
ಬೆಂಗಳೂರು : ನಟಿಯ ಕಲರ್ ಫುಲ್ ಲವ್ ಸ್ಟೋರಿ.! ಬೆತ್ತಲಾಗಿ ಕುಳಿತ ಪ್ರಿಯಕರನ ಬೆನ್ನಿಗೆ ಚೂರಿ ಹಾಕಿಸಿದಳು.!
ಆರೋಪಿ ನಟಿ ಬಿಂದು…ಕೊಲೆಯಾದ ಮೋಹನ್ ಕೃಷ್ಣರಾವ್.!

news.ashwasurya.in
ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ನಟಿಯೊಬ್ಬಳ ತ್ರಿಕೋನ ಪ್ರೇಮಕಥೆಯೊಂದು ಕೊಲೆಯಲ್ಲಿ ಅಗತ್ಯವಾಗಿದೆ.ಸ್ಯಾಂಡಲ್ ವುಡ್ನಲ್ಲಿ ಅಲ್ಲಿ ಇಲ್ಲಿ ಗುರುತಿಸಿಕೊಂಡಿದ್ದ ನಟಿ ಹಾಗೂ ಸಹ ನಿರ್ದೇಶಕಿ ಬಿಂದು ತನ್ನ ಇತ್ತೀಚಿಗಿನ ಪ್ರಿಯಕರನೊಂದಿಗೆ ಸೇರಿಕೊಂಡು ಹಳೆಯ ಪ್ರೀಯತಮ ಮೋಹನ್ ಕೃಷ್ಣರಾವ್ನನ್ನು ಕೊಲೆಮಾಡಿಸಿ ಚಟ್ಟವೇರಿಸಿದ್ದಾಳೆ.! ಈ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೆ ಬಾಗಲಗುಂಟೆ ಪೊಲೀಸರು ನಟಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಠಾಣೆಗೆ ಕರೆತಂದಿದ್ದಾರೆ.
ನಟಿಯೊಬ್ಬಳ ತ್ರಿಕೋನ ಪ್ರೇಮಕಥೆಯಲ್ಲೊಂದು ಹೆಣ ಬಿದ್ದಿದ್ದು ನೆತ್ತರ ಲವ್ ಸ್ಟೋರಿಯ ಖಳನಾಯಕಿ ಬಿಂದು ಮತ್ತು ಆಕೆಯ ಹೊಸ ಲವ್ವರ್ ಸೇರಿದಂತೆ ಒಟ್ಟು ಮೂವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಹೊಸ ಪ್ರೀಯಕರನೊಂದಿಗೆ ಸೇರಿಕೊಂಡು ಹಳೆ ಪ್ರೀಯಕರನಿಗೆ ಚಟ್ಟಕಟ್ಟಿದ ನಟಿಯ ಪಾತಕ ಹೆಜ್ಜೆಗೆ ಚಂದನವನ ಬೆಚ್ಚಿಬಿದ್ದಿದೆ. ಹಯಗ್ರೀವ್ ಸಿನಿಮಾದ ಸಹ ನಿರ್ದೇಶಕಿ ಬಿಂದು ಎಂಬಾಕೆಯ ತ್ರಿಕೋನ ಪ್ರೇಮದ ಅಸಲಿ ಸತ್ಯ ಬೆಚ್ಚಿಬೀಳಿಸುವಂತಿದೆ.ಒಂದಷ್ಟು ಸಿನಿಮಾದಲ್ಲಿ ಸಹ ಕಲಾವಿದೆಯಾಗಿ ಅಭಿನಯಿಸಿರುವ ಬಿಂದು @ ಊರ್ವಶಿ ಈಕೆಯ ಪ್ರೀಯಕರ ವಿನಯ್ ಹಾಗೂ ಧನುಷ್ ಬಂಧಿತ ಆರೋಪಿಗಳಾಗಿದ್ದಾರೆ.ಈ ಮೂರು ಮಂದಿ ಸೇರಿ ಹತ್ಯೆ ಮಾಡಿರುವುದು ಮೋಹನ್ ಕೃಷ್ಣರಾವ್ ಎಂಬ ವ್ಯಕ್ತಿಯನ್ನ.! ಆರೋಪಿ ಬಿಂದು ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾಳೆ ಮತ್ತು ಮೋಹನ್ ಕೃಷ್ಣರಾವ್ ಬೆಂಗಳೂರಿನ ಮಂಜುನಾಥ ನಗರದ ನಿವಾಸಿಯಾಗಿದ್ದು, ಇದೇ ಏರಿಯಾದಲ್ಲಿಯೇ ಬಿಂದು ಸಹ ವಾಸವಾಗಿದ್ದಳಂತೆ ಮೋಹನ್ ಕೃಷ್ಣರಾವ್ ಹೆಂಡತಿಯನ್ನು ಬಿಟ್ಟಿದ್ದನಂತೆ. ಇತ್ತ ಬಿಂದು ಸಹ ಗಂಡನಿಂದ ದೂರವಾಗಿದ್ದಳಂತೆ. ಇವಳಿಗಿದ್ದ ಮಗುವೊಂದು ಕೂಡ ಕೋವಿಡ್ ಸಮಯದಲ್ಲಿ ಸಾವನ್ನಪ್ಪಿತ್ತು ಎಂದು ತಿಳಿದುಬಂದಿದೆ.

ಆಕೆಗೆ ಗಂಡ ಬಿಟ್ಟಿದ್ದ ಇವನಿಗೆ ಹೆಂಡತಿ ಬಿಟ್ಟಿದ್ಲು ಇಬ್ಬರದು ಒಂದೇ ಕಥೆ.! ಒಂದೇ ಏರಿಯಾದಲ್ಲಿ ಇದ್ದರು ಇಬ್ಬರು ಪರಿಚಯಸ್ಥರು. ಹೀಗಿರುವಾಗಲೇ
ಒಂಟಿಯಾಗಿ ಜೀವನ ನಡೆಸುತ್ತಿದ್ದ ಬಿಂದು ಮತ್ತು ಮೋಹನ್ ಕೃಷ್ಣರಾವ್ ಜಂಟಿಯಾಗಿ ಜೀವನ ನಡೆಸಲು ಬಯಸಿದ್ದರು. ಆದ್ರೆ ಬಿಂದು ಜೊತೆ ವಾಸ ಮಾಡಲು ಆರಂಭಿಸಿದ್ದರು ಆದೇನು ಅಯ್ತೊ ಗೊತ್ತಿಲ್ಲ ಇಬ್ಬರು ಜಂಟಿ ಜೀವನ ಆರಂಭಿಸಿದ ಎರಡೇ ತಿಂಗಳಲ್ಲಿ ಬಿಂದು ಪ್ರಿಯಕರ ಮೋಹನ್ ಕೃಷ್ಣರಾವ್ ಹೆಣ ಬಿದ್ದಿದೆ. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಬಿಂದು ಮತ್ತು ಮೋಹನ್ ಜೊತೆಯಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೋಹನ್ ಜೊತೆಯಿರಲು ಆರಂಭಿಸಿದ ಎರಡನೇ ತಿಂಗಳಲ್ಲಿ ಬಿಂದುಗೆ ವಿನಯ್ ಎಂಬಾತನ ಪರಿಚಯವಾಗಿದೆ ಪರಿಚಯ ಪ್ರೀತಿಗೆ ಜಾರಿದೆ.
ವಿನಯ್ ಕೂಡ ಮಂಜುನಾಥ ನಗರದ ನಿವಾಸಿಯಾಗಿದ್ದರಿಂದ ಬಿಂದುಳ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಪ್ರೀತಿಗೆ ಮರಳಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಮೋಹನ್ ಕೃಷ್ಣರಾವ್ ಜೊತೆಯಲ್ಲಿದ್ರೂ ಬಿಂದು ಮನಸ್ಸು ಮಾತ್ರ ವಿನಯನ ಕಡೆಗೆ ವಾಲಿತ್ತು.! ಇತ್ತ ವಿನಯ್ ಮತ್ತು ಬಿಂದು ನಡುವಿನ ಸಂಬಂಧ ಮೋಹನ್ ಕೃಷ್ಣರಾವ್ಗೂ ತಿಳಿದಿತ್ತು. ಇದೇ ವಿಷಯವಾಗಿ ಮನೆಯಲ್ಲಿ ಬಿಂದು ಜೊತೆ ಮೋಹನ್ ಜಗಳ ಮಾಡಲು ಶುರು ಮಾಡಿದ್ದನಂತೆ.!

ಕುಡಿದು ಬಂದ ಮೋಹನನಿಗೆ ಆಕೆಯ ಲೈಂಗಿಕ ಸಂಪರ್ಕ ಬೆಕಿತ್ತು.!
ಫೆಬ್ರವರಿ 18ರ ರಾತ್ರಿ ಬಿಂದು ಮತ್ತು ಮೋಹನ್ ಕೃಷ್ಣರಾವ್ ಜೊತೆ ಜಗಳ ನಡೆದಿದೆ. ಮದ್ಯದ ನಶೆಯಲ್ಲಿದ್ದ ಮೋಹನ್ ಕೃಷ್ಣರಾವ್ ಬಲವಂತವಾಗಿ ಬಿಂದು ಜೊತೆ ಲೈಂಗಿಕ ಸಂಪರ್ಕ ಬೆಳೆಸಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಬಿಂದು ಹೊಸ ಗೆಳೆಯ ವಿನಯ್ಗೆ ಕಾಲ್ ಮಾಡಿ ಕರೆಸಿಕೊಂಡಿದ್ದಾಳೆ. ವಿನಯ್ ಜೊತೆ ಆತನ ಸ್ನೇಹಿತ ಧನುಷ್ ಸಹ ಬಂದಿದ್ದಾನೆ.
ಮದ್ಯದ ಅಮಲಿನಲ್ಲಿ ಬೆತ್ತಲಾಗಿ ಕುಳಿತಿದ್ದ ಮೋಹನ್ ಕೃಷ್ಣರಾವ್ ನ ಹಿಂಭಾಗದ ಮೇಲೆ ಚಾಕುವಿನಿಂದ ದಾಳಿ ನಡೆಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಮೋಹನ್ ಕೃಷ್ಣರಾವ್ ಕೂಗಾಟ ನಡೆಸುತ್ತಿದ್ದಂತೆ ಕೈಕಾಲು ಕಟ್ಟಿ ಬಾಯಿಗೆ ಟೇಪ್ ಸುತ್ತಿ ಚಾಕುವಿನಿಂದ ಹಾಗೂ ರಾಡ್ ನಿಂದ ಇರಿದು ಕೆಡವಿದ್ದಾರೆ ಕೇಲವೆ ಕ್ಷಣದಲ್ಲಿ ಮೋಹನ್ ಕೃಷ್ಣರಾವ್ ರಕ್ತದ ಮಡುವಿನಲ್ಲಿ ಉಸಿರು ಚಲ್ಲಿದ್ದಾನೆ. ಮೋಹನ್ ಸತ್ತಿದ್ದಾನೆ ಎಂದು ತಿಳಿಯುತ್ತಿದ್ದಂತೆ ಬಳಿಕ ಹಂತಕರು ಸ್ಥಳದಿಂದ ಮೂವರು ಎಸ್ಕೇಪ್ ಆಗಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಗಲಗುಂಟೆ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ..


