
ಚೀಲದಲ್ಲಿತ್ತು ಯುವತಿಯ ತಲೆ ಇಲ್ಲದ ದೇಹ.!ಯುವತಿಯ ಸಹೋದ್ಯೋಗಿ ಬಂಧನ.! ಹಂತಕ ಸಿಕ್ಕಿಬಿದ್ದಿದ್ದೇ ರೋಚಕ.
news.ashwasurya.in
ಅಶ್ವಸೂರ್ಯ/ಆಗ್ರಾ : ಆಗ್ರಾದ ಹೊರ ಪ್ರದೇಶದಲ್ಲಿ ಚೀಲದಲ್ಲಿ ಪತ್ತೆಯಾದ ಯುವತಿಯ ತಲೆ ಇಲ್ಲದ ಶವದ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.! ಪ್ರೀತಿಯ ವಿಚಾರದಲ್ಲಿ ಅನುಮಾನಗೊಂಡು, ಸಹೋದ್ಯೋಗಿ ಹಾಗೂ ಪ್ರೇಮಿ ವಿನಯ್ ರಜಪೂತ್ ಎಂಬಾತನೇ ಮಿಂಕಿ ಶರ್ಮಾಳನ್ನು ಬರ್ಬರವಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಯುವಕನೊಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್ನಲ್ಲಿ ಜನವರಿ 24 ರಂದು ಯುವತಿಯ ಶವ ಪತ್ತೆಯಾಗಿತ್ತು. ಮಿಂಕಿ ಶರ್ಮಾ ಎಂಬ ಯುವತಿಯ ಸಾವಿಗೆ ಸಂಬಂಧಿಸಿದಂತೆ ವಿನಯ್ ರಜಪೂತ್ ಎಂಬಾತನನ್ನು ಬಂಧಿಸಲಾಗಿದೆ.
ಯುವತಿ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ದೂರು ನೀಡಿದ್ದರು. ಪ್ರಮುಖ ರಸ್ತೆಗಳಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಸುಳಿವು ಸಿಕ್ಕಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಯುವತಿಯ ಸ್ಕೂಟರ್ ಅನ್ನು ಆಕೆಯ ಸಹೋದ್ಯೋಗಿ ವಿನಯ್ ಬಳಸಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದರು. 12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಯುವತಿಯೊಂದಿಗೆ ದೀರ್ಘಕಾಲದಿಂದ ಪ್ರೀತಿಸುತ್ತಿದ್ದ ಯುವಕನಿಗೆ ಆಕೆಯ ಮೇಲೆ ಉಂಟಾದ ಅನುಮಾನವೇ ಕೊಲೆಗೆ ಕಾರಣವಾಗಿದೆ. ಯುವತಿಯನ್ನು ಕಚೇರಿಗೆ ಕರೆಸಿಕೊಂಡು ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದದ ವೇಳೆ ಯುವತಿಗೆ ಎಂಟಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿ, ನಂತರ ತಲೆ ಕತ್ತರಿಸಿದ್ದಾಗಿ ವಿನಯ್ ರಜಪೂತ್ ಪೊಲೀಸರಿಗೆ ತಿಳಿಸಿದ್ದಾನೆ. ಯಮುನಾ ಕಾಲೊನಿಯ ನಿವಾಸಿಯಾಗಿದ್ದ. ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಈತ ತಾನು ಪ್ರೀತಿಸುತ್ತಿದ್ದ 25 ವರ್ಷದ ಮಿಂಕಿ ಶರ್ಮಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಬೇರೆ ಹುಡುಗನ ಜೊತೆಗೆ ಸ್ನೇಹ ಬೆಳೆಸಿದ್ದಕ್ಕೆ ಕೊಲೆ :
ವಿನಯ್ ಹಾಗೂ ಮಿಂಕಿ ಇಬ್ಬರೂ ಲವ್ ಮಾಡುತ್ತಿದ್ದರು. ಆದರೆ ಕಳೆದ ಆರು ತಿಂಗಳಿನಿಂದ ಮಿಂಕಿ ಶರ್ಮಾ ಬೇರೊಬ್ಬನ ಜೊತೆಗೆ ಸ್ನೇಹ ಬೇಳಸಿದ್ದಳಂತೆ.! ಈ ವಿಚಾರವಾಗಿವಾಗಿ ಮಿಂಕಿ ಹಾಗೂ ವಿನಯ್ ನಡುವೆ ಆಗಾಗ ಜಗಳಗಳಾಗುತ್ತಿದ್ದು. ತಾಳ್ಮೆ ಕಳೆದುಕೊಂಡ ವಿನಯ್, ಮಿಂಕಿಯನ್ನು ಕೊಲೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಹೀಗಾಗಿ ನಿನ್ನ ಜತೆ ಮಾತಾಡೋದು ಇದೆ ಎಂದು ಮಿಂಕಿಯನ್ನು ವಿನಯ್ ಆಫೀಸ್ಗೆ ಕರೆಸಿಕೊಂಡು ಚಾಕುವಿನಿಂದ ಮನಬಂದಂತೆ ಚುಚ್ಚಿ ತಲೆಯನ್ನು ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಹತ್ಯೆಮಾಡಿದನಂತರ
ಪ್ರಿಯತಮೆಯ ಶವವನ್ನು ಯಮುನಾ ನದಿಯಲ್ಲಿ ಎಸೆಯಲು ಯೋಜಿಸಿದ್ದನಂತೆ.! ಆದರೆ ಚೀಲದ ಭಾರವನ್ನು ಹೊರಲು ಸಾಧ್ಯವಾಗದ ಕಾರಣ ಜವಾಹರ್ ನಗರದ ಸೇತುವೆಯಿಂದ ದೇಹದ ಭಾಗವನ್ನು ಎಸೆದು ಪರಾರಿಯಾಗಿದ್ದ. ಯುವತಿಗೆ ಬೇರೊಬ್ಬರೊಂದಿಗೆ ಸಂಬಂಧವಿದೆ ಎಂಬ ಅನುಮಾನದಿಂದ ಕೊಲೆ ಮಾಡಿದ್ದಾಗಿ ವಿನಯ್ ಪೊಲೀಸರಿಗೆ ತಿಳಿಸಿದ್ದಾನೆ.
ಕಚೇರಿಯಲ್ಲೇ ಶವವನ್ನು ತುಂಡು ಮಾಡಿ ಚೀಲದಲ್ಲಿ ತುಂಬಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಯುವತಿ ಖಾಸಗಿ ಕಂಪನಿಯೊಂದರ ಎಚ್ಆರ್ ವಿಭಾಗದಲ್ಲಿ ಉದ್ಯೋಗಿಯಾಗಿದ್ದಳು. ತಲೆಯನ್ನು ಚರಂಡಿಗೆ ಎಸೆದಿದ್ದಾಗಿ ಯುವಕ ಹೇಳಿಕೆ ನೀಡಿದ್ದಾನೆ. ಯುವತಿಯ ತಲೆ ಇನ್ನೂ ಪತ್ತೆಯಾಗಿಲ್ಲ. ಘಟನೆಯ ಬಗ್ಗೆ ಅನುಮಾನ ಬಾರದಂತೆ ಮಿಂಕಿ ಸಂಬಂಧಿಕರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಹೋಟೆಲ್

ಕೊಲೆಯಾದ ಮಿಂಕಿ ಶರ್ಮಾ:
ಮಿಂಷಕಿ ಶರ್ಮಾ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿ ಖಾಸಗಿ ಕಂಪನಿಯೊಂದರಲ್ಲಿ ಎಚ್ ಆರ್ ಮ್ಯಾನೇಜ್ಮೆಂಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳಂತೆ ಜನವರಿ 23 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮಿಂಕಿ ಮನೆಯಿಂದ ಹೊರಟಿದ್ದರು. ಮಿಂಕಿ ಮನೆಯಲ್ಲಿ ತಮ್ಮ ಸಹೋದರನ ಮದುವೆ ಕಾರ್ಡ್ ಕೊರಿಯರ್ ಮಾಡಲು ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದಳಂತೆ. ಆದರೆ ಸಂಜೆ ಎಂಟು ಗಂಟೆಯಾದರೂ ಮಿಂಕಿ ಮನೆಗೆ ವಾಪಾಸ್ಸಾಗಿರಲಿಲ್ಲ. ಅಂದಹಾಗೆ ಮಿಂಕಿ ಶರ್ಮಾ ಅವರ ಆರನೇ ಅಣ್ಣನ ಮದುವೆ ಮುಂಬರುವ ಫೆಬ್ರವರಿ 06ಕ್ಕೆ ನಿಗದಿಯಾಗಿತ್ತು.ಆದರೆ ಅಣ್ಣನ ಮದುವೆ ಮುಂಚೆಯೆ ತಂಗಿಯ ಹತ್ಯೆಯಾಗಿರುವುದು ದುರಂತವೆ ಹೌದು…


