ಯಡಿಯೂರಪ್ಪ ಮತ್ತವರ ಪುತ್ರರ ವಿರುದ್ದ ಮತ್ತೊಮ್ಮೆ ಹರಿಹಾಯ್ದ ಕೆ ಎಸ್ ಈಶ್ವರಪ್ಪ
ಯಡಿಯೂರಪ್ಪ ಮತ್ತವರ ಪುತ್ರರ ವಿರುದ್ದ ಮತ್ತೊಮ್ಮೆ ಹರಿಹಾಯ್ದ ಕೆ ಎಸ್ ಈಶ್ವರಪ್ಪ ಅಶ್ವಸೂರ್ಯ/ಶಿವಮೊಗ್ಗ; ಬಿ.ವೈ.ರಾಘವೇಂದ್ರ ಚುನಾವಣೆಯಲ್ಲಿ ಸೋಲುತ್ತಾನೆ, ಬಿ.ವೈ. ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾನೆ, ಬಿಜೆಪಿಯಲ್ಲಿ ರಾಜಕಾರಣ ಶುದ್ಧಿಯಾಗುತ್ತದೆ. ಕುಟುಂಬ ರಾಜಕಾರಣ ಅಂತ್ಯವಾಗುತ್ತದೆ. ಹಿಂದುತ್ವವೇ ವಿಜೃಂಭಿಸುತ್ತದೆ. ಕೆ.ಎಸ್.ಈಶ್ವರಪ್ಪ ಗೆದ್ದು ಮೋದಿಯನ್ನು ಮತ್ತೇ ಪ್ರಧಾನಿಯನ್ನಾಗಿ ಮಾಡುತ್ತಾರೆ. ಇದು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿ ವಿರೋಧಿಗಳಿಗೆ ತೋಡೆ ತಟ್ಟಿರುವ ಕೆ.ಎಸ್. ಈಶ್ವರಪ್ಪನವರ ಮಾತುಗಳು.ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಅವರು ಮತ್ತೇ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ…