ಸಿದ್ದಕಿ ಹತ್ಯೆಗೆ ಎರಡು ತಿಂಗಳ ಮೊದಲೇ ಸ್ಕೆಚ್.! ಶಾರ್ಪ್ ಶೂಟರ್ ಗಳಿಗೆ ಹಣ ಕೊಟ್ಟು ಡೀಲ್ ಕುದರಿಸಲಾಗಿತ್ತಾ?
ಅಶ್ವಸೂರ್ಯ/ಶಿವಮೊಗ್ಗ: ಸಿದ್ದಿಕಿ ಹತ್ಯೆ ಹೊಣೆಯನ್ನು ಹೊತ್ತುಕೊಂಡ ಬಿಷ್ಣೋಯ್ ಗ್ಯಾಂಗ್! ಈತನ ಗ್ಯಾಂಗ್‌ನಲ್ಲಿದ್ದಾರ ನೂರಾರು ಶಾರ್ಪ್ ಶೂಟರ್ಸ್‌ಗಳು.!? ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಾನುವಾರ ಹೊತ್ತುಕೊಂಡಿದೆ. 66 ವರ್ಷದ ಹಿರಿಯ ಜನಪ್ರಿಯ ರಾಜಕಾರಣಿಯನ್ನು ಶನಿವಾರ ರಾತ್ರಿ ದಸರಾ ಆಚರಣೆಯ ಸಂದರ್ಭದಲ್ಲಿ ಸಿಡಿಮದ್ದುಗಳ ಅಬ್ಬರದ ನಡುವೆ ಮುಂಬೈನ ಬಾಂದ್ರಾದಲ್ಲಿರುವ ಅವರ ಕಚೇರಿಯ ಹೊರಗೆ ಶಾರ್ಪ್ ಶೂಟರ್ ಗಳು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.!
ಸಿದ್ದಿಕಿ ಹತ್ಯೆಗೆ ಸಾಕಷ್ಟು ದಿನಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು ಎಂದು ಪೋಲಿಸ್ ಮೂಲಗಳು ತಿಳಿದುಬಂದಿದೆ.ಹಂತಕರು ಎಡಬಿಡದೆ ಅವರ ಬೆನ್ನಿಗೆ ಬಿದ್ದು ಚಲವಲಗಳ ಮೇಲೆ ನಿಗಾ ಇಟ್ಟು ಸರಿಯಾದ ಸಮಯ ನೋಡಿಕೊಂಡು ಹಂತಕರು ಸಿದ್ದಕಿ ಅವರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಮುಂಬಯಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಹರಿಯಾಣ ಹಾಗೂ ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ತಲೆ ಕರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಈ ಹತ್ಯೆಯ
ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯ್!
ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಸಾಕಷ್ಟು ಸ್ಫೋಟಕ ವಿಚಾರಗಳನ್ನು ಕಲೆಹಾಕಿದ್ದಾರೆ.ಈ ತನಿಖೆಯ ವೇಳೆ ಸಿದ್ದಕಿ ಹತ್ಯೆಯ ಮಾಸ್ಟರ್ ಮೈಂಡ್ ನಿಗೂಢ ಸ್ಥಳದಲ್ಲಿದ್ದುಕೊಂಡೇ ಹಂತಕರಿಗೆ ಹಣ ನೀಡುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದ್ದು ಮುಂಬೈ ಪೊಲೀಸ್ ಮೂಲಗಳ ಪ್ರಕಾರ ಮೂವರು ಕೊಲೆ ಆರೋಪಿಗಳು ಪಂಜಾಬ್ ಜೈಲಿಯಲ್ಲಿದ್ದಾಗ ಭೇಟಿಯಾಗಿದ್ದರಂತೆ.! ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮುಂಬಯಿ ನಗರದ ಕುರ್ಲಾದಲ್ಲಿ ತಿಂಗಳಿಗೆ 14,000 ರೂಪಾಯಿಗೆ ಮನೆ ಬಾಡಿಗೆ ಪಡೆದು ವಾಸವಿದ್ದರಂತೆ. ಸಿದ್ದಿಕ್ಕಿ ಹತ್ಯೆಯ ಸಂಚು ಈ ಮನೆಯಲ್ಲಿಯೇ ಕುಳಿತು ರೂಪಿಸಿದ್ದರಂತೆ.? ಹಾಗಾದರೆ ಮೂವರು ಆರೋಪಿಗಳು ಈ ಹತ್ಯೆಗೆ ಕುದುರಿಸುಕೊಂಡ ಡೀಲ್ ನ ಹಣವೇಷ್ಟು.? ಬಿಷ್ಣೋಯ್ ಗ್ಯಾಂಗ್‌ನಲ್ಲಿದ್ದಾರೆ ನೂರಾರು ಶಾರ್ಪ್ ಶೂಟರ್ಸ್‌ಗಳು ಸಾಕಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಸಧ್ಯಕ್ಕೆ ಗುಜರಾತ್ ಜೈಲಿನಲ್ಲಿದ್ದಾನೆ. ಆಕ್ಟಿವ್ ಆಗಿರುವ ಇತನ ಸಹಚರರಿಂದ ದಿನನಿತ್ಯ ಉದ್ಯಮಿಗಳು, ಪ್ರಮುಖರು ಮತ್ತು ಸೆಲೆಬ್ರಿಟಿ ಗಳಿಗೆ ಬೆದರಿಕೆ ಕರೆಗಳು ಬರುತ್ತಲೇ ಇವೆಯಂತೆ!? ಸದ್ಯಕ್ಕೆ ಬಿಷ್ಣೋಯ್ ಗ್ಯಾಂಗ್‌ನಲ್ಲಿ 700ಕ್ಕೂ ಹೆಚ್ಚು ಶಾರ್ಪ್ ಶೂಟರ್‌ಗಳಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.!! ದೇಶಾದ್ಯಂತ ಅನೇಕ ನಟೋರಿಯಸ್ ಕ್ರಿಮಿನಲ್‌ಗಳು ಬಿಷ್ಣೋಯ್ ಜೋತೆಗೆ ಕೈಮಿಲಾಯಿಸಿ ಅವನಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ರಿಳಿಸಿವೆ.!?
ಸಿದ್ದಕಿ ಹತ್ಯೆ.!?
ಬಾಂದ್ರಾ ಪೂರ್ವದ ಶಾಸಕರಾಗಿರುವ ಸಿದ್ದಕಿ ಅವರ ಪುತ್ರ ಜೀಶಾನ್ ಅವರ ಕಚೇರಿಯಲ್ಲಿ ಶನಿವಾರ ರಾತ್ರಿ 9:30ರ ಸುಮಾರಿಗೆ ಸಿದ್ದಿಕಿ ಅವರ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ.! ಎಂದು ಮೂಲಗಳು ತಿಳಿಸಿವೆ.ತಕ್ಷಣವೇ ಕಾರ್ಯಚರಣೆಗೆ ಇಳಿದ ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸಿದ್ದಿಕಿ ಮೇಲೆ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು.ಸ್ಥಳದಲ್ಲಿಯೇ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸಚಿವರನ್ನು ತಕ್ಷಣವೇ ಸ್ಥಳೀಯ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು.ಮೂರು ಗುಂಡುಗಳಲ್ಲಿ ಒಂದು ಗುಂಡು ನೆರವಾಗಿ ಎದೆಗೆ ಬಿದ್ದಿದ್ದರಿಂದ ಸಿದ್ದಕಿ ಅವರು ಉಸಿರು ಚಲ್ಲಿದ್ದಾರೆ.
ಸಿದ್ದಕಿ ಅವರು ಜನಪ್ರಿಯ ರಾಜಕಾರಣಿ. ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ ಅವರು 48 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಪಕ್ಷವನ್ನು ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿಗೆ ಸೇರ್ಪಡೆಯಾಗಿದ್ದರು. ಜೀಶನ್ ಸಿದ್ದಿಕಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು.