

ದಾವಣಗೆರೆ : ಮದುವೆಯಾಗಿ ಎರಡೆ ತಿಂಗಳಿಗೆ ಓಡಿ ಹೊದ್ಲು ಮಡದಿ.! ಮನನೊಂದು ಗಂಡ ಆತ್ಮಹತ್ಯೆಗೆ ಶರಣು.!ಹುಡುಗನ ಸಾವಿನ ಸುದ್ದಿ ಕೇಳಿ ಮದುವೆ ಮಾಡಿಸಿದ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣು.!!

news.ashwasurya.in
ಅಶ್ವಸೂರ್ಯ/ದಾವಣಗೆರೆ : ಹರೀಶ್ ನೇಣಿಗೆ ಶರಣಾಗುವ ಮುನ್ನವೇ ಡೆತ್ ನೋಟ್ ಸಹ ಬರೆದಿಟ್ಟಿದ್ದಾನೆ. ತನ್ನ ಸಾವಿಗೆ ಹೆಂಡತಿ, ಅತ್ತೆ ಮಾವ ಹಾಗೂ ಹೆಂಡತಿಯನ್ನು ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಬರೆದಿಟ್ಟು ಹರೀಶ್ ನೇಣಿಗೆ
ಶರಣಾಗಿದ್ದಾನೆ. ಪ್ರೀತಿ-ಪ್ರೇಮ ಅಂತ ಮದುವೆಗೆ ಮುನ್ನವೇ ಬಾಯ್ ಫ್ರೆಂಡ್ ಜೊತೆ ಓಡಾಡಿದ್ದ ಯುವತಿ, ಮನೆಯವರ ಒತ್ತಾಯಕ್ಕೋ ಅಥವಾ ಬೇರೆ ಯಾವ ಕಾರಣಕ್ಕೆ ದಾವಣಗೆರೆಯ ಹರೀಶನನ್ನು ಮದುವೆಯಾಗಿದ್ದಳೋ ಅ ದೇವರಿಗೆ ಗೊತ್ತು. ಅದ್ಧೂರಿಯಾಗಿ ಮದುವೆಯಾಗಿ ಗಂಡನ ಮನೆ ಸೇರಿದ ಎರಡೇ ತಿಂಗಳಿಗೆ ಎಸ್ಕೇಪ್ ಆಗಿದ್ದಾಳೆನವ ವಧು.! ಎನ್ನಲಾಗ್ತುತ್ತಿದೆ.ಮದುವೆಯಾಗಿ ಎರಡೆ ತಿಂಗಳಿಗೆ ಪರ ಪುರುಷನ ಜೊತೆಗೆ ಹೆಂಡತಿ ಓಡಿ ಹೋದ ಹಿನ್ನೆಲೆಯಲ್ಲಿ ಬೇಸರಗೊಂಡ ಅಮಾಯಕ ಗಂಡ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಹರೀಶ್ಗೆ ಮದುವೆ ಮಾಡಿಸಿದ್ದ ಯುವತಿಯ ಸೋದರ ಮಾವ ಕೂಡ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೂಡ ನಡೆದಿದೆ.!!
ನವ ವಿವಾಹಿತ ನೇಣಿಗೆ ಶರಣು.!

ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದಲ್ಲಿ ಮದುವೆಯಾದ ಎರಡೇ ತಿಂಗಳಿಗೆ ನವ ವಿವಾಹಿತ ನೇಣಿಗೆ ಶರಣಾಗಿರುವ ಘಟನೆ ನಡೆದಿದ್ದು. ಹರೀಶ್ (32) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.ಪರ ಪುರುಷನ ಜೊತೆ ಪತ್ನಿ ಓಡಿ ಹೋದಳು ಎನ್ನುವ ಕಾರಣಕ್ಕೆ ಮನನೊಂದು ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣು.!
ಮದುವೆಯಾಗಿ ಎರಡು ತಿಂಗಳಲ್ಲಿ ಹೆಂಡತಿ ಪರ ಪುರುಷನೊಂದಿಗೆ ಓಡಿ ಹೋಗಿದ್ದು, ಬಳಿಕ ಹರೀಶ್ ಮೇಲೆ ಅಕ್ಕಪಕ್ಕದ ಕೇಲವರು ಇಲ್ಲ- ಸಲ್ಲದ ಆರೋಪ ಮಾಡಿದ್ದರಂತೆ. ಜೊತೆಗೆ ಪ್ರಾಣ ಬೆದರಿಕೆ ಹಾಕಿದ್ದರಂತೆ. ಇದರಿಂದ ತೀವ್ರ ಅವಮಾನ ಗೊಂಡು ಮನನೊಂದು ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು.!
ಹರೀಶ್ ನೇಣಿಗೆ ಶರಣಾಗುವ ಮುನ್ನ ಡೆತ್ ನೋಟ್ ಸಹ ಬರೆದಿಟ್ಟಿದ್ದಾನೆ. ತನ್ನ ಸಾವಿಗೆ ಹೆಂಡತಿ, ಅತ್ತೆ ಮಾವ ಹಾಗೂ ಹೆಂಡತಿಯನ್ನು ಕರೆದುಕೊಂಡು ಹೋದಯುವಕನೇ ಕಾರಣ ಎಂದು ಬರೆದಿಟ್ಟು ಹರೀಶ್ ನೇಣಿಗೆ ಕೊರಳೊಡ್ಡಿದ್ದಾನೆ.
ಮಗನ ಸಾವಿಗೆ ಆತನ ಹೆಂಡತಿಯೆ ಕಾರಣ
ಮಗನ ಸಾವಿಗೆ ಆತನ ಹೆಂಡ್ತಿಯೇ ಕಾರಣ ಎಂದು ಹರೀಶ್ ಕುಟುಂಬಸ್ಥರು ಕೂಡ ಆರೋಪ ಮಾಡಿದ್ದಾರೆ. ಇತ್ತ ತನ್ನ ಅಂತ್ಯ ಸಂಸ್ಕಾರವನ್ನ ಬಸವ ಧರ್ಮ ಪ್ರಕಾರವಾಗಿ ನೆರವೇರಿಸುವಂತೆಯೂ ಹರೀಶ್ ತನ್ನ ಡೆತ್ ನೋಟ್ ನಲ್ಲಿ ಬರೆದಿದ್ದು, ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾಕ
ದಾವಣಗೆರೆಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೀಶ್ಗೆ ಮದುವೆ ಮಾಡಿಸಿದ್ದ ಯುವತಿಯ ಸೋದರ ಮಾವ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಹರೀಶ್ ಪತ್ನಿ ಸರಸ್ವತಿ ಅವರ ಸೋದರಮಾವ ರುದ್ರೇಶ್(40) ಹರೀಶ್ ಮತ್ತು ಸರಸ್ವತಿಗೆ ಮದುವೆ ಮಾಡಿಸಿದ್ದರಂತೆ.

ವಿಷ ಸೇವಿಸಿ ಆತ್ಮಹತ್ಯೆ.!
ಹರೀಶ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ತಾನು ಕೂಡ ವಿಷ ಸೇವಿಸಿ ರುದ್ರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಆನೆಕೊಂಡದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರುದ್ರೇಶ್ ಅವರನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ರುದ್ರೇಶ್ ಕೂಡ ಸಾವನ್ನಪ್ಪಿದ್ದಾರೆ.
ಹರೀಶ್ ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡುತ್ತಿದ್ದು. ರುದ್ರೇಶ್ ಎಂಬುವವರೇ ಹರೀಶ್ ಹಾಗೂ ಸರಸ್ವತಿಗೆ ಮದುವೆ ಮಾಡಿಸಿದ್ದರಂತೆ ದಾವಣಗೆರೆಯ RMC ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಒಟ್ಟಿನಲ್ಲಿ ಒಬ್ಬಳ ನೀಚ ಬುದ್ಧಿಯಿಂದ ಎರಡು ಜೀವಗಳು ಸಾವಿನ ಮನೆ ಸೇರಿದಂತಾಗಿದೆ…..


