
ಸಾಗರ : ಪ್ರೇಯಸಿ ಭೇಟಿ ಮಾಡಲು ಬುರ್ಖಾ ಧರಿಸಿ ಬಂದಿದ್ದ ಅಪ್ರಾಪ್ತ ಬಾಲಕ.!: ಆಮೇಲೆ ಏನಾಯ್ತು.?
news.ashwasurya.in
ಅಶ್ವಸೂರ್ಯ/ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಒಂದು ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿವೆ ತಾನು ಪ್ರೀತಿಸಿದ ಹುಡುಗಿಯನ್ನು ಭೇಟಿ ಮಾಡಲು ತ್ಯಾಗರ್ಸಿಯ ಹುಡುಗನೊಬ್ಬ ಬುರ್ಖಾ ಧರಿಸಿ ಬಂದಿದ್ದಾನೆ. ಈ ಅಪ್ರಾಪ್ತ ಬಾಲಕನನ್ನು ಸ್ಥಳೀಯರು ಹಿಡಿದು ಮಕ್ಕಳ ಕಳ್ಳನೆಂದು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ನೆಡೆದಿದೆ. ನಂತರ ಸ್ಥಳೀಯರು ಆತನನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ ಈ ಪ್ರಕರಣ ಬಾನುವಾರ ನಡೆದಿದೆ.
ಸಾಗರ ತಾಲೂಕಿನ ತ್ಯಾಗರ್ತಿ ಮೂಲದ ಬಾಲಕನೊಬ್ಬ ಬಾನುವಾರ ಮಧ್ಯಾಹ್ನ ಸಾಗರದ ಜನ್ನತ್ ನಗರಕ್ಕೆ ಬುರ್ಖಾ ಧರಿಸಿ ಆಗಮಿಸಿದ್ದಾನೆ ತನ್ನ ಪ್ರೇಯಸಿಯನ್ನು ರಹಸ್ಯವಾಗಿ ಭೇಟಿಯಾಗುವುದು ಆತನ ಉದ್ದೇಶವಾಗಿತ್ತು ಎಂದು ತಿಳಿದುಬಂದಿದೆ.! ಆದರೆ, ಬುರ್ಖಾ ತೊಟ್ಟಿದ್ದ ಆತನ ಚಲನವಲನವನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಬಂದಿದೆ ಮಕ್ಕಳು ಭಯ ಭೀತರಾಗಿದ್ದಾರೆ . ಸ್ಥಳೀಯರು, ಆತನನ್ನು ಮಕ್ಕಳನ್ನು ಅಪಹರಿಸಲು ಬಂದ ಕಳ್ಳನೆಂದು ಭಾವಿಸಿದ್ದಾರೆ.

ಸಂಶಯಗೊಂಡ ಸ್ಥಳೀಯರು ಬಾಲಕನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ತಕ್ಷಣವೇ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಾಗರ ಟೌನ್ ಪೊಲೀಸರು ಯುವಕನನ್ನು ಜನರಿಂದ ಬಿಡಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ನಂತರ ನಡೆಸಿದ ತೀವ್ರ ವಿಚಾರಣೆಯಲ್ಲಿ, ಆತ ಕಳ್ಳನಲ್ಲ ಎಂಬುದು ಹಾಗೂ ಕೇವಲ ತನ್ನ ಪ್ರೇಯಸಿಯನ್ನು ಕಾಣಲು ಈ ವೇಷ ಧರಿಸಿ ಬಂದಿದ್ದ ಎಂಬ ಸತ್ಯಾಂಶ ಬಯಲಾಗಿದೆ…!


