ಲೋಕಾಯುಕ್ತರ ದಾಳಿ ಲಂಚದ ಹಣ ಪಡೆಯುವಾಗಲೆ ಬಿಬಿಎಂಪಿಯ ಇಬ್ಬರು ಸಿಬ್ಬಂದಿ ಬಂಧನ:ಎಸ್ಕೇಪ್ ಆಗಿರುವ ಪ್ರಮುಖ ಆರೋಪಿ ಕಂದಾಯ ಅಧಿಕಾರಿ ರಾಜ್ ಗೋಪಾಲ್ ಗಾಗಿ ಶೋಧ ಕಾರ್ಯ ಮುದುವರೆದಿದೆ…
ಬೆಂಗಳೂರು: ಬಿಬಿಎಂಪಿಯಲ್ಲಿ ಸ್ಥಿರಾಸ್ತಿಯೊಂದರ ಖಾತೆ ವರ್ಗಾವಣೆ ಮಾಡಿಕೊಡಲು ಒಂದು ಲಕ್ಷ ರೂಪಾಯಿ ಲಂಚ ಪಡೆದ ಬಿಬಿಎಂಪಿಯ ಕರಿಸಂದ್ರ 166ನೇ ವಾರ್ಡಿನ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಮುಖ್ಯ ಆರೋಪಿಯಾಗಿರುವ ಕಂದಾಯ ನಿರೀಕ್ಷಕ ರಾಜಗೋಪಾಲ್ ವಿಷಯ ತಿಳಿಯುತ್ತಿದ್ದ ಹಾಗೆ ತಲೆಮರೆಸಿಕೊಂಡಿದ್ದಾನೆ. ನಿಗದಿತ ಸ್ಥಳ ಒಂದರಲ್ಲಿ
ದೂರುದಾರರಿಂದ ಲಂಚದ ಹಣ ಪಡೆದ ಕರಿಸಂದ್ರ ವಾರ್ಡಿನ ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಮತ್ತು ಡೇಟಾ ಎಂಟ್ರಿ ಆಪರೇಟರ್ ಸುರೇಶ್ ಅವರನ್ನು ಲೋಕಾಯುಕ್ತ ಬೆಂಗಳೂರು ನಗರ ಘಟಕದ ಪೊಲೀಸರು ಬಂಧಿಸಿದ್ದಾರೆ. ಮೊದಲನೇ ಆರೋಪಿ ರಾಜಗೋಪಾಲ್ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.ರೋಹಿಣಿ ಎಂಬುವವರಿಂದ ಕರಿಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಖರೀದಿಸಿದ್ದರು. ಖಾತೆ ವರ್ಗಾವಣೆ ಪ್ರಕ್ರಿಯೆ ನಡೆಸಲು ಅರುಣ್ ಕುಮಾರ್ ಎಂಬ ವಕೀಲರಿಗೆ ಅಧಿಕಾರ ನೀಡಿದ್ದರು. ವಕೀಲರು ಅವರ ಪರವಾಗಿ ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಪ್ರಕ್ರಿಯೆ ಪೂರ್ಣಗೊಳಿಸಲು ಒಂದುಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಯ ಲಂಚದ ಹಣಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ನಂತರ ಭೇಟಿಮಾಡಿ ಮಾತುಕತೆ ನಡೆಸಿದಾಗ ಒಂದುಲಕ್ಷ ಕೊಡುವಂತೆ ಕೇಳಿದ್ದರು. ಮಂಗಳವಾರವೂ ವಕೀಲರು ಭೇಟಿಮಾಡಿದ್ದರು. ರಾಘವೇಂದ್ರ ಮತ್ತು ಸುರೇಶ್ ಬಳಿ ಹಣ ತಲುಪಿಸುವಂತೆ ರಾಜಗೋಪಾಲ್ ಸೂಚಿಸಿದ್ದರು. ಈ ಬಗ್ಗೆ ವಕೀಲರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು.ಬುಧವಾರ ಅರುಣ್ ಕುಮಾರ್ ಅವರು ಆರೋಪಿಗಳನ್ನು ಸಂಪರ್ಕಿಸಿದಾಗ. ಆರೋಪಿಗಳು ಜಯನಗರದ 25ನೇ ಅಡ್ಡರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಹಿಂಬದಿಗೆ ಬರುವಂತೆ ಹೇಳಿದ್ದರು ಅದರಂತೆ ಅರುಣ್ ಅ ಸ್ಥಳಕ್ಕೆ ಹೋಗಿ ಹಣ ನೀಡಿದ್ದಾರೆ ರಾಘವೇಂದ್ರ ಮತ್ತು ಸುರೇಶ್ ಲಂಚದ ಹಣ ಪಡೆದುಕೊಂಡ ತಕ್ಷಣವೇ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರ ತಂಡ ಇಬ್ಬರನ್ನೂ ಖೆಡ್ಡಕ್ಕೆ ಕೆಡವಿಕೊಂಡು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರನ್ನು ಬಂಧಿಸುತ್ತಿದ್ದಂತೆಯೇಪ್ರಮುಖ ಆರೋಪಿ ಕಂದಾಯ ನಿರೀಕ್ಷಕ ರಾಜಗೋಪಾಲ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಅವರ ಮನೆಯಲ್ಲೂ ಶೋಧ ನಡೆಸಿದ್ದು ಆತನ ಸುಳಿವು ಸಿಕ್ಕಿಲ್ಲ ಎಂದು ತನಿಖಾ ತಂಡ ತಿಳಿಸಿದೆ.
ತಲೆ ಮರೆಸಿಕೊಂಡಿರುವ ಕಂದಾಯ ನೀರಿಕ್ಷಕ ರಾಜಗೋಪಾಲನದು ಇದು ಎರಡನೇ ಪ್ರಕರಣ 2014ರಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಅವನನ್ನು ಬಂಧಿಸಿದ್ದರು. ಹಣದ ಹಿಂದೆ ಬಿದ್ದಿರುವ ರಾಜಗೋಪಾಲ್ ಗೆ ಎಷ್ಟು ಬಾರಿ ಲೋಕಾಯುಕ್ತರು ರೈಡ್ ಮಾಡಿದರು ಮತ್ತದೆ ಲಂಚಕ್ಕೆ ಕೈ ಒಡ್ಡುವ ಕೇಲಸ ಮಾತ್ರ ಬಿಡುವಂತೆ ಕಾಣುವುದಿಲ್ಲ ಈ ಮನುಷ್ಯ. ತಲೆ ಮರೆಸಿಕೊಂಡಿರುವ ಈತನಿಗಾಗಿ ಪೋಲಿಸರ ಕಾರ್ಯಚರಣೆ ಮುಂದುವರೆದಿದೆ
ಸುಧೀರ್ ವಿಧಾತ, ಶಿವಮೊಗ್ಗ