ಚನ್ನಪಟ್ಟಣದಲ್ಲಿ ಸೈನಿಕ ಸೋತರೆ ಜಮೀರ್ ಅಹ್ಮದ್ ಗೆ ಶಾಸ್ತಿ ಗ್ಯಾರಂಟಿ: ಡಿಕೆ ಶಿವಕುಮಾರ್ ಸುಳಿವು

ಚನ್ನಪಟ್ಟಣದಲ್ಲಿ ಸೈನಿಕ ಸೋತರೆ ಜಮೀರ್ ಅಹ್ಮದ್ ಗೆ ಶಾಸ್ತಿ ಗ್ಯಾರಂಟಿ: ಡಿಕೆ ಶಿವಕುಮಾರ್ ಸುಳಿವು

ಅಶ್ವಸೂರ್ಯ/ಬೆಂಗಳೂರು: ಚನ್ನಪಟ್ಟಣದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಸೋತರೆ ಸಚಿವ ಜಮೀರ್ ಅಹ್ಮದ್ ಮೇಲೆ ಶಿಸ್ತು ಕ್ರಮ ಗ್ಯಾರಂಟಿ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರಿಗೆ ಮತ ಎಣಿಕೆಯ ಮುನ್ನವೇ ಸೋಲಿನ ಭಯ ಕಾಡಿದೆ. ಇದಕ್ಕೆ ಕಾರಣ ಕುಮಾರಸ್ವಾಮಿ ಬಗ್ಗೆ ಜಮೀರ್ ಅಹ್ಮದ್ ಆಡಿದ್ದ ಕರಿಯಾ ಎನ್ನುವ ಪದ ಬಳಕೆ. ಇದರಿಂದಾಗಿ ಚನ್ನಪಟ್ಟಣದಲ್ಲಿ ಒಕ್ಕಲಿಗರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಿಳದೆ ಜೆಡಿಎಸ್ ಪಾಲಾಗಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಇದು ನಿಜವಾದರೆ ಯೋಗೇಶ್ವರ್ ಅವರಿಗೆ ಗೆಲುವು ಅಷ್ಟು ಸುಲಭದ ಮಾತಲ್ಲ. ಕುಮಾರಸ್ವಾಮಿಯವರ ಬಗ್ಗೆ ಜಮೀರ್ ಹೇಳಿಕೆ ಕಾಂಗ್ರೆಸ್ ನಾಯಕರೊಳಗೇ ಅಸಮಾಧಾನ ತಂದಿದೆ. ಇದು ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ತರುತ್ತದೆ ಎನ್ನುವಾಗ ಜಮೀರ್ ಕೈಯಲ್ಲಿ ಕ್ಷಮೆ ಕೂಡಾ ಕೇಳಿಸಿದ್ದಾಗಿದೆ.

ಆದರೆ ಈಗ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಕರಿಯಾ ಎಂದು ಜಮೀರ್ ಹೇಳಿದ್ದು ತಪ್ಪು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅವರಿಗೆ ನಾವು ಬುದ್ಧಿ ಹೇಳಿದ್ದೇವೆ ಎಂದಿದ್ದಾರೆ. ಅದರ ಜೊತೆಗೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಬಹಿರಂಗವಾಗಿ ಹೇಳಲ್ಲ ಎಂದಿದ್ದಾರೆ. ಹೀಗಾಗಿ ಒಂದು ವೇಳೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸೋತರೆ ಜಮೀರ್ ವಿರುದ್ಧ ಪಕ್ಷದ ನಾಯಕರು ಮುಗಿಬೀಳುವುದು ಖಚಿತ. ಆಗ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಂತೂ ಇದ್ದೆ ಇದೆ.
 

Leave a Reply

Your email address will not be published. Required fields are marked *

Optimized by Optimole
error: Content is protected !!