ಸೈನೈಡ್ ನೀಡಿ ಪತ್ನಿಯನ್ನೆ ಕೊಂದ ಪತಿ.! ಮೃತಳ ಗಂಡನನ್ನು ಸೇರಿ ನಾಲ್ವರನ್ನು ಬಂಧಿಸಿದ ಪೋಲಿಸರು.
ಅಶ್ವಸೂರ್ಯ/ಶಿವಮೊಗ್ಗ: ತಮಿಳುನಾಡಿನ ಊಟಿ ಬಳಿಯ ವನ್ನರಪೇಟೆಯಲ್ಲಿ ಮಹಿಳೆಯನ್ನು ಸೈನೈಡ್ ನಿಂದ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಊಟಿ ಪೊಲೀಸರು ಹತ್ಯೆಯಾದ ಮಹಿಳೆಯ ಪತಿ, ಅತ್ತೆ, ಸೋದರ ಮಾವ ಮತ್ತು ಅವರ ಸಂಬಂಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಜೂನ್ 24 ರಂದು ಆಶಿಕಾ ಪರ್ವೀನ್ (22) ತನ್ನ ಅತ್ತೆಯ ಮನೆಯಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡುಬಂದಿದ್ದರು.ತಕ್ಷಣವೇ ಆಶಿಕಾ ಅವರನ್ನು ಊಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಆಶಿಕಾ ಅವರ ಪೋಷಕರ ಹೇಳಿಕೆ ಅಧಾರದ ಮೇಲೆ ಆಕೆಯ ಪತಿ ಇಮ್ರಾನ್ (30), ಅತ್ತೆ ಯಾಸ್ಮಿನ್ (49), ಭಾವ ಮುಖ್ತಾರ್ (23) ಮತ್ತು ಅವರ ಸೋದರ ಸಂಬಂಧಿ ಖಲೀಬ್ (56) ಅವರನ್ನು ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಗಳ ಸಾವಿನಿಂದ ಮನನೊಂದ ಪೋಷಕರು ನನ್ನ ಮಗಳ ಸಾವು ಕೊಲೆ ಎಂದು ಭಾವಿಸಿದ ಮಹಿಳೆಯ ಕುಟುಂಬವು ಪೊಲೀಸರಿಗೆ ದೂರು ನೀಡಿತ್ತು.ದೂರು ದಾಖಲಿಸಿಕೊಂಡ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ವರದಿಯಲ್ಲಿ, ಸಂತ್ರಸ್ತೆಯನ್ನು ಕ್ರೂರವಾಗಿ ಥಳಿಸಲಾಗಿದೆ ಎಂದು ಗುರುತಿಸಲಾಗಿತ್ತು.ಮತ್ತು
ವರದಿಯ ಪ್ರಕಾರ, ಅವರ ಕುತ್ತಿಗೆ, ಭುಜಗಳು ಮತ್ತು ಪಕ್ಕೆಲುಬುಗಳಿಗೆ ಗಾಯಗಳಾಗಿವೆ. ತನಿಖೆಯ ಸಮಯದಲ್ಲಿ, ಮಹಿಳೆಯನ್ನು ಆಕೆಯ ಪತಿ ಮತ್ತು ಅವನ ಕುಟುಂಬ ಸದಸ್ಯರು ಸೈನೈಡ್ ನೀಡಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ಊಟಿ ಕಂದಾಲ್ ನಲ್ಲಿ 2021ರಲ್ಲಿ ಇಮ್ರಾನ್ ಮತ್ತು ಆಶಿಕಾ ಪರ್ವೀನ್ ಅವರ ವಿಹಾಹವಾಗಿತ್ತು. ಮದುವೆಯ ನಂತರ ಪತಿ ಮತ್ತು ಅತ್ತೆ ತನ್ನನ್ನು ಥಳಿಸುತ್ತಾರೆ ಎಂದು ಮಹಿಳೆ ತನ್ನ ಹೆತ್ತವರಿಗೆ ತಿಳಿಸಿದ್ದರಂತೆ. ಅದರೂ ಹೆತ್ತವರು ಇಂದಲ್ಲ ನಾಳೆ ಸರಿ ಹೋಗಬಹುದು ಎಂದುಕೊಂಡು ಸುಮ್ಮನಿದ್ದರಂತೆ.ಆದರೆ ರಾಕ್ಷಸ ಸ್ವರೂಪಿಯ ಆಕೆಯ ಗಂಡ ಮತ್ತು ಆತನ ಕುಟುಂಬದವರು ಮನೆಯ ಸೊಸೆ ಅಶಿಕಾರನ್ನು ಪರಿ ಪರಿಯಾಗಿ ಕಾಡಿ ಇನ್ನಿಲ್ಲದ ಚಿತ್ರಹಿಂಸೆ ನೀಡಿ ಆಕೆಯ ಉಸಿರನ್ನೆ ನಿಲ್ಲಿಸಿದ್ದಾರೆ.ಮನೆಯ ಸೊಸೆಯನ್ನು ಕೊಂದತಪ್ಪಗೆ ಈಗ.ಜೈಲಿಗೆ ಹೋಗಿದ್ದಾರೆ. ಇಂತಹ ನೀಚ ಮನಸ್ಥಿತಿಯ ಹಂತಕರಿಗೆ ಸರಿಯಾದ ಶಿಕ್ಷೆಯಾಗಬೇಕಿದೆ.