ಶಿವಮೊಗ್ಗ : ಶಿವಮೊಗ್ಗ ನಗರ ಮತ್ತು ಜಿಲ್ಲೆಯಾದ್ಯಂತ CL-7 ಸನ್ನದು ನಿಯಮಗಳನ್ನು ಗಾಳಿಗೆ ತೂರಿದ ಮಾಲೀಕರು.!ಹೊದ್ದು ಮಲಗಿದ ಅಬಕಾರಿ ಇಲಾಖೆಯ ಅಧಿಕಾರಿಗಳು.!
ಭಾಗ-01.

news.ashwasurya.in
ಕರ್ನಾಟಕ ಅಬಕಾರಿ ಇಲಾಖೆಯ ನಿಯಮಗಳ ಸುತ್ತೋಲೆಯಂತೆ CL-7 ಸನ್ನದು (ಲೈಸೆನ್ಸ್) ಹೊಂದಿರುವವರು ವೈನ್ ಶಾಪ್ (CL-2) ರೀತಿ ಸಾರ್ವಜನಿಕವಾಗಿ ಮದ್ಯ ಮಾರಾಟ ಮಾಡಲು ಪ್ರತ್ಯೇಕ ಅಂಗಡಿ ಅಥವಾ ಕೌಂಟರ್ ತೆರೆಯುವಂತಿಲ್ಲ.ಕರ್ನಾಟಕ ಅಬಕಾರಿ ನಿಯಮಗಳು,1968ರ ಪ್ರಕಾರ ಪ್ರತಿಯೊಂದು ಸನ್ನದಿಗೂ ತನ್ನದೇ ಆದ ಪ್ರತ್ಯೇಕ ನಿಯಮಾವಳಿಗಳಿರುತ್ತವೆ. ಅವುಗಳ ವಿವರ ಇಲ್ಲಿದೆ:CL-7 ಮತ್ತು CL-2 ಸನ್ನದುಗಳ ನಡುವಿನ ಪ್ರಮುಖ ವ್ಯತ್ಯಾಸಗಳು ಸನ್ನದಿನ ಪ್ರಕಾರ (License Type)ಉದ್ದೇಶ ಮತ್ತು ನಿಯಮಗಳುCL-7 ಸನ್ನದು(Hotel & Boarding House) ಇದು ಕೇವಲ ಹೋಟೆಲ್ ಮತ್ತು ವಸತಿ ಗೃಹಗಳಿಗೆ ( ಬೋರ್ಡಿಂಗ್ & ಲಾಡ್ಜ್ )ಗೆ ನೀಡಲಾಗುವ ಸನ್ನದಾಗಿದೆ….

ಅಶ್ವಸೂರ್ಯ/ಶಿವಮೊಗ್ಗ : ಹೌದು CL-7 ಸನ್ನದು ಪಡೆದವರಲ್ಲಿ ಕೆಲವರ ದರ್ಬಾರ್ ಭರ್ಜರಿಯಾಗಿದೆ ಅ ಪರವಾನಿಗೆ ಬೆಲೆಯೇ ಇಲ್ಲದಂತಾಗಿ CL-7 ಸನ್ನದು ಹಿಡಿದು ಖಲ್ಲಮ್ ಖುಲ್ಲ ದುಖಾನು ತೆರದು ಚಿಲ್ಲರೆ ವ್ಯಾಪರಕ್ಕೆ ನಿಂತು ಬಿಟ್ಟಿದ್ದಾರೆ ಪರವಾನಿಗೆ ಪಡೆದ ಮಾಲಿಕರು.!! ಕೆಲವರಂತು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಚಿಲ್ಲರೆ ವ್ಯಾಪಾರದ ದುಖಾನು ತೆರೆದು MRP ಬೋರ್ಡ್ ಹಾಕಿಕೊಂಡು ದುಖಾನಿನ ಹಿಂಬಾಗದಲ್ಲೆ ತಮ್ಮ ಗಿರಾಕಿಗಳಿಗೆ ಹೆಂಡದ ನಶೆ ಏರಿಸಿಕೊಳ್ಳಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆಂದರೆ ನೀವು ನಂಬಲೆ ಬೇಕು ಅ ಮಟ್ಟಕ್ಕೆ ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆ ಬೆಚ್ಚಗೆ ಬಂದಷ್ಟು ಕಾಸು ಜೇಬಿಗಿಳಿಸಿಕೊಂಡು ಹೊದ್ದು ಮಲಗಿದೆ.!!ಸಾಲದ್ದಕ್ಕೆ ನಿಯಮಗಳನ್ನು ಪಾಲನೆ ಮಾಡದೆ CL-7 ಸನ್ನದು ಮಾಲಿಕರ ಬೆನ್ನಿಗೆ ನಿಂತು ಬಿಟ್ಟಿದ್ದಾರೆ ಅಬಕಾರಿ ಇಲಾಖೆಯ ಅಧಿಕಾರಿಗಳು,ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾಗಿರುವುದು ಕರ್ನಾಟಕ ಅಬಕಾರಿ ಇಲಾಖೆಯ ನಿಯಮಗಳ ಬಗ್ಗೆ.
ಕರ್ನಾಟಕ ಅಬಕಾರಿ ಇಲಾಖೆಯ ನಿಯಮಗಳ ಸುತ್ತೋಲೆಯಂತೆ CL-7 ಸನ್ನದು (ಲೈಸೆನ್ಸ್) ಹೊಂದಿರುವವರು ವೈನ್ ಶಾಪ್ (CL-2) ರೀತಿ ಸಾರ್ವಜನಿಕವಾಗಿ ಮದ್ಯ ಮಾರಾಟ ಮಾಡಲು ಪ್ರತ್ಯೇಕ ಅಂಗಡಿ ಅಥವಾ ಕೌಂಟರ್ ತೆರೆಯುವಂತಿಲ್ಲ.ಕರ್ನಾಟಕ ಅಬಕಾರಿ ನಿಯಮಗಳು,1968ರ ಪ್ರಕಾರ ಪ್ರತಿಯೊಂದು ಸನ್ನದಿಗೂ ತನ್ನದೇ ಆದ ಪ್ರತ್ಯೇಕ ನಿಯಮಾವಳಿಗಳಿರುತ್ತವೆ. ಅವುಗಳ ವಿವರ ಇಲ್ಲಿದೆ:CL-7 ಮತ್ತು CL-2 ಸನ್ನದುಗಳ ನಡುವಿನ ಪ್ರಮುಖ ವ್ಯತ್ಯಾಸಗಳು ಸನ್ನದಿನ ಪ್ರಕಾರ (License Type)ಉದ್ದೇಶ ಮತ್ತು ನಿಯಮಗಳುCL-7 ಸನ್ನದು(Hotel & Boarding House) ಇದು ಕೇವಲ ಹೋಟೆಲ್ ಮತ್ತು ವಸತಿ ಗೃಹಗಳಿಗೆ ( ಬೋರ್ಡಿಂಗ್ & ಲಾಡ್ಜ್ )ಗೆ ನೀಡಲಾಗುವ ಸನ್ನದಾಗಿದೆ. ಇಲ್ಲಿ ಕೇವಲ ವಸತಿ ಗೃಹದಲ್ಲಿ ಉಳಿದುಕೊಂಡಿರುವ ಗ್ರಾಹಕರಿಗೆ, ಅವರ ಅತಿಥಿಗಳಿಗೆ ಮತ್ತು ಅಲ್ಲಿಗೆ ಬರುವ ಸಂದರ್ಶಕರಿಗೆ ಮಾತ್ರ ಆವರಣದ ಒಳಗಡೆ ಮದ್ಯ ಸೇವಿಸಲು ಅವಕಾಶವಿರುತ್ತದೆ. CL-2 ಸನ್ನದು (Retail / Wine Shop) ಇದು ಸಾರ್ವಜನಿಕ ಚಿಲ್ಲರೆ ಮದ್ಯ ಮಾರಾಟ ಅಂಗಡಿ (ವೈನ್ ಶಾಪ್) ಆಗಿರುತ್ತದೆ. ಇಲ್ಲಿ ಸಾರ್ವಜನಿಕರು ಬಂದು ಬಾಟಲಿಗಳ ರೂಪದಲ್ಲಿ ಮದ್ಯವನ್ನು ಖರೀದಿಸಿ ಕೊಂಡೊಯ್ಯಬಹುದು (ಆದರೆ ಅಂಗಡಿಯ ಒಳಗೆ ಕುಡಿಯಲು ಅವಕಾಶವಿರುವುದಿಲ್ಲ).ಪ್ರಮುಖ ಕಾನೂನು ನಿಯಮಗಳು:ಸಾರ್ವಜನಿಕ ಮಾರಾಟಕ್ಕೆ ನಿಷೇಧ: CL-7 ಸನ್ನದಿನ ಅಡಿಯಲ್ಲಿ ಸಾರ್ವಜನಿಕ ರಸ್ತೆಗೆ ಮುಖಮಾಡಿ ಅಥವಾ ಸಾಮಾನ್ಯ ಗ್ರಾಹಕರು ಬಂದು ಮದ್ಯ ಖರೀದಿಸಿ ಕೊಂಡೊಯ್ಯುವ ರೀತಿಯಲ್ಲಿ ಯಾವುದೇ ಸ್ವತಂತ್ರ “ವೈನ್ ಶಾಪ್ ಕೌಂಟರ್” ತೆರೆಯುವುದು ಕಾನೂನುಬಾಹಿರವಾಗಿದೆ. ಆವರಣದ ಮಿತಿ: ಈ ಸನ್ನದಿನ ಮದ್ಯದ ವಹಿವಾಟು ಕೇವಲ ಪರವಾನಗಿ ಪಡೆದ ಹೋಟೆಲ್ ಕಟ್ಟಡದ ಆವರಣದ ಒಳಗಡೆ ಮಾತ್ರ ನಡೆಯಬೇಕು. ಹೊರಗಿನ ಸಾರ್ವಜನಿಕರಿಗೆ ಮುಕ್ತ ಪ್ರವೇಶದ ಕೌಂಟರ್ ಮಾಡುವಂತಿಲ್ಲ.ಕಾನೂನು ಕ್ರಮ: ಒಂದು ವೇಳೆ CL-7 ಲೈಸೆನ್ಸ್ ಬಳಸಿ ವೈನ್ ಶಾಪ್ ರೀತಿ ಸಾರ್ವಜನಿಕ ಕೌಂಟರ್ ತೆರೆದು ವ್ಯಾಪಾರ ಮಾಡಿದರೆ, ಅದು ಅಬಕಾರಿ ನಿಯಮಗಳ ಉಲ್ಲಂಘನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯು ಸನ್ನದನ್ನು ಅಮಾನತುಗೊಳಿಸುವ ಅಥವಾ ರದ್ದುಪಡಿಸುವ ಮತ್ತು ದಂಡ ವಿಧಿಸುವ ಸಂಪೂರ್ಣ ಅಧಿಕಾರ ಹೊಂದಿರುತ್ತದೆ.
ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳೆ CL-7 ಸನ್ನದು ಪಡೆದ ಮಾಲಿಕರಿಗೆ ಸಾರ್ವಜನಿಕವಾಗಿ ಚಿಲ್ಲರೆ ವ್ಯಾಪಾರಕ್ಕೆ ಕೌಂಟರ್ ತೆರೆಯಲು ಆವಕಾಶ ಮಾಡಿಕೊಟ್ಟಂತಿದೆ. ಶಿವಮೊಗ್ಗ ನಗರದಲ್ಲಿ CK-7 ಸನ್ನದು ಪಡೆದು ಚಿಲ್ಲರೆ ವ್ಯಾಪಾರದ ಕೌಂಟರ್ ತೆರದ ಅಂಗಡಿಗಳು ಸಾಕಷ್ಟಿದೆ ಸಾಲದ್ದಕ್ಕೆ ಶಿವಮೊಗ್ಗ ಜಿಲ್ಲೆಯಾದ್ಯಂತ ಇಂತಹ ಸಾಕಷ್ಟು CL-7 ಸನ್ನದು ಪಡೆದು ಸಾರ್ವಜನಿಕವಾಗಿ ಚಿಲ್ಲರೆ ಮಧ್ಯದ ಕೌಂಟರ್ ತೆಗೆದವರು ಸಾಕಷ್ಟು ಮಂದಿ ಇದ್ದಾರೆ ಈ ಕೂಡಲೇ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಎಲ್ಲಾ ಅಕ್ರಮ ವ್ಯವಹಾರಕ್ಕೆ ಬ್ರೇಕ್ ಹಾಕಿ ನಿಯಮ ಪಾಲನೆ ಮಾಡದ CL-7 ಮಾಲಿಕರಿಗೆ ಎಚ್ಚಿರಿಕೆ ಕೊಡಬೇಕಿದೆ. ಎಚ್ಚರಿಕೆ ಕೊಟ್ಟು ಮತ್ತದೆ ನಿಯಮಬಾಹಿರ ವ್ಯವಹಾರಕ್ಕೆ ಮುಂದಾದರೆ ಅಂತವರ CL-7 ಸನ್ನದು ರದ್ದು ಪಡಿಸಬೇಕು…ಇದು ನಿಮ್ಮಿಂದ ಸಾಧ್ಯವಾಗದೆ ಹೋದರೆ ನಿಮ್ಮ ಗೌರವಾನ್ವಿತ ಹುದ್ದೆಗೆ ರಾಜಿನಾಮೆ ಕೊಟ್ಟು ಹೊಗುವುದು ಸೂಕ್ತ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ…

ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಿ ಜಿಲ್ಲೆಯಲ್ಲಿ ನೆಡೆಯುತ್ತಿರುವ ಕೇಲವು CL-7 ಅಕ್ರಮ ವ್ಯವಹಾರಗಳಿಗೆ ಬ್ರೇಕ್ ಹಾಕಬೇಕಿದೆ.
ಶಿವಮೊಗ್ಗ ಜಿಲ್ಲೆಯ CL-7 ಸನ್ನದು ಮಾಲಿಕರು ನಿಯಮಗಳನ್ನು ಗಾಳಿಗೆ ತೂರಿ ಮತ್ತದೆ ವ್ಯವಹಾರ ಮುಂದುವರೆಸಿಕೊಂಡು ಹೋದರೆ ಮತ್ತು ಅಬಕಾರಿ ಇಲಾಖೆ ಕಂಡು ಕಾಣದವರಂತೆ ಕಣ್ಮುಚ್ಚಿ ಕುಳಿತರೆ ನೇರವಾಗಿ ಲೋಕಾಯುಕ್ತರಿಗೆ ದೂರು ದಾಖಲಿಸಿ ಮತ್ತು ಅಬಕಾರಿ ಸಚಿವರಿಗೂ ಹಾಗೂ ಗೌರವಾನ್ವಿತ ರಾಜ್ಯಪಾಲರಿಗೂ ದೂರು ನೀಡಲು ಮುಂದಾಗುವುದು..
ಭಾಗ-02 ರಲ್ಲಿ ಇನ್ನಷ್ಟು ವಿಡಿಯೋ ಮತ್ತು ಅವ್ಯವಹಾರಗಳ ಇನ್ನಷ್ಟು ಮಾಹಿತಿಯನ್ನು ನಿಮ್ಮ ಮುಂದಿಡಲಿದ್ದೇನೆ…

