Headlines

ಶಿವಮೊಗ್ಗ : 2026-27 ನೇ ಸಾಲಿನ ರೆಪರ್ಟರಿ ತಾತ್ಕಾಲಿಕ ಕಲಾವಿದ/ತಂತ್ರಜ್ಞರ ನೇಮಕಕ್ಕೆ ಅರ್ಜಿ ಆಹ್ವಾನ.

  1. ರಂಗಾಯಣ, ಶಿವಮೊಗ್ಗ ರೆಪರ್ಟರಿಗೆ 03 ಜನ ತಂತ್ರಜ್ಞರನ್ನು ನಿಯಾಮಾನುಸಾರ ನೇಮಕ
    ಮಾಡಿಕೊಳ್ಳಲಾಗುವುದು. (ಸಂಗೀತ/ಧ್ವನಿ-ಬೆಳಕು/ರಂಗಸಜ್ಜಿಕೆ-ವಸ್ತ್ರ ವಿಭಾಗ) ಪ್ರತಿ ವಿಭಾಗದಲ್ಲಿ
    ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರಬೇಕು.
    2) ತಂತ್ರಜ್ಞರಿಗೆ ಕನಿಷ್ಠ ಕನ್ನಡ ಭಾಷೆಯ ಓದುವ, ಬರೆಯುವ, ಗ್ರಹಿಸುವ ಸಾಮರ್ಥ್ಯವಿರಬೇಕು .
    3) ರಂಗಾನುಭವದ ಜೊತೆಗೆ ಶೈಕ್ಷಣಿಕ ಅರ್ಹತೆ ಮತ್ತು ರಂಗಶಿಕ್ಷಣದ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ
    ಆದ್ಯತೆ ನೀಡಲಾಗುವುದು.
    4) ಈ ನೇಮಕ ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಗೆ ಅಥವಾ
    ಮುಂದಿನ ಆದೇಶದವರೆಗೆ ಇರುತ್ತದೆ.
    5) ತಂತ್ರಜ್ಞರಿಗೆ ಸಂಚಿತ ವೇತನ ಕ್ರೋಢಿಕೃತವಾಗಿ ಮಾಸಿಕ ರೂ.25,000/-ಗಳನ್ನು ನೀಡಲಾಗುವುದು.
    ಇತರೆ ಯಾವುದೆ ಭತ್ಯೆಗಳು ಇರುವುದಿಲ್ಲ. ಊಟ, ವಸತಿ ವ್ಯವಸ್ಥೆಯನ್ನು ತಂತ್ರಜ್ಞರೇ ಮಾಡಿ
    ಕೊಳ್ಳಬೇಕು.
    6) ತಂತ್ರಜ್ಞರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸದೆ ಇದ್ದಲ್ಲಿ ಅವರ ನೇಮಕವನ್ನು ಯಾವುದೇ
    ಸಂದರ್ಭದಲ್ಲಿ ರದ್ದುಗೊಳಿಸುವ ಅಧಿಕಾರ ರಂಗಸಮಾಜಕ್ಕೆ ಇರುತ್ತದೆ.
    7) ತಂತ್ರಜ್ಞರ ನೇಮಕದ ಸಂದರ್ಭದಲ್ಲಿ ರೋಸ್ಟರ್ ನಿಯಮಗಳು ಕಡ್ಡಾಯವಾಗಿರುವುದಿಲ್ಲ. ತಂತ್ರಜ್ಞರಿಗೆ ವಯಸ್ಸಿನ ವಯೋಮಿತಿ ಇರುವುದಿಲ್ಲ.

https://forms.gle/a8WzJPhHoxPVMLeGA

Leave a Reply

Your email address will not be published. Required fields are marked *

Optimized by Optimole
error: Content is protected !!