ಜುಗಾರಿ ಅಡ್ಡೆ….
ಶಿವಮೊಗ್ಗ : ಅಂದರ್ ಬಾಹರ್ (ಇಸ್ಪೀಟ್) ಆಡಬೇಕೆ.? ಹೊಳೆಹೊನ್ನೂರಿಗೆ ಬನ್ನಿ.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಹೊಳೆಹೊನ್ನೂರು ತಾಲೂಕಿನಲ್ಲಿ ಅಂದರ್ -ಬಾಹರ್ ಇಸ್ಪೀಟ್ ಜೂಜಾಟ ಮತ್ತು ಅಕ್ರಮ ಮರಳು ದಂಧೆ ಭರ್ಜರಿಯಾಗಿ ಬಲಿತುಕೊಂಡಿದೆ.! ಹೊಳೆಹೊನ್ನೂರು ಠಾಣಾ ಸರಹದ್ದು ಎಲ್ಲಾ ಅಕ್ರಮಗಳ ಮೈದಾನವಾಗಿದೆ. ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
“ಇಸ್ಪೀಟ್ ಆಡಲು ಹೊಳೆಹೊನ್ನೂರಿಗೆ ಬನ್ನಿ” ಇಂಥದೊಂದು ಫಲಕವನ್ನು ಊರಿನ ಹೆದ್ದಾರಿಯ ನಾಲ್ಕು ದಿಕ್ಕಿನಲ್ಲೂ ಅಳವಡಿಸುವುದೊಂದೆ ಬಾಕಿ ಇದೆ.! ಅಷ್ಟೊಂದು ಹದಗೆಟ್ಟಿದೆ ಇಲ್ಲಿನ ರಕ್ಷಣಾ ವ್ಯವಸ್ಥೆ.?ಅಕ್ರಮ ಮರುಳು ದಂಧೆ ಹಾಗೂ ಅಕ್ರಮ ಇಸ್ಪೀಟ್ ಮತ್ತು ಗಾಂಜಾ, ಗೋಮಾಂಸದ ಅಕ್ರಮ ದಂಧೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಗಲಲ್ಲಿ ರಾಜಾರೋಷವಾಗಿ ಇಸ್ಪೀಟ್ (ಅಂದರ್-ಬಾಹರ್) ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.
ತಾಲೂಕಿನ ಗ್ರಾಮಗಳ ನದಿ ಹಳ್ಳ, ಕೊಳ್ಳಗಳಲ್ಲಿ ಅಕ್ರಮ ಮರುಳು ದಂಧೆ ಎಗ್ಗಿಲ್ಲದೆ ಸಾಗಿದೆ.ಜೆಸಿಬಿ ಮುಖಾಂತರ ನದಿ ಹಳ್ಳ ಕೊಳ್ಳಗಳಿಂದ ಯಾರ ಭಯವಿಲ್ಲದೆ ಅಕ್ರಮಗಳ ದಂಧೆಕೋರರು ರಾಜಾರೋಷವಾಗಿ ಮರಳು ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. ಬ್ರೇಕ್ ಹಾಕಬೇಕಾದ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆ. ಇನ್ನೂ ಎಲ್ಲಾ ಅಕ್ರಮ ದಂಧೆಗಳು ಪೊಲೀಸರ ಕಣ್ಮುಂದೆ ನೆಡೆಯುತ್ತಿದ್ದರು ಮೌನಕ್ಕೆ ಜಾರಿದ್ದಾರೆ.ಕೆಲವು ಮಂದಿ ಪೊಲೀಸರಂತು ಪವಿತ್ರ ಖಾಕೀ ತೊಟ್ಟು ಪಾಪದ ಹಣಕ್ಕೆ ಕೈಯೊಡ್ಡುವ ಕಾಯಕವನ್ನು ಮಾಡುತ್ತಿದ್ದಾರೆ.
ಹಗಲು, ರಾತ್ರಿ ಎನ್ನದೆ ಇಸ್ಪೀಟ್ (ಅಂದರ್-ಬಾಹರ್) ಆಟದ ಸರಪರ ಸದ್ದು ಹೊಳೆಹೊನ್ನೂರು ಕಾನನದ ಗರ್ಭದಲ್ಲಿ ಪ್ರತಿಧ್ವನಿಸುತ್ತಿದೆ.!
ಕೈಮರ ಗ್ರಾಮದ ಸುತ್ತಮುತ್ತಲಿನಲ್ಲಂತೂ ಕೆಲವೊಂದು ಮನೆ ಕಾನನದ ಹುಲ್ಲುಹಾಸು ದರಗೆಲೆಗಳ ಮೇಲೆ ಇಸ್ಪೀಟ್ ಎಲೆಗಳ ಕಲರವ ಮುಗಿಲು ಮುಟ್ಟಿದೆ ರಾತ್ರಿ ಹಗಲೇನ್ನದೆ ಇಸ್ಪೀಟ್ ಆಟ ರಾಜಾರೋಷವಾಗಿ ನಡೆಯುತ್ತಿದೆ.ಈ ಜೂಜಿನ ಅಡ್ಡೆಗಳಿಗೆ ಮಳಿಯಾಳಿ ಮತ್ತು ಡಕ್ಕಾ ಇನ್ನೂ ಹಲವಾರು ಮಂದಿ ಅಕ್ರಮ ದಂಧೆಯ ಅಧಿತಿಗಳಾಗಿದ್ದಾರೆ. ಒಳಗೆ ಹೊರಗೆ (ಅಂದರ್ ಬಾಹರ್) ಎಂದು ಅಕ್ರಮ ಜೂಜಿನಡ್ಡೆಯ ದಾಸರಾಗಿರುವ ಸುತ್ತಮುತ್ತಲಿನ ಬಡ ರೈತರು ಮತ್ತು ಕೂಲಿ ಕಾರ್ಮಿಕರು ಜೂಜಿನಡ್ಡೆಯ ದಾಸರಾಗಿ ಮನೆ-ಮಟ, ಹೊಲ-ಗದ್ದೆ ಮತ್ತು ಇದ್ದಬದ್ದ ಬಂಗಾರ ಬೆಲೆಬಾಳುವ ವಸ್ತುಗಳನ್ನು ಇಸ್ಪೀಟ್ ಆಡಲು ಹಣಕ್ಕಾಗಿ ಮಾರಿ ತಮ್ಮ ಸಂಸಾರವನ್ನು ಬಿದಿಗೆ ತಂದಿಟ್ಟಿದ್ದಾರೆ.ಇಸ್ಪೀಟ್ ಆಟದ ದಾಸರಾಗಿರು ನೂರಾರು ಮಂದಿ ಅಮಾಯಕರು ಎಲ್ಲವನ್ನೂ ಕಳೆದುಕೊಂಡು ಬಿದಿಗೆ ಬಿದ್ದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಾಮೂಲು ಪಡೆಯುವ ಕೆಲವು ಪೊಲೀಸರೇ ಈ ಅಕ್ರಮ ಇಸ್ಪೀಟ್ ದಂಧೆಗೆ ನೆರಳಾಗಿ ನಿಂತಿದ್ದಾರೆ.! ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಅಕ್ರಮ ಗೋಮಾಂಸ ಸಾಗಣೆ,ಅಕ್ರಮ ಗಾಂಜಾ ದಂಧೆ ಹೊಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನೆಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದರ್ ಬಾಹರ್ ಕೂಡಾ ಹಳ್ಳಿ ಹಳ್ಳಿಗಳಲ್ಲಿ ಯಥೇಚ್ಛವಾಗಿ ನೆಡೆಯುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಅಧಿಕಾರಿಗಳು ಮುಂದಾಗುತ್ತಿಲ್ಲ. ಬದಲಾಗಿ ಕೆಲವು ಪೊಲೀಸರು ಅಧಿಕಾರಿಗಳೇ ಅಕ್ರಮದ ಅಡ್ಡೆಗೆ ಕಾಸಿಗೆ ಕೈಯೊಡ್ಡಿದ ಕಾರಣಕ್ಕೆ ದಂಧೆಗಳು ನಿತ್ಯ ನಡೆಯಲು ಕಾರಣವಾಗಿವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.! ಹೊಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಈ ಇಸ್ಪೀಟ್ ಜೂಜು ಮಿತಿಮೀರಿದೆ. ಪಟ್ಟಣ ಮತ್ತು ಹಳ್ಳಿಯ ಹೆಣ್ಣುಮಕ್ಕಳು ತೀವ್ರ ಆತಂಕದಲ್ಲಿದ್ದಾರೆ.

ಹೊಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ (ಅಂದರ್ ಬಾಹರ್) ಗೋಮಾಂಸ ಹಾಗೂ ಗಾಂಜಾ ಜೋತೆಗೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕಾದ ದೊಡ್ಡ ಜವಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಈ ಕೂಡಲೇ ಹಿರಿಯ ಅಧಿಕಾರಿಗಳು ಹೊಳೆಹೊನ್ನೂರು ಠಾಣಾ ಸರಹದ್ದಿನಲ್ಲಿ ನೆಡೆಯುತ್ತಿರುವ ಅಕ್ರಮಗಳಿಗೆ ಅದರಲ್ಲೂ ಮನೆಹಾಳು ಇಸ್ಪೀಟ್ (ಅಂದರ್ ಬಾಹರ್) ಜೂಜಿನಾಟಕ್ಕೆ ಬ್ರೇಕ್ ಹಾಕಬೇಕಿದೆ…

