ಶಿವಮೊಗ್ಗ: ಈ ಬಾರಿ ಮಂಡಿಸಿರುವ ಬಜೆಟ್ ಚುನಾವಣೆಗೆ ಮುನ್ನ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲು ಮಂಡಿಸಿರುವ ಗಿಮಿಕ್ ಬಜೆಟ್ :ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್

ಶಿವಮೊಗ್ಗ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಚುನಾವಣೆಗೆ ಮುನ್ನ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲು ಮಂಡಿಸಿರುವ ಗಿಮಿಕ್ ಬಜೆಟ್ :ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್

ಶಿವಮೊಗ್ಗ:
ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ನಿನ್ನೆ ಮಂಡಿಸಿರುವ ( ಗುರುವಾರ) 6 ನೇ ಬಜೆಟ್ ಬರಲಿರುವ ಸಂಸತ್ ಚುನಾವಣೆಯ ಸಂದರ್ಭದಲ್ಲಿ ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ ಕೆಲಸಕ್ಕೆ ಬಾರದ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಇಂದು ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಕೂಡ 5 ಕೋಟಿ ವಸತಿ ಯೋಜನೆ, ಮಹಿಳೆಯರಿಗೆ,ರೈತರಿಗೆ, ಮದ್ಯಮ ವರ್ಗದ ಮಂದಿಗೆ ಹೀಗೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳ ಜೋತೆಗೆ ಸಾಕಷ್ಟು ಯೋಜನೆಯ ಅಭಿವೃದ್ಧಿ ಕುರಿತು ಬಜೆಟ್ ಮಂಡಿಸಲಾಗಿತ್ತು ಆದರೆ ಬೆರಳೆಣಿಕೆಯ ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದು ಬಿಟ್ಟು ಇನ್ಯಾವುದೇ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾದರೆ ಈ ಹಿಂದಿನ ಬಜೆಟ್ ನಲ್ಲಿ ಒತ್ತು ನೀಡಲಾಗಿದ್ದ ಯೋಜನೆಗಳೆಲ್ಲ ಏನಾದವು ಇದುವರೆಗೂ‌ ಅವುಗಳು ಅನುಷ್ಠಾನವಾಗಿಲ್ಲ ಏಕೆ?
ರಕ್ಷಣಾ ಖಾತೆಯಲ್ಲಿ 6½ ಲಕ್ಷ ಕೋಟಿ ಹಣ ತೆಗೆದಿಡಲಾಗಿದೆ ಆದರೆ ಯೋಧರಿಗೆ ಯಾವ ಸವಲತ್ತು ನೀಡಲಾಗುತ್ತಿದೆ.‌ ಯಾವ ಉಪಕರಣಗಳು ಖರೀದಿ ಮಾಡಾಗುತ್ತಿದೆ ಎಂದು ಗೊತ್ತೆ ಆಗಿಲ್ಲ.ಮರಣ ಹೊಂದಿದ ಯೋಧರಿಗೆ ಹೂವಿನ ಹಾರ ಹಾಕುವುದನ್ನ‌ ಬಿಟ್ಟು ಪರಿಹಾರ ಮತ್ತು ಯಾವುದೇ ಖರೀದಿ ಬಗ್ಗೆ ತಿಳಿದು ಬರುತ್ತಿಲ್ಲ ಎಂದು ದೂರಿದ್ದಾರೆ.


ಹಳೆಯ ಯೋಜನೆಗಳೆ ಇನ್ನೂ ಅನುಷ್ಠಾನವೆ ಆಗಿಲ್ಲ. ಮತ್ತೆ ಹೊಸ ಯೋಜನೆಯ ಪಟ್ಟಿ ದೊಡ್ಡದಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಇಲ್ಲಾ. ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಈಗ ಮಂಡಿಸಿರುವ ಬಜೆಟ್ ಎಲೆಕ್ಷನ್ ಬಜೆಟ್ ಅಗಿದೆ. ಈ ಬಜೆಟ್ ನಲ್ಲೂ ಅಂಬಾನಿ ಅದಾನಿಗಾಗಿ ಪ್ರವಾಸೋದ್ಯಮಕ್ಕೆ ಒತ್ತುಕೊಡಲಾಗಿದೆ ಎಂದು ಹೇಳಿದರು.
ನೂತನ ವಿಮಾನ ನಿಲ್ದಾಣಗಳನ್ನು ಹೆಚ್ಚು ಹೆಚ್ಚಾಗಿ ನಿರ್ಮಿಸಲಾಗುತ್ತಿದೆ ಎಂದು ಹೇಳಿಕೊಳ್ಳಲಾಗುತ್ತಿದೆ.ಆದರೆ ಉದ್ಘಾಟನೆಯ ಬೆನ್ನಿಗೆ ವಿಮಾನ ನಿಲ್ದಾಣಗಳು ಒಂದೊಂದಾಗಿ ಬಾಗಿಲು ಹಾಕಲಾಗುತ್ತಿದೆ. ಈಗ 47 ಲಕ್ಷ‌ಕೋಟಿಯ ಬಜೆಟ್ ಮಂಡಿಸಲಾಗಿದೆ. ಆದರೆ 11 ಲಕ್ಷ ಕೋಟಿ ರೂ ವರ್ಷಕ್ಕೆ ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಲಾಗುತ್ತಿದೆ. ಆರ್ ಬಿ ಐಗೆ ಎತ್ತಿಟ್ಟ ಮೀಸಲು ಫಂಡ್ ನಲ್ಲಿ 3 ಲಕ್ಷ ಕೋಟಿ ಹಣ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಆರ್ ಬಿ‌ಐ ಗವರ್ನರ್ ಗಳು ಹೆಚ್ಚು ಕಾಲ ಕೆಲಸ ಮಾಡಲು ಆಗದೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ದೂರಿದರು.

ಇನ್ನೂ ಈ ಹಿಂದೆ ಭದ್ರಾ ಬಲದಂಡೆ ಯೋಜನೆಗೆ 5300 ಕೋಟಿ ಹಣ ತೆಗೆದಿಡಲಾಗಿತ್ತು. ಆದರೆ ಏನಾಯಿತು? ಈ ಬಜೆಟ್ ನಲ್ಲಿ ಯಾವುದೂ ಪ್ರಸ್ತಾವನೆ ಇಲ್ಲ. 1.9% ಗಾತ್ರದ ಬಡ್ಡಿ ಕಟ್ಟಲಾಗುತ್ತಿದೆ. ಬಜೆಟ್ ನಲ್ಲಿ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ತುಟಿ ಬಿಚ್ಚೊಲ್ಲ. ಚುನಾವಣೆಯನ್ನು ಅಯೋಧ್ಯ ರಾಮ ಮಂದಿರವನ್ನು ಮತ್ತು ಇವಿಎಂ ಮೇಲೆ ಬಿಜೆಪಿ ಎದುರಿಸುತ್ತಿದೆ.
ಅಯೋದ್ಯದಲ್ಲಿ ರಾಮ ಮಂದಿರ ಕಟ್ಟಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಯಾವುದೇ ಕೈಗಾರಿಕೆ ಬಗ್ಗೆ ಒತ್ತುಕೊಡಲಿಲ್ಲ. ಸಂಸದ ಡಿಕೆ ಸುರೇಶ್ ಹೇಳಿಕೆಯನ್ನು ಮಾಧ್ಯಮದ ಎದುರು ತಿರುಚಲಾಗಿದೆ ಬೇರೆ ರಾಜ್ಯಗಳಿಗೆ ಕೇಂದ್ರದಿಂದ ಹಣ ಬಿಡುಗಡೆ ಆಗುತ್ತದೆ ಆದರೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ ರಾಜ್ಯಕ್ಕೆ ಏಕೆ ಕೇಂದ್ರದಿಂದ ಹಣ ಕೊಡೋದಿಲ್ಲ.‌ತಾರತಮ್ಯವೇಕೆ ರಾಜ್ಯದಲ್ಲಿ ಬರ ಸಮೀಕ್ಷೆ ಆಗಿ ತಿಂಗಳುಗಳೆ ಉರುಳಿದೆ ಕೇಂದ್ರದಿಂದ ಬರಬೇಕಾದ ಪರಿಹಾರದ ಹಣ ಮಾತ್ರ ಇನ್ನೂ ಬಿಡುಗಡೆ ಮಾಡಿಲ್ಲ! ಸಾಕಷ್ಟು ವಿಷಯಗಳಲ್ಲಿ ನಮ್ಮ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ನಿಗಮ ಮಂಡಳಿ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿ ಬರುತ್ತಿದೆ. ಹಾಗಾದರೆ ನಿಗಮ‌ಮಂಡಳಿ ಸ್ಥಾನ ಸಿಕ್ಕರೆ ಎಂಪಿ ಸ್ಥಾನಕ್ಕೆ ಸ್ಪರ್ಧಿಸುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಕ್ಷದ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಲೋಕಸಭಾ ಚುನಾವಣೆಗೆ ನನ್ನ ಹೆಸರನ್ನು ಕೆಪಿಸಿಸಿ ಅಧ್ಯಕ್ಷರ ಮೂಲಕ ಕಾಂಗ್ರೆಸ್ ಹೈಕಮಾಂಡ್ ಕಳಿಸಿ ಕೊಡಲಾಗಿದೆ.ಪಕ್ಷ ಸೂಚಿಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಗ್ಯಾರೆಂಟಿ ನಾನು ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲೆ ಸ್ಫರ್ಧಿಸಬೇಕಿತ್ತು. ಹೈಕಮಾಂಡ್ ಮತ್ತು ಪಕ್ಷದ ಹಿರಿಯ ನಾಯಕರ ಮಾತಿಗೆ ಬೇಲೆ ಕೊಟ್ಟು ಚುನಾವಣೆಯಿಂದ ದೂರ ಉಳಿಯ ಬೇಕಾಯಿತು.ಇನ್ನೂ
ಸಂಸದರಾದ ಬಿ ವೈ ರಾಘವೇಂದ್ರರ ಅಭಿವೃದ್ಧಿ ಕಾಮಗಾರಿಯನ್ನು ನೋಡಿ ಹೊಗಳಿರುವ ಶಾಮನೂರು ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ಜಿಲ್ಲಾ ಕಾಂಗ್ರೆಸ್ ನಿಂದ ದೂರು ನೀಡಲಾಗಿದೆ. ಶಾಮನೂರು ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಕಾಂಗ್ರೆಸ್ ಅಧಿಕಾರವಿಲ್ಲ ಎಂದರು.

ಇತ್ತೀಚಿನ ಕೇಂದ್ರದ ಬಜೆಟ್ ಗೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಹೆಚ್ ಎಸ್ ಸುಂದರೇಶ್ ದೂರಿದ್ದಾರೆ. ಇದು ಬಿಜೆಪಿಯು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಚುನಾವಣೆಯ ಮುನ್ನ ಮಾಡಿರುವ ಗಿಮಿಕ್ ಬಜೆಟ್ ಎಂದು ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಚಂದ್ರಶೇಖರ್, ಕಲೀಮ್ ಪಾಷಾ, ಶಿ ಜು ಪಾಶ, ಜಿ ಪದ್ಮನಾಭ್ ಚಂದನ್, ಚಂದ್ರ ಭೂಪಾಲ, ಸೌಗಂಧಿಕಾ , ಮುಜೀಬ್ , ವೈ ಬಿ.ಚಂದ್ರಕಾಂತ್, ಪಿ.ಎಸ್. ಗಿರೀಶ್‌ರಾವ್, ಆಫ್ರಿದಿ, ಪ್ರವೀಣ್, ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!