ಶಿವಮೊಗ್ಗ : ಅಂತಿಮ ಹಂತಕ್ಕೆ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ.! ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ.

ಪೂರ್ಣಗೊಂಡಿರುವ ಕಾಮಗಾರಿಗಳು: ಕೋಟೆಗಂಗೂರಿನ ರೈಲ್ವೆ ನಿಲ್ದಾಣದ ಕಟ್ಟಡ (Station Building) ಹಾಗೂ ಸೇವಾ ಕಟ್ಟಡ (Service Building) ನಿರ್ಮಾಣ ಕಾರ್ಯ; ರೈಲು ಬೋಗಿಗಳ ದುರಸ್ತಿ ಮತ್ತು ನಿರ್ವಹಣೆಗೆ ಅಗತ್ಯವಿರುವ ಸಿಕ್ ಲೈನ್ ಕವರ್ಡ್ ಶೆಡ್‌ನ ಪಾಯದ (Foundation) ಕಾಮಗಾರಿ ಪೂರ್ಣಗೊಂಡಿದೆ.

✔️ ಚಾಲನೆಯಲ್ಲಿರುವ ಕಾಮಗಾರಿಗಳು: 24 ಬೋಗಿಗಳ ಸುಸಜ್ಜಿತ ರೈಲುಗಳನ್ನು ತಪಾಸಣೆ ಮಾಡುವ 2 ಫಿಟ್ ಲೈನ್‌ಗಳು (Pit Lines), 2 ಸ್ಟೇಬ್ಲಿಂಗ್ ಲೈನ್‌ಗಳು (Stabling Lines), 1 ಲೂಪ್ ಲೈನ್ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದೆ.

✔️ ಭೂಸ್ವಾಧೀನ ಪ್ರಕ್ರಿಯೆ : ಯೋಜನೆಗೆ ಅಗತ್ಯವಿರುವ ಒಟ್ಟು 38 ಎಕರೆ ಭೂಮಿಯಲ್ಲಿ ಈಗಾಗಲೇ 31.3 ಎಕರೆ ಭೂಸ್ವಾಧೀನ ಪೂರ್ಣಗೊಂಡಿದೆ. ಶಂಟಿಂಗ್ ನೆಕ್‌ಗೆ ಅಗತ್ಯವಿರುವ ಬಾಕಿ 6.7 ಎಕರೆ ಭೂಮಿಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶೀಘ್ರವೇ ಪಡೆದುಕೊಳ್ಳಲು ಕ್ರಮ ವಹಿಸಲಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!