ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಉಗ್ರರು ಅಂದರ್, ಮೊಬೈಲ್ ರಿಪೇರಿ ಮಾಡಿಸಲುಹೋಗಿ ಎನ್ಐಎ ಖೆಡ್ಡಕ್ಕೆ ಬಿದ್ದ ಶಂಕಿತರು.!
ದಿಘಾ ಪಟ್ಟಣದಲ್ಲಿ ಎನ್ಐಎ ಶಂಕಿತ ಉಗ್ರ ರಾದ ಮುಸಾವಿರ್ ಮತ್ತು ತಾಹಾನನ್ನು ಶುಕ್ರವಾರ ಬಂಧಿಸಿದ್ದಾರೆ. ಕಳೆದ ಮಾರ್ಚ್ 25ರಂದು ಅವರಿಬ್ಬರು, “ನಾವು ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಸಿಗರು ಎಂದು ಹೇಳಿ ನ್ಯೂ ದಿಘಾದ ಗೆಸ್ಟ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದರಂತೆ.!ಬಾಂಬ್ ಬ್ಲಾಸ್ಟ್ ನ ಪ್ರಮುಖ ರೂವಾರಿಯಾದ ತಾಹಾನು ವಿಘ್ನೇಶ್ ಬಿ.ಡಿ., ಅನ್ಮೋಲ್ ಕುಲಕರ್ಣಿ ಹೆಸರಿನಲ್ಲಿ ಮತ್ತು ಇನ್ನೊಬ್ಬ ಶಂಕಿತ ಉಗ್ರ ಶಾಜೀಬ್ ಮಹಾರಾಷ್ಟ್ರದ ಪಾಲ್ಗಾರ್ನ ಯುಶಾ ಶಹನ್ವಾಜ್ ಪಟೇಲ್ ಹೆಸರಿನಲ್ಲಿ ಕೋಲ್ಕೊತಾದ ವಿವಿಧ ಲಾಡ್ಜ್ ಗಳಲ್ಲಿ ವಾಸ್ತವ್ಯ ಹೂಡಿದ್ದರಂತೆ. ಇನ್ನು ಕೆಲವು…