ಶಿವಮೊಗ್ಗದಿಂದ ಮೂಡಬಿದರೆ ಅಕ್ಕನ ಮನೆಗೆ ಹೋಗಿದ್ದ ವಿವಾಹಿತೆ ನಾಪತ್ತೆ.!ಕುಟುಂಬಸ್ಥರ ಆತಂಕ..!
news.ashwasurya.in
ಅಶ್ವಸೂರ್ಯ/ಮೂಡುಬಿದಿರೆ : ಶಿವಮೊಗ್ಗದಿಂದ ಮೂಡುಬಿದಿರೆಯಲ್ಲಿರುವ ಅಕ್ಕನ ಮನೆಗೆ ಬಂದಿದ್ದ 20 ವರ್ಷದ ವಿವಾಹಿತ ಮಹಿಳೆಯೊಬ್ಬರು ಅಲ್ಲಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ನಿವಾಸಿ ಸಾಬಿರ ಬಾನು (20) ಎಂದು ಗುರುತಿಸಲಾಗಿದೆ.
ಸಾಬಿರ ಬಾನು ಅವರನ್ನು ಸುಮಾರು ಎರಡು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಶ್ಫಾಕ್ ಎಂಬವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು ಎನ್ನಲಾಗಿದೆ. ಮದುವೆಯ ಬಳಿಕ ಅವರು ಆಗಾಗ್ಗೆ ಮೂಡುಬಿದಿರೆ ಸಮೀಪದಲ್ಲಿರುವ ತಮ್ಮ ಅಕ್ಕನ ಮನೆಗೆ ಬರುತ್ತಿದ್ದರು.

ಜುಲೈ 27ರಂದು ಸಾಬಿರ ಬಾನು ಅವರ ಅಕ್ಕ ಸಂಬಂಧಿಕರ ಮನೆಗೆ ತೆರಳಿ ಬಳಿಕ ಮನೆಗೆ ಹಿಂದಿರುಗಿದಾಗ, ಸಾಬಿರ ಬಾನು ಮನೆಯಲ್ಲಿ ಇರಲಿಲ್ಲ. ಇದರಿಂದ ಆತಂಕಗೊಂಡ ಅಕ್ಕ, ಸಂಬಂಧಿಕರು ಹಾಗೂ ಸಾಬಿರ ಬಾನು ಅವರ ಪತಿ ಮನೆಯವರನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆದರೆ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ನಂತರ ಕುಟುಂಬಸ್ಥರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಮಹಿಳೆಯ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.


