News
ನರೇಗಾ ಕೂಲಿ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡುವಂತೆ ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್ ಒತ್ತಾಯ
ನರೇಗಾ ಕೂಲಿ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡುವಂತೆ ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್ ಒತ್ತಾಯ ತೀರ್ಥಹಳ್ಳಿ : ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಸರ್ಕಾರ ಹಣ ಬಿಡುಗಡೆಗೊಳಿಸುತ್ತಿಲ್ಲ. ಆದರೆ ಅಧಿಕಾರಿಗಳು ಕೂಲಿ ಸಂಬಳವನ್ನು ನೀಡದೇ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವಂತೆ ಒತ್ತಡ ಹೇರುತ್ತಿದ್ದಾರೆ.ಕೂಲಿಗಾಗಿ ಕಾಳು ಎಂಬ ಯೋಜನೆಯಲ್ಲಿ ಕೆಲಸ ನಿರ್ವಹಿಸುವವರು ಕೂಲಿ ಕಾರ್ಮಿಕರಾಗಿರುತ್ತಾರೆ. ಒಂದೊತ್ತಿನ ಕೂಳಿಗೂ ಪರದಾಡುವಂತಿರುವವರು ಅನೇಕರಿರುತ್ತಾರೆ. ಕಳೆದ ಎರಡು ತಿಂಗಳುಗಳಿಂದ ನರೇಗಾ ಯೋಜನೆಯಡಿ ಹಣ ಬಿಡುಗಡೆ…
ಇತಿಹಾಸ ಪ್ರಸಿದ್ಧ, ನಂಬಿದವರನ್ನು ಕಾಪಾಡುವ ” ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮ ಲಿಂಗೇಶ್ವರ ಸ್ವಾಮಿ “
ತುಳುನಾಡ ಜನರ ಆರಾಧ್ಯ ದೈವ , ಮಕರ ಸಂಕ್ರಮಣ ದಿನದಂದು ವಿಜೃಂಭಣೆಯಿಂದ ಪೂಜೆಗೊಳ್ಳುವ ದೇವ , ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದು ಭೂಲೋಕದ ಧರೆಯಲ್ಲಿ ಕಾರಣೀಕ ದೈವವಾಗಿ ಮಾರಣಕಟ್ಟೆಯ ಧರೆಯಲಿ ನೆಲೆಸಿ ನಿಂದವನೇ ಶ್ರೀ ಬ್ರಹ್ಮಲಿಂಗೇಶ್ವರ ದೇವರುಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಬಳಿ ಇರುವ ಪುರಾಣ ಪ್ರಸಿದ್ಧ ಕ್ಷೇತ್ರವೇ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯ.ಶ್ರೀ ದೇವಿ ಮೂಕಾಂಬೆಯಿಂದ ಮೂಕಾಸುರನು ಹತನಾದ ಕ್ಷೇತ್ರ ಶ್ರೀ ಮಾರಣಕಟ್ಟೆಯಾಗಿ ಲಕ್ಷಾಂತರ ಭಕ್ತರನ್ನೊಳಗೊಂಡು ಪ್ರಸಿದ್ಧಿ ಪಡೆದಿದೆ.ಮೂಲೋಕದೊಡತಿ ಶ್ರೀ ಮೂಕಾಂಬಿಕೆಯಿಂದ ಮಡಿದ ಮೂಕಾಸುರ…
ಅರಳಸುರಳಿ ಬೆಂಕಿ ಪ್ರಕರಣ: ಚಿಕಿತ್ಸೆ ಫಲಿಸದೆ ಕೊನೆಯ ಪುತ್ರನೂ ಸಾವು
ಆತ್ಮಹತ್ಯೆಗೆ ಶರಣಾದ ಅರ್ಚಕ ರಾಘವೇಂದ್ರ ಕೇಕುಡ್ ಕುಟುಂಬ!! ಅರಳಸುರಳಿ ಬೆಂಕಿ ಪ್ರಕರಣ: ಚಿಕಿತ್ಸೆ ಫಲಿಸದೆ ಕೊನೆಯ ಪುತ್ರನೂ ಸಾವು ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಕೊಣಂದೂರು ಸಮೀಪದ ಅರಳಸುರುಳಿ ಗ್ರಾಮದ ಮನೆಯೊಂದರಲ್ಲಿ ರಾತ್ರೊ ರಾತ್ರಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಮೂವರು ಸುಟ್ಟು ಕರಕಲಾದರೆ ಮನೆಯ ಕೊನೆಯ ಮಗ ಭರತ್ ಸಾಕಷ್ಟು ಸುಟ್ಟು ಬದುಕಿಗಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಬದುಕಿಗಾಗಿ ಹೋರಾಟ ನಡೆಸುತ್ತಿದ್ದ. ಆತ ಕೂಡ ( ಭರತ್ (28) ) ಮಂಗಳವಾರ ಚಿಕಿತ್ಸೆ ಫಲಿಸದ ಹಿನ್ನಲೆಯಲ್ಲಿ ಕೊನೆ…
ಓರ್ವನ ಕೊಲೆಯಲ್ಲಿ ಅಂತ್ಯ ಕಂಡ ಗಣಪತಿ ವಿಸರ್ಜನಾ ಮೆರವಣಿಗೆ!!
ಹತ್ಯೆಯಾದ ಶ್ರೀನಿವಾಸ್ ಗಣಪತಿ ವಿಸರ್ಜನಾ ವೇಳೆ ಡ್ಯಾನ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡ ಪರಿಣಾಮ ಶ್ರೀನಿವಾಸ್ ಎಂಬಾತ ಸಾವನ್ನಪ್ಪಿದ್ದರೆ ರಂಜಿತ್ ಹಾಗೂ ಇಂದಿರಾ ಎಂಬುವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ತಿಂಗಳು ಸಹ ಅದೇ ಏರಿಯಾದಲ್ಲಿ ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ಹೋಗುವಾಗ ಡ್ಯಾನ್ಸ್ ಮಾಡುವ ವಿಚಾರಕ್ಕೆ ಶ್ರೀನಿವಾಸ್ ಮತ್ತು ವಿನಯ್, ಅಲೆಕ್ಸ್, ರಂಜಿತ್, ಪ್ರಶಾಂತ್ ನಡುವೆ ಜಗಳವಾಗಿತ್ತು. ನಿನ್ನೆ ಮತ್ತೊಂದು ಗಣೇಶನ ಮೂರ್ತಿಯನ್ನು ವಿಸರ್ಜನೆಗೆ ಮೆರವಣಿಗೆಯಲ್ಲಿ ಹೋಗುವಾಗ ಗಣಪತಿಯನ್ನು ಮೆರವಣಿಗೆಯ ಸಂಧರ್ಭದಲ್ಲಿ…
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯಂತೆ! ಈ ಗಾದೆ ಮಾತಿಗೆ ಪುಷ್ಠಿ ಸಿಕ್ಕಿದ್ದು ಶಿವಮೊಗ್ಗದ ಪೋಲಿಸ್ ಇಲಾಖೆಯಲ್ಲಿ!! ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯೊಬ್ಬರ ತಲೆ ದಂಡವಾಗಿದೆ. ಮಾಡದ ತಪ್ಪಿಗೆ ಶಿಕ್ಷೆ ಯಾಕೆ?
ಶಿವಮೊಗ್ಗ ಈದ್ ಗಲಾಟೆಗೆ ಸಂಬಂದಿಸಿದಂತೆ ಶಿವಮೊಗ್ಗ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕರಾದ ಅಭಯ್ ಪ್ರಕಾಶ್ ಸೋಮನಾಳ್ ಮತ್ತು ಮೂವರು ಪೋಲಿಸ್ ಕಾನ್ಸ್ಟೇಬಲ್ ಅಮಾನತು ಶಿವಮೊಗ್ಗ: ಇದೇ ಅಕ್ಟೋಬರ್ ಒಂದರೊಂದು ಶಿವಮೊಗ್ಗದಲ್ಲಿ ಅದ್ಧೂರಿ ಈದ್ ಮಿಲಾದ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಹಿನ್ನಲೆಯಲ್ಲಿ ಗಲಾಟೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಕೆಲ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದರು ದುಷ್ಕರ್ಮಿಗಳು. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ಕೂಡಲೇ ಶಿವಮೊಗ್ಗದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದರು. ಈ ಗಲಾಟೆ…