ಗುವಾಹಟಿ ; ಫಾಸ್ಟೆಸ್ಟ್ ಡಬಲ್ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಶುಬ್ಮನ್ ಗಿಲ್,ವಿಂಡೀಸ್ ಬೌಲರ್ಗಳನ್ನು ಚಚ್ಚಿ ಶತಕ ಸಿಡಿಸಿದ ರೋಹಿತ್ ಶರ್ಮಾ.! ದಿಕ್ಕೆಟ್ಟು ಕುಳಿತ ವೆಸ್ಟ್ ಇಂಡೀಸ್.! ಇದು ಭಾರತಕ್ಕೆ ದಾಖಲೆಯ ಗೆಲುವು.! ಸರಣಿ ಭಾರತದ ಮಡಿಲಿಗೆ.
news.ashwasurya.in
ಅಶ್ವಸೂರ್ಯ/ಗುವಾಹಟಿ : ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಅಬ್ಬರಿಸಿದ ವಿಂಡೀಸ್ ಬ್ಯಾಟ್ಸ್ಮನ್ ಗಳು ದೊಡ್ಡ ಮೊತ್ತವನ್ನೆ ಭಾರತಕ್ಕೆ ಸವಾಲ್ ಆಗಿ ನೀಡಿದ್ದರು ಆದರೆ ಭಾರತ ಬ್ಯಾಟ್ಸ್ಮನ್ ಗಳು ಇದು ಯಾವ ಲೆಕ್ಕವಿಲ್ಲದಂತೆ ಬ್ಯಾಟಿಂಗ್ ನಲ್ಲಿ ಅಬ್ಬರಿಸಿ ಇನ್ನೂ 40 ಬಾಲುಗಳು ಮತ್ತು 8 ವಿಕೆಟ್ ಇರುವಂತೆ 406 ರನ್ ಚೇಸಿಂಗ್ ಮಾಡಿ ಇತಿಹಾಸ ಸೃಷ್ಟಿಸಿ ಗೆಲುವು ಸಾಧಿಸಿದ್ದಾರೆ. ಶುಬಮನ್ ಗಿಲ್ ಡಬಲ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಶುಬಮನ್ ಗಿಲ್ 2ನೇ ಡಬಲ್ ಸೆಂಚುರಿ ಮಾತ್ರವಲ್ಲ, ಹಲವು ದಾಖಲೆ ಬರೆದಿದ್ದಾರೆ. ಟೀಂ ಇಂಡಿಯಾ ನಾಯಕ ಶುಬಮನ್ ಗಿಲ್ ಐತಿಹಾಸಿಕ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಗಿಲ್ ಸ್ಫೋಟಕ ಡಬಲ್ ಸೆಂಚುರಿ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ನೀಡಿದ 406 ರನ್ ಟಾರ್ಗೆಟ್ ಚೇಸಿಂಗ್ ವೇಳೆ ಗಿಲ್ ಎಸೆತದಲ್ಲಿ ದ್ವಿಶತಕ ಸಿಡಿಸಿ ಅಬ್ಬರಿಸಿದ್ದಾರೆ. ಶುಬಮನ್ ಗಿಲ್ 2ನೇ ಬಾರಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇಷ್ಟೇ ಅಲ್ಲ ಶುಬಮನ್ ಗಿಲ್ ಏಕದಿನದಲ್ಲಿ ಅತೀ ವೇಗದಲ್ಲಿ ದ್ವಿಶತಕ ಸಿಡಿಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಕದಿನ ಪಂದ್ಯದಲ್ಲಿ ಶುಬಮನ್ ಗಿಲ್ ಕೇವಲ 117 ಎಸೆತದಲ್ಲಿ ಡಬಲ್ ಸೆಂಚುರಿ ಸಿಡಿಸಿದ್ದಾರೆ. ಇದಕ್ಕೂ ಮೊದಲು ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ ಇಶಾನ್ ಕಿಶನ್ 117 ಎಸೆತದಲ್ಲಿ ಡಬಲ್ ಸೆಂಚುರಿ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಇಶಾನ್ ಕಿಶನ್ ದಾಖಲೆಯನ್ನು ಗಿಲ್ ಮುರಿದಿದ್ದಾರೆ.
ಏಕದಿನದಲ್ಲಿ ಅತೀವೇಗದ ದ್ವಿಶತಕ ಸಾಧನೆ ಮಾಡಿದವರು :
ಶುಬಮನ್ ಗಿಲ್, 117 ಎಸೆತದಲ್ಲಿ ಡಬಲ್ ಸೆಂಚುರಿ,
ಇಶಾನ್ ಕಿಶನ್, 126 ಎಸೆತದಲ್ಲಿ ಡಬಲ್ ಸೆಂಚುರಿ,
ಗ್ಲೆನ್ ಮ್ಯಾಕ್ಸ್ವೆಲ್ 128,ಎಸೆತದಲ್ಲಿ ಡಬಲ್ ಸೆಂಚುರಿ,
ಪಿ ನಿಸಂಕಾ 136 , ಎಸೆತದಲ್ಲಿ ಡಬಲ್ ಸೆಂಚುರಿ,
ಕ್ರಿಸ್ ಗೇಲ್ 138 , ಎಸೆತದಲ್ಲಿ ಡಬಲ್ ಸೆಂಚುರಿ,
ಏಕದಿನದಲ್ಲಿ ರನ್ ಚೇಸಿಂಗ್ ವೇಳೆ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಶುಬಮನ್ ಗಿಲ್ ಪಾತ್ರರಾಗಿದ್ದಾರೆ. ಗಿಲ್ ಅಜೇಯ 223 ರನ್ ಸಿಡಿಸಿ ನಾಯಕನಾಗಿ ಜವಬ್ದಾರಿಯುತ ಆಟವಾಡಿ ಗೆಲುವು ತಂದುಕೊಟ್ಟಿದ್ದಾರೆ. ಇದಕ್ಕೂ ಮೊದಲು ಚೇಸಿಂಗ್ ವೇಳೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಅಜೇಯ 201 ರನ್ ಸಿಡಿಸಿದ್ದರು.

ಏಕದಿನ ರನ್ ಚೇಸಿಂಗ್ ವೇಳೆ ಗರಿಷ್ಠ ಸ್ಕೋರ್ ದಾಖಲೆ
ಶುಬಮನ್ ಗಿಲ್, ಅಜೇಯ 223, ರನ್
ಗ್ಲೇನ್ ಮ್ಯಾಕ್ಸ್ವೆಲ್, ಅಜೇಯ 201 ರನ್
ಫಖರ್ ಜಮಾನ್, 193 ರನ್
ಶೇನ್ ವ್ಯಾಟ್ಸನ್, ಅಜೇಯ 185 ರನ್
ಎಂಎಸ್ ಧೋನಿ, ಅಜೇಯ 183 ರನ್
ವಿರಾಟ್ ಕೊಹ್ಲಿ, 183 ರನ್
ಗರಿಷ್ಠ ಆರಂಭಿಕ ಪಾರ್ಟ್ನರ್ಶಿಪ್ ದಾಖಲೆ
ಶುಬಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಜೊತೆ ಮೊದಲ ವಿಕೆಟ್ಗೆ ದಾಖಲೆ ಜೊತೆಯಾಟ ನೀಡಿದ್ದಾರೆ. ಭಾರತದ ಪರ ಗರಿಷ್ಠ ಜೊತೆಯಾಟ ನೀಡಿದ 2ನೇ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಚಿನ್ ತೆಂಡೂಲ್ಕರ್ -ಸೌರವ್ ಗಂಗೂಲಿ 258 ರನ್ ಜೊತೆಯಾಟ
ರೋಹಿತ್ ಶರ್ಮಾ-ಶುಬಮನ್ ಗಿಲ್, 255 ರನ್ ಜೊತೆಯಾಟ
ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ, 252 ರನ್ ಜೊತೆಯಾಟ
ಶಿಖರ್ ಧವನ್-ಅಜಿಂಕ್ಯ ರಹಾನೆ, 231 ರನ್ ಜೊತೆಯಾಟ ಭಾರತ ಪರ ದಾಖಲಾಗಿದೆ…
————————————————
ವಿನೂ ಮಂಕಡ್ ಟ್ರೋಫಿ: ಕರ್ನಾಟಕ ತಂಡದ ನಾಯಕನಾಗಿ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಆಯ್ಕೆ!
ಅಂಡರ್-19 ಏಕದಿನ ಮಾದರಿಯ ಈ ಪಂದ್ಯಾವಳಿ ಅಕ್ಟೋಬರ್ 8 ರಿಂದ 16 ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಕರ್ನಾಟಕ ಅಂಡರ್ 19 ತಂಡವನ್ನು ಅನ್ವಯ್ ದ್ರಾವಿಡ್ ಮುನ್ನಡೆಸಲಿದ್ದಾರೆ…
ಬೆಂಗಳೂರು: ವಿನೂ ಮಂಕಡ್ ಟ್ರೋಫಿಗೆ ಕರ್ನಾಟಕ ತಂಡದ ನಾಯಕನಾಗಿ, ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಅವರನ್ನು ಬುಧವಾರ ನೇಮಕ ಮಾಡಲಾಗಿದೆ.
ಅಂಡರ್-19 ಏಕದಿನ ಮಾದರಿಯ ಈ ಪಂದ್ಯಾವಳಿ ಅಕ್ಟೋಬರ್ 8 ರಿಂದ 16 ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಕರ್ನಾಟಕ ಅಂಡರ್ 19 ತಂಡವನ್ನು ಅನ್ವಯ್ ದ್ರಾವಿಡ್ ಮುನ್ನಡೆಸಲಿದ್ದಾರೆ.
ಬಲಗೈ ವಿಕೆಟ್ ಕೀಪರ್-ಬ್ಯಾಟರ್ ದ್ರಾವಿಡ್ ಇತ್ತೀಚೆಗೆ ರಾಜ್ಕೋಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತ ಅಂಡರ್-19 ತಂಡದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದರು.


