ರಾಯಚೂರು : ಮಡದಿಯೂ ದೂರ ಮತ್ತೊಂದು ಕಡೆ ಸಾಲದಬಾರ ಪ್ರಸಿದ್ಧ ಸಿಂಧನೂರು ಜ್ಯುವೆಲರ್ಸ್ ಮಾಲೀಕನ ದುರಂತ ಅಂತ್ಯ.! ಡೆತ್ನೋಟ್ನಲ್ಲಿ ಏನಿದೆ.?
news.ashwasurya.in
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಒಂದು ಕಾಲದ ಪ್ರಸಿದ್ಧ ಜ್ಯೂವೆಲರ್ಸ್ಗಳಲ್ಲಿ ಒಂದಾದ ‘ಸಮರ್ಥ್ ಜ್ಯೂವೆಲರ್ಸ್’ನ ಮಾಲೀಕ ಪ್ರಾಣೇಶ್ ವರ್ಣೇಕರ್ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.! ಸುಮಾರು 2.5 ಕೋಟಿಗೂ ಅಧಿಕ ಸಾಲ ಮತ್ತು ಕೌಟುಂಬಿಕ ಕಲಹದಿಂದ ಮನನೊಂದು ಈ ನಿರ್ಧಾರಕ್ಕೆ ಬಂದಿರಬಹುದೆಂದು ಶಂಕಿಸಲಾಗಿದ್ದು ಪೊಲೀಸರ ತನಿಖೆ ಮುಂದುವರೆದಿದೆ….
ಅಶ್ವಸೂರ್ಯ/ಸಿಂಧನೂರು : ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಆದರ್ಶ ಕಾಲೋನಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದು ಹೋಗಿದೆ.? ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪಟ್ಟಣದಲ್ಲಿ ಪರಿಚಿತವಾಗಿದ್ದ ಚಿನ್ನದ ಅಂಗಡಿ ಮಾಲೀಕ ಪ್ರಾಣೇಶ್ ವರ್ಣೇಕರ್ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸೋಮವಾರ (ಮೇ 11) ಹಣ ಮರಳಿ ನೀಡುವುದಾಗಿ ಭರವಸೆ ನೀಡಿದ್ದರು, ಆದರೆ ಅದನ್ನು ಪೂರೈಸಲು ಸಾಧ್ಯವಾಗದೆ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸಿಂಧನೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಯ ಮುಖ್ಯ ಬಾಗಿಲು ತೆರೆದೇ ಆತ್ಮಹತ್ಯೆಗೆ ಶರಣು.? ಅನುಮಾನ ಹುಟ್ಟಿಸಿದೆ ಈ ಸಾವು.!
ಸಾಮಾನ್ಯವಾಗಿ ಪಟ್ಟಣದಲ್ಲಿ ಮನೆಗಳ ಬಾಗಿಲು ಮುಚ್ಚಿರುತ್ತವೆ. ಅದು ರಾತ್ರಿವೇಳೆ ಬಾಗಿಲು ತೆರೆದು ಯಾರೂ ಮಲಗುವುದಿಲ್ಲ. ಆದರೆ ಪ್ರಾಣೇಶ್ ಮನೆಯ ಬಾಗಿಲು ತೆರೆದಿದೆ.! ಒಳಗಡೆ ಪ್ರಾಣೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.!? ಈ ಪ್ರಕರಣ ಸ್ಥಳೀಯರಲ್ಲಿ ಅನುಮಾನ ಹುಟ್ಟಿಸಿದೆ. ಒಳಗೆ ಹೋಗಿ ನೋಡಿದಾಗ ಫ್ಯಾನ್ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪ್ರಾಣೇಶ್ ಅವರ ಶವ ಕಂಡುಬಂದಿದ್ದು, ಕುಟುಂಬಸ್ಥರು ಮತ್ತು ನೆರೆಹೊರೆಯವರು ಬೆಚ್ಚಿಬಿದ್ದಿದ್ದಾರೆ.
38 ವರ್ಷದ ಪ್ರಾಣೇಶ್ ವರ್ಣೇಕರ್ ಸಿಂಧನೂರಿನಲ್ಲಿ “ಸಮರ್ಥ್ ಜ್ಯೂವೆಲರ್ಸ್” ಎಂಬ ಚಿನ್ನದ ಅಂಗಡಿ ನಡೆಸುತ್ತಿದ್ದರು. ಚಿನ್ನದ ವ್ಯವಹಾರಗಳ ಜೊತೆಗೆ ಲೇವಾದೇವಿಯನ್ನೂ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಖಾಸಗಿ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಿದ್ದರು.
ಆದರೆ ಕಳೆದ ಕೆಲವು ತಿಂಗಳುಗಳಿಂದ ಆರ್ಥಿಕ ಸಂಕಷ್ಟ ಅವರ ಬದುಕನ್ನು ಛಿದ್ರ ಗೊಳಿಸಿದೆ ಎನ್ನಲಾಗುತ್ತಿದೆ. ಸುಮಾರು 2.5 ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದರೆಂಬ ಮಾಹಿತಿ ಹೊರಬಿದ್ದಿದೆ. ಇದೇ ಸಾಲದ ಒತ್ತಡ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಆದರೆ ಮನೆಯ ಮುಂಬಾಗಿಲನ್ನು ತೆರೆದು ಆತ್ಮಹತ್ಯೆ ಮಾಡಿಕೊಂಡಿರುವುದು ಸಹ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.? ಲೇವಾದೇವಿ ವಿಷಯಕ್ಕೆ ಸಂಬಂಧಿಸಿದಂತೆ ಈ ಸಾವಿನಲ್ಲಿ ಬೇರೆಯವರ ಕೈವಾಡ ಇರಬಹುದಾ.?ಈ ಹಾದಿಯಲ್ಲೂ ಯೋಚಿಸಬೇಕಿದೆ ಇದಕ್ಕಿಂತಲೂ ನೋವುಂಟು ಮಾಡಿದ ಸಂಗತಿ ಎಂದರೆ, ಇತ್ತೀಚೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ದೂರವಾಗಿದ್ದರೆಂಬ ಮಾಹಿತಿ ಇದೆ. ಒಂದೆಡೆ ಸಾಲದ ಕಾಟ… ಮತ್ತೊಂದೆಡೆ ವೈಯಕ್ತಿಕ ಬದುಕಿನ ಸಮಸ್ಯೆಗಳು… ಇವೆಲ್ಲವೂ ಅವರನ್ನು ಮಾನಸಿಕವಾಗಿ ಕುಗ್ಗಿಸಿ ಬದುಕು ಸಾಕೇನಿಸಿರಬಹುದೆ.? ಎಂಬ ಪ್ರಶ್ನೆ ಮೂಡಿಸಿದೆ.

ಆತ್ಮಹತ್ಯೆಗೆ ಮುನ್ನ ಪ್ರಾಣೇಶ್ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಡೆತ್ ನೋಟ್ನಲ್ಲಿ ಏನಿದೆ ಎಂಬುದರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.
ಘಟನೆ ತಿಳಿಯುತ್ತಿದ್ದಂತೆ ಸಿಂಧನೂರು ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ…


