ಒಂದು ವರ್ಷದ ಹಿಂದೆ ಹೀಗೆ ಇವರ ಬಲೆಗೆ ಬಿದ್ದ ಕರೀಂನಗರದ ಉದ್ಯಮಿಯೊಬ್ಬರಿಂದ 14 ಲಕ್ಷ ರೂ. ಸುಲಿಗೆ ಮಾಡಿದ್ದರು. ದುಬಾರಿ ಗೃಹೋಪಯೋಗಿ ವಸ್ತುಗಳು, ಮನೆ ಮತ್ತು ಕಾರನ್ನು ನೀಡಿದ್ದ. ಆದರೂ, ಇದರಿಂದ ತೃಪ್ತರಾಗದ ದಂಪತಿ, ಇನ್ನೂ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಕುಟುಂಬ ಸದಸ್ಯರಿಗೆ ಅಥವಾ ಜಾಲತಾಣದಲ್ಲಿ ನಗ್ನ ವಿಡಿಯೊಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಭಯಭೀತರಾದ ಆ ವ್ಯಕ್ತಿ, 1 ಲಕ್ಷ ರೂ.ಗಳ ಚೆಕ್ ನೀಡಿದ್ದ. ಬಳಿಕ ಇದು ಹನಿಟ್ರ್ಯಾಪ್ ಎಂದು ತಿಳಿದು ಉದ್ಯಮಿಯು ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದ. ಇವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹನಿಟ್ರ್ಯಾಪ್ ನಡೆಸಿ ಹಣ ವಸೂಲಿ ಮಾಡುತ್ತಿದ್ದ ದಂಪತಿಯನ್ನು ಕರೀಂನಗರ ಗ್ರಾಮೀಣ ಪೊಲೀಸರ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ…….
ಕರಿಂನಗರ : ಬಯಲಯ್ತು ಭಯಂಕರ ಹನಿಟ್ರ್ಯಾಪ್ ದಂಧೆ: ರೆಕಾರ್ಡ್ ಅಯ್ತು 100 ಜನರ ಆಪ್ತ ವಿಡಿಯೋ.! ಲಕ್ಷಾಂತರ ರೂಪಾಯಿ ಸುಲಿಗೆ ದಂಪತಿಗಳು ಅಂದರ್.!

news.ashwasurya.in
ಅಶ್ವಸೂರ್ಯ/ತೆಲಂಗಾಣ : ಕರಿಂನಗರದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಖೆಡ್ಡಕ್ಕೆ ಕೆಡವಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ ನೂರಾರು ಜನರನ್ನು ಹನಿಟ್ರಾಪ್ ಸುಳಿಗೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ದಂಪತಿಯನ್ನು ಜನವರಿ 14ರ ಬುಧವಾರದಂದು ಪೊಲೀಸರು ಬಂಧಿಸಿದ್ದಾರೆ. ಬಂಧಿತ ದಂಪತಿ ಮೂಲತಃ ಮಂಚೇರಿಯಲ್ ಮೂಲದವರಾಗಿದ್ದು, ಕಳೆದ ಕೆಲವು ಸಮಯದಿಂದ ಕರಿಂನಗರದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ :
ದಂಪತಿಗಳು ತಾವು ಮಾಡಿದ ಸಾಲವನ್ನು ತೀರಿಸಲು ಹನಿಟ್ರ್ಯಾಪ್ ಹಾದಿಗೆ ಇಳಿದಿದ್ದರು.! ಪೊಲೀಸರ ತನಿಖೆಯ ಪ್ರಕಾರ, ಪತಿಯ ಮಾರ್ಬಲ್ ಮತ್ತು ಇಂಟೀರಿಯರ್ ಡೆಕೋರೇಷನ್ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾಗಿತ್ತು. ತಮ್ಮ ಫ್ಲಾಟ್ನ ಇಎಂಐ (EMI) ಪಾವತಿಸಲು ಹಣವಿಲ್ಲದೆ ಕಷ್ಟಪಡುತ್ತಿದ್ದ ದಂಪತಿ, ಸುಲಭವಾಗಿ ಹಣ ಗಳಿಸಲು ಈ ವಿಕೃತ ಹಾದಿಯನ್ನು ಆಯ್ದುಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿಯ ಅರೆನಗ್ನ ಚಿತ್ರಗಳನ್ನು ಅಪ್ಲೋಡ್ ಮಾಡುವ ಮೂಲಕ ಜನರನ್ನು ಆಕರ್ಷಿಸುತ್ತಿದ್ದರು.
ಮನೆಗೆ ಬಂದ “ಗ್ರಾಹಕರ” ಜೊತೆ ಪತ್ನಿ ಆಪ್ತವಾಗಿರುವ ದೃಶ್ಯಗಳನ್ನು ಪತಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದನು. ನಂತರ ಈ ವಿಡಿಯೋಗಳನ್ನು ಇಟ್ಟುಕೊಂಡು ಆ ವ್ಯಕ್ತಿಗಳನ್ನು ಬ್ಲ್ಯಾಕ್ಮೇಲ್ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ದಂಪತಿ, ಸುಮಾರು 100ಕ್ಕೂ ಹೆಚ್ಚು ಜನರಿಂದ ಕನಿಷ್ಠ 60 ಲಕ್ಷ ರೂಪಾಯಿಯನ್ನು ವಸೂಲಿ ಮಾಡಿದ್ದರೆ ಎಂದು ಮಾಹಿತಿ ಲಭ್ಯವಾಗಿವೆ.ಈ ಹಣದಿಂದ ಅವರು ಐಷಾರಾಮಿ ಫ್ಲಾಟ್ ಮತ್ತು ಕಾರನ್ನು ಖರೀದಿಸಿದ್ದರು. ಸದ್ಯ ಪೊಲೀಸರು ಇವುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ.?
ಇತ್ತೀಚೆಗೆ ಈ ದಂಪತಿ ಈ ಹಿಂದೆ 12 ಲಕ್ಷ ರೂಪಾಯಿ ನೀಡಿದ್ದ ವ್ಯಕ್ತಿಯೊಬ್ಬನಿಗೆ ಮತ್ತೆ 5 ಲಕ್ಷ ರೂಪಾಯಿ ನೀಡುವಂತೆ ಪೀಡಿಸುತ್ತಿದ್ದರು. ಹಣ ನೀಡದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ನೊಂದ ವ್ಯಕ್ತಿ ತನ್ನ ಸ್ನೇಹಿತರ ಬಳಿ ವಿಷಯ ತಿಳಿಸಿದ್ದು, ಅವರ ಸಲಹೆಯಂತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ದಂಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


