
ಕುಂದಾಪುರ: ಮೆಟ್ಕಲ್ಗುಡ್ಡಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು.!
news.ashwasurya.in
ಅಶ್ವಸೂರ್ಯ/ಕುಂದಾಪುರ: ಹೊಸಂಗಡಿಯಿಂದ ಭಾಗಿಮನೆಗೆ ಹೊಗುವ ರಸ್ತೆಯ ಎಡಭಾಗದ ಮೆಟ್ಕಲ್ ಗುಡ್ಡಕ್ಕೆ ( ಗಣಪತಿಯ ಮಂದಿರ ) ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.1 ರವಿವಾರ ನಡೆದಿದೆ.
ಟ್ರೆಕ್ಕಿಂಗ್ ಹೊದ ಸಂಧರ್ಭದಲ್ಲಿ ಭಾಗಿಮನೆ ಸಮೀಪದಲ್ಲಿರುವ ನದಿಯಲ್ಲಿ ಈಜಲು ಹೋಗಿ ಶುಭಶ್ರೀ ಕಾರಂತ್ ನೀರು ಪಾಲಾಗಿದ್ದಾರೆ.ಈ ನದಿಯ ನೀರು ಯಾವ ಕ್ಷಣದಲ್ಲಿ ಹೆಚ್ಚಿಗೆ ಕಮ್ಮಿ ಆಗುತ್ತದೆ ಎನ್ನುವ ಅರಿವು ನೀರಿನಲ್ಲಿ ಇಳಿದವರಿಗೆ ತಿಳಿಯುವುದಿಲ್ಲ ಕಾರಣ ಈ ನದಿಗೆ ನೀರು ಮಾಣಿ ಡ್ಯಾಂ ನ ಗೆಟ್ ತೆರೆದರೆ ಒಮ್ಮೆಲೆ ನೀರು ನದಿಯಲ್ಲಿ ಹೆಚ್ಚಾಗುತ್ತದೆ… ಶುಭಶ್ರೀ ಅವರು ನೀರಿಗೆ ಇಳಿದ ಸಂಧರ್ಭದಲ್ಲು ಮಾಣಿ ಡ್ಯಾಂ ನ ನೀರು ಬಿಟ್ಟಿರಲು ಸಾಧ್ಯ ಈ ಕಾರಣದಿಂದಲೇ ಶುಭಶ್ರೀ ಅವರು ನೀರಿನ ಸೇಳತಕ್ಕೆ ಕೊಚ್ಚಿಕೊಂಡು ಹೋಗಿ ಸಾವನಪ್ಪಿರ ಬಹುದು..

ಕುಂದಾಪುರದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಶುಭಶ್ರೀ ಕಾರಂತ್ (53) ಸಾವನ್ನಪ್ಪಿದವರು ಎಂದು ತಿಳಿದುಬಂದಿದೆ.
ಕುಂದಾಪುರದಿಂದ 8-10 ಜನರ ತಂಡ ಹೊಸಂಗಡಿಯ ಮೆಟ್ಕಲ್ಗುಡ್ಡಕ್ಕೆ ಟ್ರೆಕ್ಕಿಂಗ್ ಹೋಗಿದ್ದರು ಎಂದು ತಿಳಿದುಬಂದಿದೆ. ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.

