ಖ್ಯಾತ ಕಂಟೆಂಟ್ ಕ್ರಿಯೇಟರ್ ಹೆಂಡತಿ ಬಸ್ ಕಂಡೆಕ್ಟರ್ ಜೊತೆ ಎಸ್ಕೇಪ್.!

news.ashwasurya.in
ಅಶ್ವಸೂರ್ಯ/ಕೇರಳ : ಸೋಶಿಯಲ್ ಮೀಡಿಯಾ ಮೂಲಕ ರೀಲ್ಸ್ ಮಾಡಿ ಜನರ ಮನ ಗೆದ್ದವರು ಅದೇಷ್ಟೋ ಮಂದಿ ಇದ್ದಾರೆ. ಇತ್ತೀಚೆಗೆ ಕಂಟೆಂಟ್ ಕ್ರಿಯೇಟರರ್ಸ್’ಗಳು ಹೆಚ್ಚಾಗುತ್ತಿದ್ದು, ಕೆಲ ಕಂಟೆಂಟ್ ಕ್ರಿಯೆಟರ್ಸ್’ಗಳ ವಿವಾಹ ಜೀವನದಲ್ಲಿ ಬಿರುಕುಗಳು ಮಾಡುತ್ತಿರುವುದು ಇತ್ತೀಚೆಗೆ ಸಾಕಷ್ಟು ವರದಿಯಾಗಿದೆ.
ಇದೀಗ ಇಂತಹ ವರದಿಗಳ ಸಾಲಿಗೆ ಸಾಕ್ಷಿ ಎನ್ನುವಂತೆ ಕೇರಳದಲ್ಲೊಂದು ಘಟನೆ ನಡೆದು ಹೋಗಿದೆ.
ಹೌದು… ಖ್ಯಾತ ಕಂಟೆಂಟ್ ಕ್ರಿಯೇಟರ್ ಹಾಗೂ ಮಾಲಿವುಡ್ ನಟನಾಗಿ ಗುರುತಿಸಿಕೊಂಡಿರುವ ಫೇಮಸ್ ಯೂಟ್ಯೂಬರ್ ಅಖಿಲ್ ಎನ್ ಆರ್ ಡಿ ಅವರ ಪತ್ನಿ ರಾತ್ರೋ ರಾತ್ರಿ ಬಸ್ ಕಂಡೆಕ್ಟರ್ ಜೊತೆ ಓಡಿ ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಖಿಲ್ ಹಾಗೂ ಮೇಘ ಜೋಡಿ ಕೇರಳ ಕಂಟೆಂಟ್ ಕ್ರಿಯೇಟರ್ಸ್’ಗಳಲ್ಲಿ ಟಾಪ್ ಲಿಸ್ಟ್’ನಲ್ಲಿದ್ದಾರೆ. ಹಲವಾರು ವಿಡಿಯೋ, ವ್ಲಾಗ್ ಪೋಸ್ಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದ ಇವರು ಈಗ ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಮೋಜ್ ವೀಡಿಯೊಗಳಂತಹ ಅನೇಕ ವೀಡಿಯೊಗಳೊಂದಿಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರು..
ಇದೀಗ ಅಖಿಲ್ ಪತ್ನಿ ಮೇಘ ದಿಢೀರ್ ಆಗಿ ಬಸ್ ಕಂಡೆಕ್ಟರ್ ಜೊತೆ ಓಡಿ ಹೋಗಿದ್ದು, ರಾತ್ರಿ ವೇಳೆ ಲಗೇಜ್ ಹಿಡಿದುಕೊಂಡು ಮನೆಯಿಂದ ಓಡಿ ಹೋಗುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ಮರ್ಚೆಂಟ್ ನೇವಿಯ ಭಾಗವಾಗಿದ್ದ ಅಖಿಲ್ ಅವರ ಬಾಳಿನಲ್ಲಿ ನಡೆದ ಈ ಘಟನೆ ಎಲ್ಲರಿಗೂ ಶಾಕ್ ನೀಡಿದೆ. ಇವರಿಬ್ಬರೂ ನೆರೆಹೊರೆಯವರು ಎನ್ನಲಾಗಿದ್ದು, ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದಾರೆಂದು ತಿಳಿದು ಬಂದಿದೆ.
ಆದರೆ, ಓಡಿ ಹೋಗಿರುವ ಮೇಘ, ಅಖಿಲ್ ಗೆ ಬೇರೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದ್ದು, ಹಾಗೇನಾದರೂ ಇದ್ದಿದ್ದರೆ ಇಬ್ಬರು ಮಾತಾಡಿಕೊಂಡು ಡಿವೋರ್ಸ್ ಪಡೆಯಬಹುದಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖರೊಂದಿಗೆ ಅಖಿಲ್ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ.
ಪ್ರೇಮ ವಿವಾಹ: ಅಖಿಲ್ ಮತ್ತು ಬಿಎಸ್ಸಿ ಎಲ್ಎಲ್ಬಿ ಪದವೀಧರೆಯಾದ ಮೇಘಾ ಬಾಲ್ಯದ ಸ್ನೇಹಿತರಾಗಿದ್ದು, ಪ್ರೀತಿಸಿ ನವೆಂಬರ್ 2024 ರಲ್ಲಿ ಮದುವೆಯಾಗಿದ್ದರು. ಇವರ ದಾಂಪತ್ಯ ಜೀವನಕ್ಕೆ ಕೇವಲ ಒಂದೂವರೆ ವರ್ಷ ಆಗಿತ್ತು.
ಅಖಿಲ್ ಅವರು ಪತ್ನಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ತನಿಖೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಮೇಘಾ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಖಾಸಗಿ ಬಸ್ ಕಂಡಕ್ಟರ್ (ಕೆಲವು ವರದಿಗಳ ಪ್ರಕಾರ ಬಸ್ ಡ್ರೈವರ್) ಜೊತೆ ಓಡಿಹೋಗಿರುವುದು ಬೆಳಕಿಗೆ ಬಂದಿದೆ. ಮೇಘಾ ಅವರಿಗೆ ಕೋರ್ಸ್ ಒಂದನ್ನು ಕಲಿಯಲು ಅಖಿಲ್ ಅವರು ಪ್ರತಿದಿನ ಬಸ್ನಲ್ಲಿ ಕಳುಹಿಸುತ್ತಿದ್ದರು, ಆ ಸಮಯದಲ್ಲಿ ಈ ಕಂಡಕ್ಟರ್ನೊಂದಿಗೆ ಪರಿಚಯವಾಗಿತ್ತು ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಅಖಿಲ್ ಅವರ ಸ್ನೇಹಿತ ಸಾಯಿ ಕೃಷ್ಣ ಅವರು ಮೇಘಾ ಅವರನ್ನು ಗುರಿಯಾಗಿಸಿಕೊಂಡು ನಿಂದಿಸದಂತೆ ಮನವಿ ಕೂಡ ಮಾಡಿಕೊಂಡಿದ್ದಾರೆ.


