ಭದ್ರಾವತಿ: ವಕ್ತಿಯೊಬ್ಬರನ್ನು ಅಡ್ಡಗಟ್ಟಿ ನಗದು ಹಣ, ಮೊಬೈಲ್ ದೋಚಿದ ಮೂವರು ಆರೋಪಿಗಳಿಗೆ 5 ವರ್ಷ 1ತಿಂಗಳು ಶಿಕ್ಷೆ ವಿಧಿಸಿದ ನ್ಯಾಯಲಯ,
ಅಶ್ವಸೂರ್ಯ/ಶಿವಮೊಗ್ಗ: 2024ರ ಏಪ್ರಿಲ್ 28 ರಂದು ರಾತ್ರಿ ಮೊಹಮ್ಮದ್ ಖಾಲೀದ್ (21) ಭದ್ರಾವತಿಯ ಅನ್ವರ್ ಕಾಲೋನಿಯ ನಿವಾಸಿ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣಾ ಸರಹದ್ದಿನ ಬೈ ಪಾಸ್ ರಸ್ತೆಯಲ್ಲಿ ತನ್ನ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಅವರನ್ನು ತಡೆದು ಅಡ್ಡಗಟ್ಟಿ ನಿಲ್ಲಿಸಿ ನಗದು ಹಣ, ಮೊಬೈಲ್ ಫೋನ್ ಮತ್ತು ವಾಚ್ ಅನ್ನು ಕಿತ್ತು ಕೊಂಡು ಹೋಗಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುನ್ನೆ ಸಂಖ್ಯೆ 0053/2019 ಕಲಂ 394 ಐಪಿಸಿ ರೀತ್ಯಾ ದೂರು ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ತನಿಖಾಧಿಕಾರಿಗಳಾದ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆ ರವರು
ಈ ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ)ದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು 2024ರ ಅಕ್ಟೋಬರ್ 7 ರಂದು ಆರೋಪಿತರಾದ 1) ಸಯ್ಯದ್ ಇಬ್ರಾಹಿಂ, 23 ವರ್ಷ, ಶಿವಮೊಗ್ಗ ಟೌನ್, 2) ಮೊಹಮ್ಮದ್ ಮುಸ್ತಫಾ, 22 ವರ್ಷ, ಶಿವಮೊಗ್ಗ ಟೌನ್, 3) ಮೊಹಮ್ಮದ್ ಅಲ್ಲಾಭಕ್ಷಿ, 22 ವರ್ಷ, ಶಿವಮೊಗ್ಗ ಟೌನ್ ಇವರುಗಳಿಗೆ 05 ವರ್ಷ 01 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.