

ಮಂಗಳೂರು : ಮತ್ತೆ ಜಳಪಿಸಿದ ಲಾಂಗು ಮಚ್ಚು.! ಮುಂಜಾನೆಯೆ ಹರಿಯಿತು ರೌಡಿಶೀಟರ್ ನೆತ್ತರು.!ಮಾರಕಾಸ್ತ್ರಗಳಿಂದ ಕಡಿದು ಟ್ಯಾಬ್ಲೆಟ್ ಆರಿಫ್ ಹತ್ಯೆ.!
news.ashwasurya.in
ಅಶ್ವಸೂರ್ಯ/ಮಂಗಳೂರು :ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್ನಲ್ಲಿ ಮುಂಜಾನೆ ರೌಡಿಶೀಟರ್ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬುಲೆಟ್ ಬೈಕ್ನಲ್ಲಿ ಹೋಗುತ್ತಿದ್ದ ಆರಿಫ್ಗೆ ಕಾರ್ನಿಂದ ಡಿಕ್ಕಿ ಹೊಡೆದ ಹಂತಕರು ಮಾರಕಾಸ್ತ್ರಗಳಿಂದ ಮನಸ್ಸೊ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಣ್ಣಗಿದ್ದ ದಕ್ಷಿಣಕನ್ನಡ
ಮಂಗಳೂರಿನಲ್ಲಿ ಮತ್ತೆ ನೆತ್ತರ ಘಮಲು ಕರಾವಳಿಯ ಸರಹದ್ದಿನಲ್ಲಿ ಪಸರಿಸಿದೆ.!ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿಯ ಫ್ಲೈಓವರ್ ಮೇಲೆ ಅರೀಫ್ ಬುಲೆಟ್ ಬೈಕಿನಲ್ಲಿ ಹೋಗುತ್ತಿರುವಾಗ
ದುಷ್ಕರ್ಮಿಗಳು ಕಾರಿನಲ್ಲಿ ಆತನನ್ನು ಹಿಂಬಾಲಿಸಿಕೊಂಡು ಬಂದು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿ 46 ವರ್ಷದ ರೌಡಿಶೀಟರ್ ಆರಿಫ್ ಯಾನೆ ಟಾಬ್ಲೆಟ್ ಆರಿಫ್ ಎಂದು ತಿಳಿದುಬಂದಿದೆ.
ಆರಿಫ್ ಯಾನೆ ಟಾಬ್ಲೆಟ್ ಆರಿಫ್, ಮುಳ್ಳುಗುಡ್ಡೆ ಹೌಸ್ ತಲಪಾಡಿ ನಿವಾಸಿಯಾಗಿದ್ದು ಈತ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕೂಡ ಆಗಿದ್ದ.

ತೊಕ್ಕೊಟ್ಟು ಫ್ಲೈ ಓವರ್ ಬ್ರಿಜ್ ಮೇಲೆಯೇ ಈ ಭಯಾನಕ ಕೊಲೆ ನಡೆದಿದ್ದು, ಬೈಕ್ನಲ್ಲಿ ತೆರಳುತ್ತಿದ್ದ ಆರಿಫ್ಗೆ ದುಷ್ಕರ್ಮಿಗಳ ತಂಡ ಹಿಂಬಾಲಿಸಿಕೊಂಡು ಬಂದು ಕಾರ್ ಡಿಕ್ಕಿ ಹೊಡಿಸಿ ಕೆಳಗೆ ಬೀಳಿಸಿದ್ದಾರೆ. ರಸ್ತೆಗೆ ಬಿದ್ದ ಆರಿಫ್ ಮೇಲೆ ತಕ್ಷಣವೇ ನಾಲ್ಕೈದು ಮಂದಿಯ ತಂಡ ಮಾರಕಾಸ್ತ್ರಗಳಿಂದ ದಾಳಿಮಾಡಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ಕಾರ್ನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಹತ್ಯೆಗೆ ಗ್ಯಾಂಗ್ ವಾರ್ ಕಾರಣ ಎಂಬ ಶಂಕೆ ಮೂಡಿದೆ. ಕಳೆದ 2022ರ ಮೇ ತಿಂಗಳಲ್ಲಿಯೂ ಇದೇ ರೀತಿ ಆರೀಫ್ ಕೊಲೆಗೆ ಯತ್ನ ನಡೆದಿತ್ತು ಅದು ವಿಫಲವಾಗಿತ್ತು.ಅಂದು ಬೈಕಲ್ಲಿ ಧಕ್ಕೆಗೆ ತೆರಳುತ್ತಿದ್ದ ವೇಳೆ ಬಜಾಲಿನ ಟೊಪ್ಪಿ ನೌಫಾಲ್ ಮತ್ತು ಆತನ ಗ್ಯಾಂಗ್ ದಾಳಿ ನಡೆಸಿ ಚೂರಿ ಇರಿದು ಕೊಲೆಗೆ ಯತ್ನಿಸಿತ್ತು.

ಪತ್ನಿ ನಾಲ್ವರು ಮಕ್ಕಳ ಕುಟುಂಬ ಆರೀಫ್ನದು.
ವಿವಾಹಿತನಾಗಿರುವ ಆರೀಫ್ ಪತ್ನಿ ಹಾಗೂ ಮೂರು ಗಂಡು, ಒಂದು ಹೆಣ್ಣು ಒಟ್ಟು ನಾಲ್ವರು ಮಕ್ಕಳನ್ನು ಅಗಲಿದ್ದಾನೆ. ಮೂಲತಃ ಕುದ್ರೋಳಿ ನಿವಾಸಿಯಾಗಿದ್ದು ಕಳೆದ ಆರೇಳು ವರುಷದಿಂದ ಕುಟುಂಬ ಸಮೇತ ಅಜ್ಜಿನಡ್ಕ ಬಳಿಯ ಮುಳ್ಳುಗುಡ್ಡೆ ಎಂಬಲ್ಲಿ ಮನೆ ಮಾಡಿ ವಾಸವಿದ್ದ. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಮತ್ತು ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.


