NSUI ಗೆ ಸಂದ ಜಯ ಮನವಿಗೆ ಸ್ಪಂಧಿಸಿದ ಕುವೆಂಪು ವಿಶ್ವ ವಿದ್ಯಾಲಯ ಶೈಕ್ಷಣಿಕ ಅವಧಿ ಹಾಗೂ ಪರೀಕ್ಷೆ ಮುಂದೂಡಿಕೆ
ಶಿವಮೊಗ್ಗ : ಕುವೆಂಪು ವಿಶ್ವ ವಿದ್ಯಾಲಯದ ಶೈಕ್ಷಣಿಕ ಅವಧಿಯನ್ನು ಮುಂದೂಡಿದೆ
ಕುವೆಂಪು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ಸರಿಯಾಗಿ ನಡೆದಿರುವುದಿಲ್ಲ ಇದು ವಿಧ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು ಸಾಕಷ್ಟು ತೊಂದರೆ ಆಗಿದ್ದು ತಕ್ಷಣವೇ ಪರೀಕ್ಷೆಯನ್ನು ಎದಿರಿಸಬೇಕಾಗಿ ಬಂದರೆ ಸರಿಯಾದ ಪಾಠ ಪ್ರವಚನಗಳು ನೆಡೆಯದ ಹಿನ್ನೆಲೆಯಲ್ಲಿ ಪರೀಕ್ಷೆ ಎದುರಿಸಲು ಅಸಾಧ್ಯವಾಗಿತ್ತು
ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ನಡೆಯದೇ ಇರುವುದನ್ನು ಗಮನದಲ್ಲಿಟ್ಟುಕೊಂಡು ಅಕಾಡೆಮಿಕ್ ಕ್ಯಾಲೆಂಡರ್ ಅನ್ನು ಫೆಬ್ರವರಿ ತಿಂಗಳ ಅಂತಿಮದಿನದ ವರೆಗೆ ಮಾರ್ಪಡಿಸಬೇಕು ಅಥವಾ ವಿದ್ಯಾರ್ಥಿಗಳ ಹಿತಾ ದೃಷ್ಠಿ ಇಂದ ಪರೀಕ್ಷೆಯನ್ನು ಮುಂದೂಡಬೇಕೆಂದು ಎನ್ ಎಸ್ ಯು ಐ ವತಿಯಿಂದ ಪ್ರತಿಭಟಿಸಿ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಮುರಗೇಶ್ ಮಧು, ಕಾಶಿ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಮನವಿಗೆ ವಿಶ್ವ ವಿದ್ಯಾಲಯ ಸ್ಪಂದಿಸಿ ವಿದ್ಯಾರ್ಥಿಗಳ ಹಿತಾ ದೃಷ್ಠಿಯಿಂದ ಅಕಾಡಿಮಿಕ್ ಕ್ಯಾಲೆಂಡರ್ ಹಾಗೂ ಪರೀಕ್ಷೆ ಎರಡನ್ನೂ ಮುಂದೂಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.
ಇದು ವಿಧ್ಯಾರ್ಥಿಗಳಿಗೆ ಸಾಕಷ್ಟು ಖುಷಿ ತಂದುಕೊಟ್ಟಿದೆ ಪರೀಕ್ಷೆ ಎದುರಿಸುವ ಮುನ್ನ ಇನ್ನಷ್ಟು ಕಲಿಕೆಗೆ ಆವಕಾಶ ಸಿಕ್ಕಂತಾಗಿದೆ