ರವಿಚಂದ್ರನ್ ನಿರ್ದೆಶನದ “ಶಾಂತಿ ಕ್ರಾಂತಿ” ರೀ ರಿಲೀಸ್ ಆಗೋತ್ತಾ.? ಕನಸುಗಾರನ “ಕೈ ಹಿಡಿತಾರ” ಕನ್ನಡಿಗರು.?

news.ashwasurya.in
ಅಶ್ವಸೂರ್ಯ/ಬೆಂಗಳೂರು : ಅಂದು ಭಾರತದ ಚಿತ್ರೋದ್ಯಮವೇ ಹೆಮ್ಮೆ ಪಡುವಂಥ ಚಿತ್ರಕ್ಕೆ ಮುಂದಾಗಿದ್ದರು ಕನ್ನಡದ ಕನಸುಗಾರ ಶ್ರೇಷ್ಠ ನಿರ್ದೇಶಕ ರವಿಚಂದ್ರನ್.ಚಿತ್ರ ರಸಿಕರಿಗೆ ಶಾಂತಿ ಮತ್ತು ಕ್ರಾಂತಿಯ ಎರಡೂ ರೂಪವನ್ನ ತೋರಿಸಲು ಮುಂದಾಗಿದ್ದರು.ಆದರೆ ಅದೇನು ಗ್ರಹಚಾರವೋ ಸಿನಿಮಾವನ್ನ ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ.ವಿಧಿ ಇಲ್ಲದೆ ರವಿಚಂದ್ರನ್ ಅವರು ದೊಡ್ಡಮಟ್ಟದ ಸೋಲನ್ನು ಸ್ವೀಕರಿಸುವಂತಾಗಿತ್ತು. ಈ ಸೋಲನ್ನು ಕೇವಲ ಪ್ರೇಕ್ಷಕರ ಮೇಲಷ್ಟೇ ಹೊರೆಸೋದು ಸರಿನೂ ಅಲ್ಲ. ಸ್ವತಃ ಸಿನಿಮಾ ರಂಗದವರೇ ಈ ಚಿತ್ರವನ್ನ ಮುಗಿಸೋಕೆ ಪ್ಲ್ಯಾನ್ ಮಾಡಿದ್ದರು. ಹೆಜ್ಜೆ ಹೆಜ್ಜೆಗೂ ರವಿಚಂದ್ರನ್ ಅವರಿಗೆ ಕೂಡ ಬಾರದ ತೊಂದರೆ ಕೊಟ್ಟಿದ್ದರಂತೆ. ಹಾಗಾದರೆ ಈ ಉತ್ತಮ ಚಿತ್ರದ ಸೋಲಿಗೆ ಕಾರಣ ಯಾರು.? ಎನ್ನುವುದು ಇಂದಿಗೂ ನಿಗೂಢವಾಗಿಯೆ ಉಳಿದಿದೆ.? ಒಂದು ಒಳ್ಳೆಯ ಚಿತ್ರದ ಜೋತೆಗೆ ಉತ್ತಮ ನಿರ್ದೇಶನ,ಉತ್ತಮ ಸಂಭಾಷಣೆ, ಉತ್ತಮ ಸಂಗೀತ ಶ್ರೇಷ್ಠಮಟ್ಟದ ಹಾಡುಗಳ ಜೋತೆಗೆ ಉತ್ತಮ ಛಾಯಾಗ್ರಹಣ ಸುಂದರವಾದ ಪರಿಸರದಲ್ಲಿ ಚಿತ್ರೀಕರಣಗೊಂಡ “ಶಾಂತಿ ಕ್ರಾಂತಿ” ಚಿತ್ರದಲ್ಲಿ ಶ್ರೇಷ್ಠ ನಾಯಕ ನಟ ನಟಿಯರ ದಂಡೆ ಇದ್ದು ಚಿತ್ರ ನೆಲಕಚ್ಚಿದ್ದು ಮಾತ್ರ ದುರಂತವೆ ಹೌದು.!? ಬಹು ನಿರೀಕ್ಷೆಯ ಚಿತ್ರದ ಸೋಲಿನಿಂದ ಇಂದಿಗೂ ರವಿಚಂದ್ರನ್ ಪರಿತಪಿಸುವಂತೆ ಮಾಡಿದೆ. ಸದ್ಯ ರೀ ರಿಲೀಸ್ ಅಂತಿರೋ ಪ್ರೇಕ್ಷಕರು ರವಿಚಂದ್ರನ್ ಅವರನ್ನ ಕೈ ಹಿಡೀತಾರಾ ಎನ್ನುವ ಪ್ರಶ್ನೆ ಕೂಡಾ ಅಭಿಮಾನಿಗಳ ಮುಂದಿದೆ.? ಇಂತಹ ಪ್ರಶ್ನೆ ಕನ್ನಡ ಚಿತ್ರರಂಗ ಅಲ್ಲದೆ ರವಿ ಅವರ ಅಪ್ತರು,ಕನ್ನಡಿಗರು ಹಾಗೂ ಕನಸುಗಾರನ ಅಭಿಮಾನಿಗಳನ್ನು ಕಾಡುತ್ತಿವೆ.

ರವಿಚಂದ್ರನ್ ಅವರ ವೃತ್ತಿ ಜೀವನದ ಅತ್ಯಂತ ದುಬಾರಿ ಸಿನಿಮಾ ಶಾಂತಿ ಕ್ರಾಂತಿ. ಈ ಸಿನಿಮಾದಿಂದ ಅವರಿಗಾದ ಲಾಸ್ ಅನ್ನು ಭರಿಸೋಕೆ ಅವರು ಹಲವಾರು ವರ್ಷಗಳ ಕಾಲ ಚಿತ್ರರಂಗದ ಪಟ್ಟ ಶ್ರಮ ಅ ದೇವರಿಗೆ ಗೋತ್ತು.?ಆದರೂ, ಕನ್ನಡಕ್ಕೊಂದು ಹೆಮ್ಮೆ ತರಬಲ್ಲಂತ ಸಿನಿಮಾ ಕನಸನ್ನು ಅವರು ಕಂಡಿದ್ದರು. ತಮಿಳು ಸಿನಿಮಾದ ಹೊರತಾಗಿ ಇತರ ಮೂರು ಭಾಷೆಗಳ ಚಿತ್ರಕ್ಕೂ ಅವರು “ಶಾಂತಿ ಕ್ರಾಂತಿ” ಎಂದೇ ಹೆಸರಿಟ್ಟಿದ್ದರು. ಅಷ್ಟರ ಮಟ್ಟಿಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಚಿತ್ರವನ್ನು ನಿರ್ಮಿಸಿದ್ದರು. ರಜನಿಕಾಂತ್, ನಾಗಾರ್ಜುನ ಅವರಂತಹ ಸ್ಟಾರ್ ನಟರುಗಳು ಇದ್ದ ಮೇಲೆ ಬಜೆಟ್ಗೆ ಲೆಕ್ಕ ಹಾಕಬಾರದು ಅನ್ನೋದು ಅವರ ಮೊದಲ ಉದ್ದೇಶವಾಗಿತ್ತು. ಇಂತಹ ಹುಂಬುತನವೇ ಅವರನ್ನು ಸೋಲಿನ ಸುಳಿಗೆ ಸಿಲುಕಿಸಿತ್ತು.
ರವಿಚಂದ್ರನ್ ಅವರು ಎಷ್ಟು ದುಬಾರಿಯ ಕನಸು ಕಂಡಿದ್ದರು ಅಂದರೆ, ಈ ಸಿನಿಮಾದಲ್ಲಿ ಮಧ್ಯರಾತ್ರಿಲೀ ಹೈವೇ ರಸ್ತೆಲಿ.. ಅನ್ನುವ ಸುಂದರವಾದ ಹಾಡೊಂದು ಇದೆ. ಬರೋಬ್ಬರಿ ಎಂಟು ನಿಮಿಷಗಳ ಹಾಡಿದು. ಈ ಗೀತೆಯನ್ನು ಚಿತ್ರೀಕರಣ ಮಾಡಿದ್ದು, ಬೆಂಗಳೂರಿನ ಪ್ರತಿಷ್ಠಿತ ಎಂಜಿ ರಸ್ತೆಯಲ್ಲಿ. ಇಡೀ ರೋಡಿಗೆ ಆಗಿನ ಕಾಲಕ್ಕೆ ಐದು ಲಕ್ಷ ರೂಪಾಯಿ ಖರ್ಚು ಮಾಡಿ ನೀರು ಸುರಿಸಿದ್ದರು. ಒಂದು ಟ್ಯಾಂಕ್ ನೀರು ಕೂಡ ಕಮ್ಮಿ ಆಗಬಾರದು, ಅವನು ಏನು ಕೇಳ್ತಾತ್ತಾನೆ, ಅದನ್ನು ಕೊಡಿ ಅಂತ ಪ್ರೊಡಕ್ಷನ್ ಅವರಿಗೆ ಸ್ವತಃ ವೀರಸ್ವಾಮಿ ಅವರೇ ಹೇಳಿದ್ದರಂತೆ. ಜೊತೆಗೆ ಅವತ್ತಿದ್ದ ಸೌಲಭ್ಯಗಳಲ್ಲಿ 25 ಕ್ಯಾಮೆರಾ ಇಟ್ಟುಕೊಂಡು ಶಾಂತಿ ಕ್ರಾಂತಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಮಾಡಿದ್ದರು ರವಿಚಂದ್ರನ್.!

ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುವುದಕ್ಕಾಗಿಯೇ ಬರೋಬ್ಬರಿ ಐವತ್ತು ಎಕರೆ ಜಾಗದಲ್ಲಿ ಸೆಟ್ ಹಾಕಲಾಗಿತ್ತು.
ಇಷ್ಟೆಲ್ಲ ಖರ್ಚು ಮಾಡಿ ಸಿನಿಮಾದ ಚಿತ್ರೀಕರಣ ಮಾಡುವಾಗ ಅನೇಕ ಅಡೆತಡೆಗಳನ್ನು ರವಿಚಂದ್ರನ್ ಎದುರಿಸಿದ್ದಾರೆ. ಸಡನ್ನಾಗಿ ರವಿಚಂದ್ರನ್ ಮೇಲೆ ಆರೋಪ ಹೊರಿಸಿ ಚಿತ್ರೀಕರಣಕ್ಕೆ ತೊಂದರೆ ಮಾಡಿದವರು ಇದ್ದಾರೆ. ಚಿತ್ರೋದ್ಯಮ ಬಂದ್ ಹೆಸರಿನಲ್ಲಿ ಬೇಕು ಅಂತಾನೇ ಕಿರುಕುಳ ಕೊಟ್ಟವರು ಇದ್ದಾರೆ. `ನಮ್ಮ ಸಿನಿಮಾಕ್ಕೆ ಒಂದು ದಿನ ತೊಂದರೆ ಕೊಟ್ಟುಬಿಟ್ಟರೆ ಸಾಕು, ಸಿನಿಮಾ ಒಂದು ವರ್ಷ ತಡವಾಗಿಬಿಡುತ್ತಿತ್ತು. ನಕಾರಣ ಮತ್ತೆ ರಜನೀಕಾಂತ್, ನಾಗಾರ್ಜುನ, ಜೂಹಿ ಚಾವ್ಲಾ ಅವರಂತಹ ಸ್ಟಾರ್ ನಟ ನಟಿಯರ ಡೇಟ್ಸ್ಗಳನ್ನೆಲ್ಲ ತೆಗೆದುಕೊಂಡು ಮತ್ತೆ ಚಿತ್ರೀಕರಣ ಮಾಡಬೇಕಿತ್ತು. ಶಾಂತಿ ಕ್ರಾಂತಿ ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ರವಿಚಂದ್ರನ್ ಇಂಡಸ್ಟ್ರಿಯ ಕೆಲವರಿಂದ ಅನುಭವಿಸಿದ ಕಷ್ಟ-ಅಷ್ಟಿಷ್ಟಲ್ಲ. ಪ್ರತಿ ಹೆಜ್ಜೆಯಲ್ಲೂ ಅಸಹಕಾರ ಮಾಡಿದರು’ ಅಂತ ಸ್ವತಃ ರವಿಚಂದ್ರನ್ ಅವರೇ ಅನೇಕ ಸಂದರ್ಭಗಳಲ್ಲಿ ಹೇಳಿದ್ದೂ ಇದೆ.

ದುಬಾರಿ ವೆಚ್ಚದಲ್ಲಿ ಸಿನಿಮಾ ಮಾಡಿದ್ದ ರವಿಚಂದ್ರನ್, ಈ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಮನವಿ ಮಾಡಿಕೊಂಡರು. ಸಿನಿಮಾದ ಟಿಕೆಟ್ ಅನ್ನು ಮೂರು ರುಪಾಯಿ ಹೆಚ್ಚು ಮಾಡಿ ಐದು ರೂಪಾಯಿ ಟಿಕೆಟ್ಗೆ ಮಾರುತ್ತೇನೆ ಎಂದು ಚಿತ್ರೋದ್ಯಮವನ್ನ ಕೇಳಿಕೊಂಡರು. ಆದರೆ ಯಾರೂ ಒಪ್ಪಲಿಲ್ಲ. ಅಂದು ಅವರು ಒಪ್ಪಿದ್ದಿದ್ದರೆ, ಶಾಂತಿ-ಕ್ರಾಂತಿ ಸಿನಿಮಾದ ಸಾಲವನ್ನ ಇನ್ನೊಂದು 5 ವರ್ಷ ಬೇಗ ತೀರಿಸುತ್ತಿದ್ದರಂತೆ ರವಿಚಂದ್ರನ್. ಸಿನಿಮಾ ನಷ್ಟ ಒಂದು ಕಡೆಯಾದರೆ, ಆಗಿರುವ ಅವಮಾನ ಅದಕ್ಕಿಂತ ದೊಡ್ಡದು. ಹಾಗಿರುವಾಗ ಶಾಂತಿಕ್ರಾಂತಿ ರೀರಿಲೀಸ್ ಮಾಡಿ, ಪ್ರೇಕ್ಷಕರು ಚಿತ್ರವನ್ನ ಗೆಲ್ಲಿಸಿದರೆ ಖಂಡಿತಾ ರವಿಚಂದ್ರನ್ ಖುಷಿ ಪಡುತ್ತಾರೆ. ಆದರೆ, ಸಿನಿಮಾದ ನೆಗೆಟಿವ್ ಇಲ್ಲ ಅನ್ನುವ ಮಾಹಿತಿ ಇದೆ. ನೆಗೆಟಿವ್ ಇಲ್ಲದೇ ಇರುವ ಕಾರಣದಿಂದಾಗಿ ಸದ್ಯ ಲಭ್ಯ ಇರುವ ಸಿನಿಮಾವನ್ನ ಅಪ್ ಗ್ರೇಡ್ ಮಾಡಿಸಿ, ಬಿಡುಗಡೆ ಮಾಡೋದು ಕಷ್ಟಸಾಧ್ಯ.
ಸಿನಿಮಾದ ನೆಗೆಟಿವ್ ಇಲ್ಲದ ಕಾರಣ, ಲಭ್ಯ ಇರುವ ವಿಡಿಯೋವನ್ನೇ ಬಳಸಿಕೊಂಡು ಥಿಯೇಟರ್ ಪ್ರಿಂಟ್ಗೆ ಬದಲಾಯಿಸೋಕೆ ಕೋಟಿ ಕೋಟಿ ಹಣಬೇಕು. ಜೊತೆಗೆ ಸಾಕಷ್ಟು ಸಮಯವೇ ಬೇಕಾಗುತ್ತದೆ. ಆ ತಾಳ್ಮೆಯನ್ನು ತಗೆದುಕೊಂಡು ಮಾಡೋರು ಯಾರು ಎನ್ನುವ ಪ್ರಶ್ನೆ ಇದೆ.? ರವಿಚಂದ್ರನ್ ಪುತ್ರ ವಿಕ್ರಮ್ ಈ ದೆಸೆಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಅನ್ನೋ ಮಾಹಿತಿ ಇದೆ. ಏನೇ ಆದರೂ, ಸದ್ಯಕ್ಕಂತೂ ಸಿನಿಮಾ ಬಿಡುಗಡೆ ಆಗೋದು ಅನುಮಾನ.
ಒಂದು ವೇಳೆ ಚಿತ್ರ ಮರು ಬಿಡುಗಡೆಯಾದರು, ಪ್ರೇಕ್ಷಕರು ಕೈ ಹಿಡಿತಾರಾ? ಅನ್ನೋದು ಮತ್ತೊಂದು ಅನುಮಾನವಿದೆ.ಸಧ್ಯಕ್ಕೆ ರವಿಚಂದ್ರನ್ ಅವರ ಬೆನ್ನಿಗೆ ಸಂಪೂರ್ಣ ಕರುನಾಡೆ ನಿಂತಂತೆ ಭಾಸವಾಗುತ್ತಿದೆ.ಅ ಮಟ್ಟಿಗೆ ದೊಡ್ಡಮಟ್ಟದ ಕ್ರೇಜ್ ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ.ಈ ಕ್ರೇಜ್ ಕೊನೆಯವರೆಗೂ ಉಳಿದುಕೊಳ್ಳಲು ಸಾಧ್ಯವಾ.? ಇಲ್ಲದೇ ಇದ್ದರೆ ಮತ್ತೆ ಶಾಂತಿಕ್ರಾಂತಿ ರವಿಚಂದ್ರನ್ ಪಾಲಿಗೆ ಕರಾಳ ಕನಸಾಗಲಿದೆ.

ದಯವಿಟ್ಟು ನನ್ನದು ಒಂದು ಮನವಿ ಎನೋ ಈ ಚಿತ್ರವೇನಾದರು ಮರು ಬಿಡುಗಡೆಯಾಗಿದ್ದೆ ಆದರೆ ದಯವಿಟ್ಟು ರವಿಚಂದ್ರನ್ ಅಪ್ತರು, ಚಿತ್ರರಸಿಕರು,ಪ್ರಮುಖವಾಗಿ ಕರುನಾಡಿನ ಪ್ರತಿಯೊಬ್ಬ ಜನತೆ ಕನಸುಗಾರ ರವಿಚಂದ್ರನ್ ಅವರ ಕೈ ಬಲಪಡಿಸಬೇಕಿದೆ. “ಶಾಂತಿ ಕ್ರಾಂತಿ” ಚಿತ್ರ ಬಿಡುಗಡೆಯಾದರೆ ಅ ಸಮಯದಲ್ಲಿ ನಿಮಗೆಲ್ಲಾ ಮರು ಬಿಡುಗಡೆಯಾದ “ಶಾಂತಿ ಕ್ರಾಂತಿ” ಚಿತ್ರವನ್ನು ನೋಡಲು ಸಮಯ ಇದ್ದರು ಇಲ್ಲದೆ ಇದ್ದರು ದಯವಿಟ್ಟು ಕನಸುಗಾರ ರವಿಚಂದ್ರನ್ ಕೈ ಹಿಡಿಯಲು ಇದೊಂದು ಸುವರ್ಣ ಅವಕಾಶ ಪ್ರತಿಯೊಬ್ಬ ಕನ್ನಡಿಗನು ಒಂದೊಂದು ಟಿಕೆಟ್ ಖರೀದಿಸಿ ಈ ಬಾರಿಯಾದರೂ ಚಿತ್ರದ ಗೆಲುವಿಗೆ ಕೈ ಜೋಡಿಸಿ ರವಿಚಂದ್ರನ್ ಮತ್ತೆ ಚಿತ್ರರಂಗದಲ್ಲಿ ನಿರ್ದೆಶಕರಾಗಿ ನೋಡುವಂತಹ ಭಾಗ್ಯ ನಮ್ಮೆಲ್ಲರದಾಗಲಿ……..


