ಮಂಗಳೂರು : ವಾಮಂಜೂರು 2021ರಲ್ಲಿ ನೆಡೆದ ಬಾಲಕಿ ಅತ್ಯಾಚಾರ ಭೀಕರ ಕೊಲೆ ಪ್ರಕರಣದ ಮೂವರು ಆರೋಪಿಗಳ ಗಲ್ಲು ಶಿಕ್ಷೆ ಖಾಯಂ ಗೋಳಿಸಿ ಆದೇಶ ಹೊರಡಿಸಿದ ಹೈಕೋರ್ಟ್.

news.ashwasurya.in
ಅಶ್ವಸೂರ್ಯ/ಮಂಗಳೂರು : ವಾಮಂಜೂರು ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ ಮೂವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಖಾಯಂ ಗೋಳಿಸಿದ ಹೈಕೋರ್ಟ್
ಮಂಗಳೂರಿನ ವಾಮಂಜೂರಿನಲ್ಲಿ ನಡೆದಿದ್ದ 8 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪನ್ನು ಹೈಕೋರ್ಟ್ ಪ್ರಕಟಿಸಿದೆ. ವಿಚಾರಣಾ ನ್ಯಾಯಾಲಯವು ಅಪರಾಧಿಗಳಾದ ಜೈಬನ್ ಆದಿವಾಸಿ, ಮುಕೇಶ್ ಸಿಂಗ್ ಮತ್ತು ಮನೀಶ್ ತಿರ್ಕಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಉನ್ನತ ನ್ಯಾಯಾಲಯವು ಎತ್ತಿ ಹಿಡಿದಿದೆ. ಈ ಘಟನೆಯು ಸಮಾಜದ ಆತ್ಮಸಾಕ್ಷಿಗೆ ಆಘಾತವುಂಟು ಮಾಡುವಂತದ್ದು ಮತ್ತು ಇಂತಹ ಕ್ರೂರ ಕೃತ್ಯಗಳಿಗೆ ಶಿಕ್ಷೆ ಕಡಿಮೆ ಮಾಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

2021ರ ನವೆಂಬರ್ 21ರಂದು ಉಳೈಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಈ ಅಮಾನವೀಯ ಕೃತ್ಯ ನಡೆದಿತ್ತು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಅಪರಾಧಿಗಳು, ತಮಗೆ ಪರಿಚಿತಳಾಗಿದ್ದ ಬಾಲಕಿಗೆ ತಿಂಡಿ ಕೊಡಿಸುವ ನೆಪದಲ್ಲಿ ಕರೆದೊಯ್ದು ಕಾಮತೃಷೆ ತೀರಿಸಿಕೊಂಡಿದ್ದರು. ವೈದ್ಯಕೀಯ ವರದಿಗಳ ಪ್ರಕಾರ ಸಂತ್ರಸ್ತೆಯ ಮೇಲೆ ತೀವ್ರವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದ್ದು, ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಚರಂಡಿಗೆ ಎಸೆಯಲಾಗಿತ್ತು. ಸಿಸಿ ಕ್ಯಾಮೆರಾ ದೃಶ್ಯಗಳು ಮತ್ತು ಎಫ್ಎಸ್ಎಲ್ ವರದಿಗಳನ್ನು ಆಧರಿಸಿ ಆರೋಪಿಗಳ ವಿರುದ್ಧ ಪೊಲೀಸರು ಬಲಿಷ್ಠ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಒದಗಿಸಿದ್ದರು.

ಆರೋಪಿಗಳು ತಮಗೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ಹೈಕೋರ್ಟ್, ಈ ಪ್ರಕರಣವು “ಅಪರೂಪದಲ್ಲಿ ಅಪರೂಪದ” ಗುಂಪಿಗೆ ಸೇರುತ್ತದೆ ಎಂದು ಹೇಳಿದೆ. ಸಂತ್ರಸ್ತೆಯ ನಂಬಿಕೆಯನ್ನು ದ್ರೋಹ ಮಾಡಿ ನಡೆಸಲಾದ ಈ ಪೈಶಾಚಿಕ ಕೃತ್ಯಕ್ಕೆ ಗಲ್ಲು ಶಿಕ್ಷೆಯೇ ಸಮಂಜಸ ಎಂದು ನ್ಯಾಯಾಲಯ ಸಾರಿದೆ. ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ತಲಾ 40 ಸಾವಿರ ರೂಪಾಯಿ ದಂಡವನ್ನು ಕೂಡ ಹೈಕೋರ್ಟ್ ಎತ್ತಿ ಹಿಡಿದು, ನ್ಯಾಯವನ್ನು ಎತ್ತಿ ಹಿಡಿದಿದು ಅ ಮಗುವಿನ ಆತ್ಮಕ್ಕೆ ಒಂದಷ್ಟು ಶಾಂತಿ ದೊರಕುವಂತಾಗಿದೆ.


