ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಲೆದಂಡ!
ಅಶ್ವಸೂರ್ಯ/ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಡದಂತೆ ಹೊಗೆಅಡುತ್ತಿದೆ. ಒಳ ಒಳಗೆ ಬೇಗುದಿ ಹೆಚ್ಚಾಗುತ್ತಿದ್ದು, ಹಾಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಅಸಮಾಧಾನದ ಅಲೆ ಎದ್ದಿದೆ.! ಈ ಹಿನ್ನಲೆಯಲ್ಲಿ ಶೀಘ್ರದಲ್ಲೇ ಅವರ ತಲೆದಂಡವಾದರೂ ಅಚ್ಚರಿಯಿಲ್ಲ ಎನ್ನುವ ಮಾತು ಬಿಜೆಪಿಯ ಪಡುಸಾಲೆಯಿಂದಲೆ ಪ್ರತಿಧ್ವನಿಸುತ್ತಿದೆ.!
ಬಿ ವೈ ವಿಜಯೇಂದ್ರ ವಿರುದ್ಧ ಉತ್ತರ ಕರ್ನಾಟಕದ ಕೆಲವು ಶಾಸಕರಲ್ಲಿ ಅಸಮಾಧಾನವಿದೆ. ಮೈಸೂರು ಚಲೋ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದ ಕೆಲವು ಬಿಜೆಪಿ ನಾಯಕರು ಈಗ ಉತ್ತರ ಕರ್ನಾಟಕದಲ್ಲಿ ಮತ್ತೊಂದು ಪಾದಯಾತ್ರೆಯ ಸಿದ್ಧತೆಗೆ ಮುಂದಾಗಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲವು ಶಾಸಕರು ಬಿವೈ ವಿಜಯೇಂದ್ರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈಗಾಗಲೇ ಬಿಜೆಪಿ ಅಸಮಾಧಾನ ಸರಿಪಡಿಸಲು ಆರ್ ಎಸ್ಎಸ್ ನಾಯಕರು ಕೂಡಾ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ನಡುವೆ ದೆಹಲಿ ನಾಯಕರಿಗೆ ಬಿ ವೈ ವಿಜಯೇಂದ್ರ ಬದಲಾವಣೆಗೆ ಹೆಚ್ಚಿದ ಒತ್ತಾಯದ ಹಿನ್ನಲೆಯಲ್ಲಿ ಬಿಜೆಪಿಯ ಹೈಕಮಾಂಡ್ ನಲ್ಲು ಚರ್ಚೆಯಾಗಿದೆ ಎನ್ನುವ ಮಾತು ಕೇಳಿಬಂದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಆರ್ ಅಶೋಕ್ ದೆಹಲಿ ನಾಯಕರೇ ವಿಜಯೇಂದ್ರ ಬದಲಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ರಾಜ್ಯ ಬಿಜೆಪಿಯ ವಿದ್ಯಮಾನಗಳ ಬಗ್ಗೆ ದೆಹಲಿ ನಾಯಕರ ಗಮನಕ್ಕೆ ತಂದಿರುವ ಅಶೋಕ್ ಪರಿಹಾರ ಕೊಡಲು ಕೇಳಿಕೊಂಡಿದ್ದಾರಂತೆ.ಹೀಗಾಗಿ ಸದ್ಯದಲ್ಲೇ ವಿಜಯೇಂದ್ರ ತಲೆದಂಡವಾದರೂ ಅಚ್ಚರಿಯಿಲ್ಲ.
ಹೌದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಗುಂಪುಗಾರಿಕೆ ಶುರುವಾಗಿದೆ ಯಾವಾಗ ಯಾರ ತಲೆದಂಡವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.