾಘವೇಂದ್ರ) ಹಾಗೂ ಮತ್ತೊಬ್ಬ ಎಂಎಲ್ಎ (ಬಿ.ವೈ. ವಿಜಯೇಂದ್ರ).ಅದೇನು ಯಡಿಯೂರಪ್ಪ ನವರಿಗೆ ಪುತ್ರರಮೇಲೆ ವ್ಯಾಮೋಹವೊ ರಚ್ಚೆ ಹಿಡಿದು ದೊಡ್ಡವನನ್ನು ಎಂಪಿ ಮಾಡಿದರು ಇನ್ನೊಬ್ಬನನ್ನು ತಮ್ಮ ಸ್ಥಾನಕ್ಕೆ ತಂದು ಎಂಎಲ್ಎ ಮಾಡಿದರು ಇಷ್ಟು ಸಾಲದಕ್ಕೆ ಆರು ತಿಂಗಳು ಬಿಜೆಪಿ ವರಿಷ್ಠರನ್ನು ಕಾಡಿಬೇಡಿ ರಚ್ಚೆಹಿಡಿದು ಹಠಮಾಡಿ ಮಗನನ್ನು ವಿಜಯೇಂದ್ರನನ್ನು ಕರ್ನಾಟಕ ರಾಜ್ಯದ ಬಿಜೆಪಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ರಾಜ್ಯದಲ್ಲಿ ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ ಹಾಗೂ ಸದಾನಂದ ಗೌಡ ಎಲ್ಲರಿಗೂ ಅವಮಾನ ಮಾಡಿದ್ದಾರೆ.ಪಕ್ಷ ಕಟ್ಟಿದವರನ್ನು ಪಕ್ಷಕ್ಕಾಗಿ ದುಡಿದವರನ್ನು ದೂರತಳ್ಳಿದ್ದಾರೆ. ಬಿ ವೈ ವಿಜೇಂದ್ರ ರಾಜ್ಯಾಧ್ಯಕ್ಷನಾಗುತ್ತಿದ್ದಂತೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು ಎಂದು ಕಿಡಿಕಾರಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನ್ನ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಅದರಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಬೆಂಬಲವೂ ನನಗೆ ಸಿಗಲಿದೆ. ಬಂಡಾಯ ಸ್ಪರ್ಧೆ ಮಾಡಿ ಗೆದ್ದು ಪ್ರಧಾನಿ ಮೋದಿಗೆ ಬೆಂಬಲ ವ್ಯಕ್ತಪಡಿಸುತ್ತೇನೆ. ಇದೇ 28ರಂದು ಬೆಳಗ್ಗೆ ನನ್ನ ಚುನಾವಣಾ ಪ್ರಚಾರದ ಕಾರ್ಯಾಲಯ ಉದ್ಘಾಟನೆ ಮಾಡುತ್ತೇನೆ. ಮತದಾನದ ದಿನದ ವರೆಗೂ ದಿನೇ ದಿನೇ ನನ್ನ ಬೆಂಬಲಿಗರು ಕಾರ್ಯಕರ್ತರ ಜೋತೆಗೆ ಗೆಲುವಿನತ್ತ ಹೆಜ್ಜೆಹಾಕುತ್ತೇನೆ. ಈಶ್ವರಪ್ಪ ಗೆಲುವಿನೆಡೆ ಹೆಜ್ಜೆಹಾಕುತ್ತಿದ್ದಾರೆ ಎನ್ನುವ ಮಾತು ಕ್ಷೇತ್ರದ ಎಲ್ಲೆಡೆ ಕೇಳಿ ಬರಲಿದೆ. ಮಾ.26ರಂದು ಶಿವಮೊಗ್ಗ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ.
ರಾಜ್ಯ ಬಿಜೆಪಿಯಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳ ಆಯ್ಕೆ ನಡೆದಿಲ್ಲ. ಬಿಎಸ್ ಯಡಿಯೂರಪ್ಪ ನನ್ನ ಮಗನಿಗೆ ಹಾವೇರಿ ಟಿಕೆಟ್ ಕೊಡಿಸುತ್ತೇನೆ ಪ್ರವಾಸ ಮಾಡಿ ಗೆಲ್ಲಿಸುತ್ತೇನೆ ಎಂದಿದ್ದರು. ಟಿಕೆಟ್ ಘೋಷಣೆಗೂ ಮುನ್ನ ರಾಘವೇಂದ್ರ ಅವರು ಕಾಂತೇಶ್ ಅವರಿಗೆ ಫೋನ್ ಮಾಡಿ ದೇವರಾಣೆಗೂ ನಿನಗೆ ಟಿಕೆಟ್ ಸಿಗುತ್ತೆ ಎಂದಿದ್ದರು. ಯಡಿಯೂರಪ್ಪ ನನ್ನ ಮೊಬೈಲ್ ಗೆ ಕರೆ ಮಾಡಿ, ದೆಹಲಿಗೆ ಹೋಗೋಣ ಬಾ ಎಂದರು. ನಾನು ಬರಲ್ಲ ಶೋಭಾನ ಕರೆದುಕೊಂಡು ಹೋಗಿ ಎಂದಿದ್ದೆ. ಈಗ ನೀರಿಗಿಳಿದಿದ್ದೇನೆ ಮಳೆಯಾದರೇನು? ಚಳಿಯಾದರೇನು? ನೇರವಾಗಿ ತೊಡೆ ತಟ್ಟಿ ಅಖಾಡಕ್ಕೆ ಇಳಿದಿದ್ದೇನೆ ಎಂದು ಆಕ್ರೋಶ ಹೊರ ಹಾಕಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಡಮ್ಮಿ ಅಭ್ಯರ್ಥಿ ಹಾಕಿಸಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರಕ್ಕೆ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡಿದ್ದರು. ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರು, ಪಕ್ಷದ ವೇದಿಕೆಯಲ್ಲಿ ನನಗೆ ಚಾಕು ಹಾಕಿದ್ದರು.!? ಪಕ್ಷ ನನ್ನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ. ಎರಡು ತಿಂಗಳಲ್ಲಿ ಚುನಾವಣೆ ಗೆಲ್ಲುತ್ತೇನೆ ಅವರೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಗುಡುಗಿದರು.
ನನ್ನ ಪುತ್ರ ಕಾಂತೇಶ್ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಈಗಲೇ ನಾನು ಚರ್ಚೆ ಮಾಡುವುದಿಲ್ಲ. ಕಾಂತೇಶ್ ಜೊತೆಗೂ ಈ ಬಗ್ಗೆ ಚರ್ಚೆ ಮಾಡಿದ್ದೇನೆ.ಈ ಬಾರಿ ನನಗೆ ಅದೃಶ್ಯ ಮತದಾರರು ನನಗೆ ಬೆಂಬಲ ನೀಡುತ್ತಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ನನಗೆ ಮತ ಕೇಳುತ್ತಾರೆ. ಬಿ.ಎಸ್. ಯಡಿಯೂರಪ್ಪ ಕುಟುಂಬದವರು ನನಗೆ ಮೋಸ ಮಾಡಿದ್ದಾರೆ ಎಂದು ಜನ ನನ್ನನ್ನು ಬೆಂಬಲಿಸುತ್ತಾರೆ. ಅವರ ಕುಟುಂಬದ ವಿರುದ್ಧ ಇರುವ ಅದೃಶ್ಯ ಮತದಾರರು ನನಗೆ ಮತ ಹಾಕುತ್ತಾರೆ. ಬಿಜೆಪಿಯಲ್ಲೂ ಅಸಮಾಧಾನ ಬೂದಿ ಮುಚ್ಚಿದ ಕೆಡದಂತೆ ಹೋಗೆಯಾಡುತ್ತಿದೆ.! ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ ಜೆಡಿಎಸ್ ನಲ್ಲೂ ಅಸಮಾಧಾನ ಇದೆ. ಈ ಅಸಮದಾನಿತರು ನನಗೆ ಮತ ಕೊಡುತ್ತಾರೆ ಎಂದು ಈಶ್ವರಪ್ಪ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯ ಪ್ರಕಾಶ್ ನಡ್ಡಾ ನನಗೆ ಫೋನ್ ಮಾಡಿಲ್ಲ. ಯಾರೇ ಹೇಳಿದರೂ ನಾನು ಸ್ಪರ್ಧೆ ಮಾಡಿಯೇ ತೀರುತ್ತೇನೆ. ದಯಮಾಡಿ ಪದೇ ಪದೇ ಸ್ಪರ್ಧೆಯ ವಿಚಾರದಲ್ಲಿ ಎನು ಕೇಳಬೇಡಿ ನನ್ನನ್ನು ಯಾರು ರೇಗಿಸಿ ಕೋಪ ತರಿಸಬೇಡಿ.
ಯಾರೇ ಕರೆ ಮಾಡಿದರು ನನ್ನ ಬಂಡಾಯ ಸ್ಪರ್ಧೆ ಖಚಿತವಾಗಿದೆ. ನನ್ನ ರಕ್ತ ಇರುವುದೇ ಬಿಜೆಪಿಯಲ್ಲಿ ನನ್ನ ತಾಯಿಂದ ನನ್ನನ್ನು ಯಾರು ದೂರ ಮಾಡಲು ಸಾಧ್ಯವಿಲ್ಲ. ನನ್ನ ಮತ್ತು ನನ್ನ ತಾಯಿಯ ಸಂಬಂಧ ಯಾವುದೇ ಶಕ್ತಿಯಿಂದ ದೂರ ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಹಿಡಿತದಲ್ಲಿ ಪಕ್ಷ ಇರುವ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಸೋಲಿಸಬೇಕಿದೆ. ಮುಸಲ್ಮಾನರು ನನ್ನ ಅದೃಶ್ಯ ಮತದಾರ ಪಟ್ಟಿಯಲ್ಲಿದ್ದಾರೆ. ಅವರು ನನಗೆ ಓಟು ಹಾಕುತ್ತಾರೆ ಎಂದು ಹೇಳಿದರು.ಈ ಬಾರಿ ಶಿವಮೊಗ್ಗ ಕ್ಷೇತ್ರದ ಮತದಾರರು ನನಗಾದ ಅನ್ಯಾಯವನ್ನು ಕಣ್ಣಾರೆ ನೋಡಿದ್ದಾರೆ ಇಷ್ಟಾದಮೇಲು ಬೇರೆಯವರಿಗೆ ಮತಹಾಕಲು ಸಾಧ್ಯವಿಲ್ಲ ನನಗೆ ಮತ ಹಾಕುತ್ತಾರೆ ಗೆಲುವು ನನ್ನದೆ ಎಂದರು ಮಾಜಿ ಸಚಿವ ಈಶ್ವರಪ್ಪನವರು..