ಆರೋಪಿ ಡಾ. ರುವೈಸ್ ಮತ್ತು ಆತ್ಮಹತ್ಯೆಗೆ ಶರಣಾದ ಡಾ. ಶಹಾನಾ
ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಪಿಜಿ ವಿದ್ಯಾರ್ಥಿನಿಯಾಗಿರುವ 26ರ ಹರೆಯದ ಡಾ. ಶಹಾನಾ, ಆಕೆಯ ನಿಶ್ಚಿತ ವರ ಡಾ. ರೂವೈಸ್ ಮತ್ತು ಅವರ ಕುಟುಂಬವು ತಮ್ಮ ಮದುವೆಗೆ ಮುಂಚಿತವಾಗಿ ಅತಿಯಾದ ವರದಕ್ಷಿಣೆಗೆ ಬೇಡಿಕೆಯ ನಂತರ ತನ್ನ ಜೀವವನ್ನು ತೆಗೆದುಕೊಂಡಿದ್ದಳು.
ಪೊಲೀಸರಿಗೆ ಸಿಕ್ಕ ಸುಸೈಡ್ ನೋಟ್‌ನಲ್ಲಿ, ನೊಂದು ಕೊನೆಯ ಸಾವಿನ ಬರಹದಲ್ಲಿ ಎಲ್ಲರ
ಮನಕುಲುಕುವಂತೆ
“ಎಲ್ಲರಿಗೂ ಹಣ ಬೇಕು, ಹಣವು ಎಲ್ಲದರ ಮೇಲೆ ಜಯ ಸಾಧಿಸುತ್ತದೆ” ಎಂದು ಬರೆದಿದ್ದಾಳೆ. ಡಾ.ಶಹಾನಾ
2023 ರ ಡಿಸೆಂಬರ್ 5 ರಂದು ಆತ್ಮಹತ್ಯೆಗೆ ಶರಣಾಗಿದ್ದ ಡಾ. ಶಹಾನಾ
ಡಾ.ಶಹಾನಾ ಆತ್ಮಹತ್ಯೆ ಪ್ರಕರಣ: ಈ ಪ್ರಕರಣಕ್ಕೆ ಸಂಬಂದಿಸಿದಂತೆ ಜೈಲು ಸೇರಿದ್ದ ಡಾ. ರುವೈಸ್ ಗೆ ಜಾಮೀನು ನೀಡಿದ ಕೇರಳ ಹೈಕೋರ್ಟ್.!
ಕೊಚ್ಚಿ: ಡಾ.ಶಹಾನಾ ಆತ್ಮಹತ್ಯೆ ಪ್ರಕರಣದ ಮೊದಲ ಆರೋಪಿ ಡಾ.ಇ.ಎ.ರುವೀಸ್‌ಗೆ ಕೇರಳ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ರೂವೈಸ್ ಅವರು ಡಿಸೆಂಬರ್ 7, 2023 ರಿಂದ ಬಂಧನದಲ್ಲಿದ್ದರು ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಗೋಪಿನಾಥ್ ಪಿ, ತನಿಖೆಯ ಉದ್ದೇಶಗಳಿಗಾಗಿ ಅರ್ಜಿದಾರರ ನಿರಂತರ ಬಂಧನ ಅಗತ್ಯವಿಲ್ಲ ಮತ್ತು ಅವರಿಗೆ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟರು. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅರ್ಜಿದಾರರ ತಂದೆಗೆ ನ್ಯಾಯಾಲಯ ಈ ಹಿಂದೆಯೇ ನಿರೀಕ್ಷಣಾ ಜಾಮೀನು ನೀಡಿತ್ತು.
ವಕೀಲ ನಿರೀಶ್ ಮ್ಯಾಥ್ಯೂ ಅವರ ಮೂಲಕ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ, ಪ್ರಸ್ತುತ ಅಪರಾಧದೊಂದಿಗೆ ಅವರನ್ನು ಸಂಪರ್ಕಿಸಲು ಪ್ರಸ್ತುತ ಪ್ರಕರಣದಲ್ಲಿ ಯಾವುದೇ ವಸ್ತುವಿಲ್ಲ ಎಂದು ರೂವೈಸವರ್ಡ್ ಹೇಳಿದ್ದಾರೆ. ಇಬ್ಬರ ನಡುವೆ ಮದುವೆಯ ಪ್ರಸ್ತಾಪವಷ್ಟೇ ನಡೆದಿದೆ ಎಂದು ತಿಳಿಸಿದರು.
ಪ್ರಕರಣದ ಹಿನ್ನಲೆ ಏನು?
ಕೇರಳದ ತಿರುವನಂತಪುರಂನಲ್ಲಿ 26 ವರ್ಷದ ವೈದ್ಯೆಯೊಬ್ಬರು ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ತನ್ನ ಕುಟುಂಬ ವಿಫಲವಾದ ಕಾರಣ ಆಕೆಯ ಗೆಳೆಯ ಮದುವೆಯನ್ನು ನಿಲ್ಲಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಶಹಾನಾ ಎಂಬ ಮಹಿಳೆ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದಲ್ಲಿ ಪಿಜಿ ವಿದ್ಯಾರ್ಥಿನಿಯಾಗಿದ್ದು, ಮಂಗಳವಾರ (ಡಿಸೆಂಬರ್ 5) ಬೆಳಗ್ಗೆ ತನ್ನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳು.
ಆಕೆಯ ಸಾವಿನ ನಂತರ, ಶಹಾನಾ ಅವರ ಸಂಬಂಧಿಕರು ವರದಕ್ಷಿಣೆ ಬೇಡಿಕೆಗಳನ್ನು ತನ್ನ ಕುಟುಂಬವು ಪೂರೈಸಲು ಸಾಧ್ಯವಾಗದ ಕಾರಣ ನನ್ನ ಮಗಳ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದರಿಂದ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು
ಕೇರಳದಲ್ಲಿ 26 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನ್ನ ಮದುವೆಗೆ ವರನ ಕಡೆಯವರು ಅತಿಯಾದ ವರದಕ್ಷಿಣೆ ಬೇಡಿಕೆ ಇಟ್ಟ ಕಾರಣಕ್ಕೆ ಮನೆಯವರು ಕೊಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಆಕೆಯ ಪ್ರಿಯಕರ ಮದುವೆಯನ್ನು ನಿಲ್ಲಿಸಿದ್ದ,ಆ ನಂತರ 2023ರ ಡಿಸೆಂಬರ್ 5 ರಂದು ನೊಂದು ಆತ್ಮಹತ್ಯೆಗೆ ಶರಣಾಗಿದ್ದಳು!!
ಕೆರಳದ ತಿರುವನಂತಪುರಂನಲ್ಲಿ ಈ ಘಟನೆ ದೊಡ್ಡ ಸುದ್ದಿಯಾಗಿತ್ತು. ಡಾ. ಶಹಾನಾ ಅವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾರೆ. ಅಂದು
ಪೊಲೀಸರಿಗೆ ಸಿಕ್ಕ ಸುಸೈಡ್ ನೋಟ್‌ನಲ್ಲಿ, ಶಹಾನಾ ಕೊನೆಯ ಸಾವಿನ ಬರಹದಲ್ಲಿ ಎಲ್ಲರ
ಮನಕುಲುಕುವಂತೆ
“ಎಲ್ಲರಿಗೂ ಹಣ ಬೇಕು, ಹಣವು ಎಲ್ಲದರ ಮೇಲೆ ಜಯ ಸಾಧಿಸುತ್ತದೆ” ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು!
ಡಾ.ಶಹಾನಾ ಅವರ ಕುಟುಂಬದವರಿಗೆ ವರನ ಕಡೆಯವರ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಅ ಮಟ್ಟದ ಬೇಡಿಕೆ ವರನಕಡೆಯವರದಾಗಿತ್ತು ಎಂದು ಅವರ ಕುಟುಂಬದವರು ಹೇಳಿಕೆ ನೀಡಿದ್ದಾರೆ ತಕ್ಷಣವೇ ವರನ ಕಡೆಯವರ ವರದಕ್ಷಿಣೆಯ ಡಿಮ್ಯಾಂಡ್ ಕೇಳಿದ ಡಾ. ಶಹಾನ ತಾವೆ ಹೆದರಿ ಹೋಗಿದ್ದರಂತೆ! ನಂತರ ಹುಡುಗಿಯ ಮನೆಯವರು ವರದಕ್ಷಿಣೆ ಕೊಡಲು ನಿರಾಕರಿಸಿದಾಗವರ ಮದುವೆ ನಿಲ್ಲಿಸಿದ್ದನಂತೆ!!
ಮುಂದೆ ನೆಡೆದದ್ದು ಘೋರ ದುರಂತ?
ಡಾ.ಶಹಾನಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ತಾವೆ ಮಿತಿಮೀರಿದ ಅರಿವಳಿಕೆ ಮದ್ದನ್ನು ತೆಗೆದುಕೊಂಡು ಸಾವಿಗೆ ಶರಣಾಗಿದ್ದರಂತೆ!!
ಡಾ. ಶಹಾನಾ ಅವರು ಡಿಸೆಂಬರ್ 5ರ (2023) ಮಂಗಳವಾರದಂದು ಅವರ ಅಪಾರ್ಟ್‌ಮೆಂಟ್‌ನಲ್ಲಿ ಮಿತಿಮೀರಿದ ಅರವಳಿಕೆ ತೆಗೆದುಕೊಂಡು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆಂದು ವರದಿಯಾಗಿದೆ. ಆಕೆ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು,ತಕ್ಷಣವೇ ಆಕೆಯನ್ನು ಗಮನಿಸಿದ ಮನೆಯವರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆಸ್ಪತ್ರೆಯಲ್ಲಿ ಆಕೆ ತನ್ನ ಬದುಕಿನ ಅಂತ್ಯಕಂಡಿದ್ದಾಳೆ. ಎಂದು ಆಸ್ಪತ್ರೆಯ ಮೂಲಗಳು ವರದಿಮಾಡಿದ್ದರು.
ಅಂದು ಈ ದುರಂತ ಸಾವಿನ ಸುದ್ದಿ ತಿಳಿದ ಕೆರಳದ ಮಂದಿ ನೊಂದಿದ್ದರು. ಅದರಲ್ಲೂ ಮಹಿಳಾವರ್ಗವಂತು ಸಿಡಿದೆದ್ದ ಕಾರಣಕ್ಕೆ ತಕ್ಷಣವೇ ಈ ಕುರಿತು ಕೆರಳ ಸರ್ಕಾರ ತನಿಖೆಗೆ ಮುಂದಾಗಿತ್ತು. ಕೇರಳ ಸರ್ಕಾರದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನೆಡೆಸುವಂತೆ ಆದೇಶಿಸಿದ್ದರು.
ಏತನ್ಮಧ್ಯೆ, ಮೆಡಿಕಲ್ ಪಿಜಿ ಡಾಕ್ಟರ್ಸ್ ಅಸೋಸಿಯೇಷನ್ ಆರೋಪಿತ ಡಾ.ರುವೈಸ್ ಅವರನ್ನು ಸಂಸ್ಥೆಯೊಳಗಿನ ಅವರ ಎಲ್ಲಾ ಜವಾಬ್ದಾರಿಗಳಿಂದ ತೆಗೆದುಹಾಕಿತ್ತು.
ಎಫ್‌ಐಆರ್ ದಾಖಲಾದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು
ಈ ಪ್ರಕರಣಕ್ಕೆ ಸಂಭಂದಪಟ್ಟಂತೆ ಡಾ. ಶಹಾನಾ ಅವರ ಡೆತ್ ನೋಟ್ ಹಾಗೂ ಸಹೋದರನ ಹೇಳಿಕೆಯನ್ನು ಆಧರಿಸಿ ಅಂದು ಡಾ ರುವೈಸ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಆರೋಪಿ ಡಾ. ರುವೈಸ್ ವಿರುದ್ಧ ದಾಖಲಿಸಿದ್ದರು.
ಆರೋಪಿ ಆತನ ಕುಟುಂಬದವರ ಬೇಡಿಕೆಗಳು
ಆರೋಪಿಯ ಕುಟುಂಬದವರು ವರದಕ್ಷಿಣೆಗಾಗಿ ಒತ್ತಾಯಿಸಿದ್ದರು ಎಂದು ಹೇಳಿಕೆ ನೀಡಿದ ಡಾ.ಶಹಾನಾ ಕುಟುಂಬದವರು
ಆರೋಪಿ ಡಾ.ರುವೈಸ್ ಮತ್ತು ಆತನ ಕುಟುಂಬದವರು ವರದಕ್ಷಿಣೆಯಾಗಿ 150 ಗ್ರಾಂ ಚಿನ್ನದ ಸರ, 15 ಎಕರೆ ಜಮೀನು ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿದ್ದರಂತೆ!? ಭಾರತದಲ್ಲಿ ವರದಕ್ಷಿಣೆ ನೀಡುವುದು ಮತ್ತು ತೆಗೆದುಕೊಳ್ಳುವುದು ಕಾನೂನುಬದ್ಧ ಅಪರಾಧವಾಗಿದ್ದು ಮತ್ತು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆ ಮತ್ತು ದಂಡವನ್ನು ಕಟ್ಟ ಬೇಕಾಗಬಹುದು.
ಕೇರಳ ರಾಜ್ಯ ಮಹಿಳಾ ಆಯೋಗ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು.
ಕೇರಳ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪಿ ಸತಿದೇವಿ ಡಾ.ಶಹಾನಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.
ವರದಕ್ಷಿಣೆ ಬೇಡಿಕೆಗಳ ಆರೋಪಗಳು ನಿಜವೆಂದು ಸಾಬೀತಾದರೆ, ಡಾ. ರುವೈಸ್ ಮತ್ತು ಅವರ ಕುಟುಂಬದ ವಿರುದ್ಧ ವರದಕ್ಷಿಣೆ 6 ನಿಷೇಧ ಕಾಯಿದೆ 1961 ರ ಅಡಿಯಲ್ಲಿ ಕಟ್ಟುನಿಟ್ಟಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಅಂದು ಭರವಸೆ ನೀಡಿದ್ದರು. ಶಹಾನಾ ಸಾವಿನ ಸುದ್ದಿ ಅಂದು ಸಂಪೂರ್ಣ ಕೆರಳ ರಾಜ್ಯವನ್ನೆ ತಲ್ಲಣಗೊಳಿಸಿತ್ತು. ಈ ಪ್ರಕರಣ ನಿಜಕ್ಕೂ ನೋವಿನ ಸಂಗತಿಯಾಗಿದ್ದು, ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು.