ತುಂಗಾ ನಗರ ವ್ಯಾಪ್ತಿಯಲ್ಲಿ ಗುಂಡಿನ ಸದ್ದು.! ಕೊಲೆ ಆರೋಪಿಯ ಕಾಲಿಗೆ ಗುಂಡು ತೂರಿಸಿದ ಖಡಕ್ ಇನ್ಸ್‌ಪೆಕ್ಟರ್ ಗುರುರಾಜ್.
ಅಶ್ವಸೂರ್ಯ/ಶಿವಮೊಗ್ಗ : ಇಂದು ಮಾಹಿತಿ ಅಧಾರದ ಮೇಲೆ ತುಂಗಾನಗರ ಇನ್ಸ್‌ಪೆಕ್ಟರ್ ಗುರುರಾಜ್ & ಟೀಮ್ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿಯ ಬಂಧನಕ್ಕಾಗಿ ಭಲೆ ಬಿಸಿದ್ದರು. ಆತನನ್ನು ಬಂಧಿಸುವ ಸಂದರ್ಭದಲ್ಲಿ ಆತ ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇನ್ಸ್‌ಪೆಕ್ಟರ್ ಗುರುರಾಜ್ ಶರಣಾಗುವಂತೆ ಎಷ್ಟು ಬಾರಿ ಹೇಳಿದರು ಆತ ಪೋಲಿಸ್ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ತಕ್ಷಣ ಆತ್ಮರಕ್ಷಣೆಗಾಗಿ ಗುರುರಾಜ್ ತಮ್ಮ ಸರ್ವಿಸ್ ರಿವಲ್ವಾರ್ ನಿಂದ 109(ಕೊಲೆ ಯತ್ನ) ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಅಮ್ಮು ಅಲಿಯಾಸ್ ಹಬಿಬುಲ್ಲಾನ ಕಾಲಿಗೆ ಗುಂಡು ತೂರಿಸಿದ್ದಾರೆ.
ತುಂಗಾನಗರ ಪೋಲಿಸ್ ಠಾಣೆಯ ಸರಹದ್ದಿನಲ್ಲಿ ಸೆ.13 ರಂದು ನಡೆದ 307 ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ. ಗುಂಡು ತಗುಲಿದ ಆರೋಪಿ ಹಬಿಬುಲ್ಲಾನನ್ನು ಕೂಡಲೇ ನಗರದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರ್ಯಚರಣೆಯಲ್ಲಿ ಪೋಲಿಸ್ ಸಿಬ್ಬಂದಿಗಳಿಗೂ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಬೀಬುಲ್ಲಾನಿಂದ ಹಲ್ಲೆಗೊಳಗಾದ ಕಾನ್‌ಸ್ಟೆಬಲ್ ಜಯಪ್ಪಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಮೆಗ್ಗಾನ್ ಆಸ್ಪತ್ರೆಗೆ
ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ಡಿವೈಎಸ್ಪಿ ಬಾಬು ಅಂಜನಪ್ಪ ಭೇಟಿ ನೀಡಿದ್ದರು.
ಸೆ.13 ರಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಹಬೀಬ್ ವುಲ್ಲಾನ ವಿರುದ್ದ 307 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವ್ಯಕ್ತಿಯೊಬ್ಬರಿಗ ಬೆನ್ನಿಗೆ ಚಾಕು ಹಾಕಿ ಆರೋಪಿ ಪರಾರಿಯಾಗಿದ್ದು ಆತನ ಪತ್ತೆಗಾಗಿ ಸಿಪಿಐ ಗುರುರಾಜ್ ನೇತೃತ್ವದ ತಂಡ ರಚನೆ ಮಾಡಲಾಗಿತ್ತು.
ಆರೋಪಿ ಹಬೀಬ್ ವುಲ್ಲಾ ಮೇಲೆ ರೌಡಿ ಶೀಟರ್,ಈತನ ಮೇಲೆ ಕೊಲೆ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳಿವೆ ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ.
ಕಬೀರ್ ಎಂಬಾತನ ಕೊಲೆ ಪ್ರಕರಣದಲ್ಲಿ ಹಬೀಬ್ 2020 ರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಹಬೀಬುಲ್ಲಾ ಜುಲೈನಲ್ಲಿ ಬಿಡುಗಡೆಯಾಗಿ ಬಂದವನು ಮತ್ತೆ ಕೊಲೆ ಮಾಡಲು ಯತ್ನಿಸಿದ್ದ ಈಗ ಪ್ರಕರಣದ ತನಿಖೆ ಮುಂದುವರೆದಿದೆ