ಕೆನ್ನಾಯಿ ಗ್ಯಾಂಗ್
ಕೆನ್ನಾಯಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾದ ಕ್ಯಾನಿಡೈ ಕುಟುಂಬದ ಒಂದು ಪ್ರಜಾತಿ. ಅದು ಕ್ಯುವಾನ್ ಜಾತಿಯ ಏಕೈಕ ಅಸ್ತಿತ್ವದಲ್ಲಿರುವ ಸದಸ್ಯವಾಗಿದೆ,
ತೀರ್ಥಹಳ್ಳಿಯ ಹೊದಲ ಗ್ರಾಮದ ಅರಣ್ಯದಲ್ಲಿ ಅಪರೂಪವಾದ ಕೆನ್ನಾಯಿ ಗುಂಪು ಪ್ರತ್ಯಕ್ಷ!!
ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊದಲ ಗ್ರಾಮದಲ್ಲಿ ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಅಪರೂಪವಾದ ಕೆನ್ನಾಯಿಯ ಗುಂಪು ಕಾಣಿಸಿಕೊಂಡಿದೆ.ವಿಷಯ ತಿಳಿದು ಸೆರೆಹಿಡಿದ ವಿಡಿಯೋ ನೋಡಿದ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿದೆ.
ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ಗುರುವಾರ ಅಪರೂಪದ ಕೆನ್ನಾಯಿಯ ಗುಂಪು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಉಂಟುಮಾಡಿದೆ. ಫಾರೆಸ್ವ್ ಗಾರ್ಡ್ ಪ್ರಜ್ವಲ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಅವರಿಗೆ ಈ ಕೆನ್ನಾಯಿ ಗುಂಪು ಕಾಣಿಸಿಕೊಂಡಿದೆ. ಈ ಕೆನ್ನಾಯಿ ಗುಂಪು ಮಾರಿಕೆರೆ ದಡದಿಂದ ನೆಲ್ಲಿಸರ ಕಾಡಿನತ್ತ ಹಾದುಹೋಗಿವೆ ಇದನ್ನು ಅರಣ್ಯ ಸಿಬ್ಬಂದಿ ಪ್ರಜ್ವಲ್ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ಕೆನ್ನಾಯಿಗಳು ಹೆಚ್ಚಾಗಿ ಕಾಣಸಿಗುವುದು ನಮ್ಮ ರಾಜ್ಯದ ಹೆಸರಾಂತ ನಾಗರಹೊಳೆ ಅಭಯಾರಣ್ಯದಲ್ಲಿ ಮಾತ್ರ ಕಂಡುಬರುತ್ತವೆ. ಇಲ್ಲಿ ಗುಂಪು ಗುಂಪಾಗಿ ವಾಸಿಸುತ್ತವೆ ಎಂದು ತಿಳಿದುಬಂದಿದೆ. ಇಂತಹ ಅಪರೂಪದ ಕೆನ್ನಾಯಿಗಳು ತೀರ್ಥಹಳ್ಳಿಯ ತಾಲ್ಲೂಕಿನ ಹೊದಲ ಗ್ರಾಮದಲ್ಲಿ ಕಾಣಿಸಿಕೊಂಡು ಆಚ್ಚರಿಗೆ ಕಾರಣವಾಗಿದೆ.
ಸುಧೀರ್ ವಿಧಾತ, ಶಿವಮೊಗ್ಗ