ಇಷ್ಟೊಂದು ಹೊಟ್ಟೆ ಕಿಚ್ಚಾ.!ವೈಭವ್ ಸೂರ್ಯವಂಶಿ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು ನೋಡಿ.!
news.ashwasurya.in
ಅಶ್ವಸೂರ್ಯ/ಚೆಸ್ಟರ್ ಲೆ ಸ್ಟ್ರೀಟ್: ಒಬ್ಬ ಯುವ ಆಟಗಾರನ ಮೇಲೆ ಯಾಕೆ ಇಷ್ಟೊಂದು ಜಲಸ್ಸು.?ಯುವ ಆಟಗಾರನ ಬೆನ್ನಿಗೆ ಇಡಿ ವಿಶ್ವವೇ ನಿಂತಿದೆ.! ಆದರೆ ಟೀಂ ಇಂಡಿಯಾ ಟಿ20 ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಆಡಿದ ಮಾತಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ 15 ವರ್ಷದ ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೊಡೆಬಡಿಯ ಆಟದ ಮೂಲಕ ಚಿಕ್ಕವಯಸ್ಸಿನಲ್ಲೇ ಅಪಾರ ಅನುಭವಗಳನ್ನು ವೈಭವ್ ಗಳಿಸಿದ್ದಾರೆ. ಅವರು ಟೀಂ ಇಂಡಿಯಾ ಪರ ಆಡುವುದನ್ನು ನೋಡಲು ಅದೆಷ್ಟೋ ಅಭಿಮಾನಿಗಳು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಆದರೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮಾತ್ರ ಆತನಿಗೆ ಆಡಲು ಅವಕಾಶ ಮಾಡಿಕೊಡಲು ಮನಸ್ಸೇ ಮಾಡುತ್ತಿಲ್ಲ. ಶ್ರೇಯಸ್ ಅಯ್ಯರ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳನ್ನು ಕೇಳಿದರೆ ಇಂಗ್ಲೆಂಡ್ ವಿರುದ್ಧವೂ ಆ ಯುವ ಆಟಗಾರನಿಗೆ ಅವಕಾಶ ಸಿಗುವುದು ಅನುಮಾನವೆನಿಸುತ್ತದೆ.!
ವೈಭವ್ ಸೂರ್ಯವಂಶಿ ಬಗ್ಗೆ ಎಲ್ಲರೂ ಕುತೂಲಹದಿಂದ ಕಾಯುತ್ತಿದ್ದಾರೆ. ಅವರನ್ನು ಆಡಿಸುವ ಬಗ್ಗೆ ಯೋಚನೆ ಮಾಡಿದ್ದೀರಾ ಎಂದು ಕೇಳಿದಾಗ ನಿಜವಾಗಿ ನನಗೆ ಗೊತ್ತಿಲ್ಲ.. ನಾನು ವೈಭವ್ ಬಗ್ಗೆ ಏನೂ ಕೇಳಿಲ್ಲ. ನಾನು ಸೋಷಿಯಲ್ ಮೀಡಿಯಾ ಫಾಲೋ ಮಾಡಲ್ಲ. ನಿಮ್ಮ ಮಾಧ್ಯಮಗಳನ್ನೂ ನೋಡಲ್ಲ. ನಿಜವಾಗಿ ಹೇಳುತ್ತಿದ್ದೇನೆ, ನನಗೆ ಆತನ ಬಗ್ಗೆ ಏನೂ ಗೊತ್ತಿಲ್ಲ. ವೈಭವ್ ಮಾತ್ರ ಅಲ್ಲ, ಎಲ್ಲರೂ ಉತ್ತಮ ಪ್ರದರ್ಶನ ತೋರಿದ್ದಾರೆ. ಹಿರಿಯ ಆಟಗಾರರಿಗೆ ಆತ್ಮವಿಶ್ವಾಸ ತುಂಬುವುದು ಅಗತ್ಯ. ವಿಶ್ವಕಪ್ ವಿಜೇತರು ಟಿ20 ತಂಡದಲ್ಲಿ ಸಾಕಷ್ಟು ಅನುಭವಿಗಳಿದ್ದಾರೆ ಎಂದಿದ್ದಾರೆ.

ಶ್ರೇಯಸ್ ಈ ಕಾಮೆಂಟ್ ಗಳಿಗೆ ನೆಟ್ಟಿಗರು ಛಿಮಾರಿ ಹಾಕಿದ್ದಾರೆ. 15 ವರ್ಷದ ಹುಡುಗನ ಮೇಲೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಅದೇಕೆ ಇಷ್ಟೊಂದು ಹೊಟ್ಟೆ ಕಿಚ್ಚು.? ಅದೇನು ಧ್ವೇಷ ಸಾಧಿಸುತ್ತಿದೆ.ಆದೇನೊ ಅಂತರಾಲ್ಲ ನಮ್ಮವರೆ ನಮಗೆ ಯುವ ಬ್ಯಾಟರ್ಗೆ ಆಫ್ ಇಟ್ರಾ.? ಐರ್ಲೆಂಡ್ ವಿರುದ್ಧ ಸರಣಿ ಸೋತ ಮೇಲೂ ಬುದ್ಧಿ ಬಂದಿಲ್ವಾ ಟೀಮ್ ಇಂಡಿಯಾದವರಿಗೆ.? ಎಂದು ವಿಶ್ವವ್ಯಾಪಿ ವೈಭವ್ ಸೂರ್ಯವಂಶಿ ಆಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.


