

ಮುಂಬಯಿ : ಪುಣೆ ಉದ್ಯಮಿ ಹತ್ಯೆ ಪ್ರಕರಣ: ಆರೋಪಿ ಪ್ರೇಮಿಗಳ ನಡುವೆ ಬಿರುಕು.? ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ.!

news.ashwasurya.in
ಅಶ್ವಸೂರ್ಯ/ಪುಣೆ : ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಯ ತನಿಖೆ ಹೊಸ ತಿರುವು ಪಡೆದುಕೊಂಡಿದ್ದು, ಇಬ್ಬರು ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮ ಚೌಧರಿ ಈಗ ಪರಸ್ಪರ ಒಬ್ಬರ ಮೇಲೊಬ್ಬರು ದೂಷಿಸುತ್ತಿದ್ದಾರೆ ಎಂದು ವರದಿಯಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಇಬ್ಬರೂ ಆರೋಪಿಗಳು ವಿಚಾರಣೆಯ ಸಮಯದಲ್ಲಿ ಹತ್ಯೆಯ ಸಂಧರ್ಭದಲ್ಲಿ ತಮ್ಮದೇ ಆದ ಪಾತ್ರಗಳನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಯ (Pune businessman murder case) ತನಿಖೆ ಹೊಸ ತಿರುವು ಪಡೆದುಕೊಂಡಿದೆ.? ಇಲ್ಲಿಯ ವರದಿಯನ್ನು ಗಮನಿಸಿದೆ ಇಬ್ಬರು ಆರೋಪಿಗಳು ಒಬ್ಬರು ಮತ್ತೊಬ್ಬರ ಮೇಲೆ ತಪ್ಪನ್ನು ಎತ್ತಿ ಹಾಕಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಘಟನೆಗಳ ಬಗ್ಗೆ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚೇತನ್ ಓಡಿಹೋಗುವ ಮೂಲಕ ಸಿಯಾಳೊಂದಿಗೆ ಹೊಸ ಜೀವನ ಆರಂಭಿಸಲು ಬಯಸಿದ್ದಾಗಿ ಹೇಳಿಕೊಂಡಿದ್ದಾನೆ, ಆದರೆ ಅವಳು ಕೇತನ್ನನ್ನು ಸಾಯಿಸಲು ಬಯಸಿದ್ದಳು ಎಂದು ತಿಳಿಸಿದ್ದ. ಇನ್ನು ಮತ್ತೊಂದೆಡೆ ಕೊಲೆಯ ಪಿತೂರಿಯನ್ನು ಚೇತನ್ ರೂಪಿಸಿದ್ದಾಗಿ ಮತ್ತು ಜೂನ್ 14 ರಂದು ಕೇತನ್ನ ಮೇಲೆ ವಿಫಲ ಪ್ರಯತ್ನದ ನಂತರವೂ ಅವನು ಅಳುತ್ತಿದ್ದನೆಂದು ಸಿಯಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ. ಲೋಹಗಡ್ ಕೋಟೆಯಲ್ಲಿ ಪೂರ್ವನಿರ್ಧರಿತ ಸಿಗ್ನಲ್ ಯೋಜನೆಯ ಭಾಗವಾಗಿತ್ತು ಎಂದು ಸಿಯಾ ಒಪ್ಪಿಕೊಂಡಿದ್ದಾಳೆ.
ಕೊಲೆ ಮಾಡುವ ಎರಡು ದಿನಗಳ ಮೊದಲು ಆರೋಪಿಗಳು ಭೇಟಿ ನೀಡಿದ್ದರು.

ಅದು ಅಪರಾಧಕ್ಕೆ ಸೂಕ್ತ ಸ್ಥಳವೆಂದು ಗುರುತಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ,2,000 ಕ್ಕೂ ಹೆಚ್ಚು ಕರೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಸುಮಾರು 238 ಗಂಟೆಗಳ ಕಾಲ ಪರಸ್ಪರ ಮಾತನಾಡುತ್ತಿದ್ದರು ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಚೇತನ್ ಅವರ ಕುಟುಂಬ ಕೂಡ ಈ ಆರೋಪಗಳನ್ನು ಸಾರ್ವಜನಿಕವಾಗಿ ತಿರಸ್ಕರಿಸಿದ್ದು, ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ.
ತನ್ನ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಅಂದರೆ ಜೂನ್ 18 ರಂದು ಸಿಯಾ ಮತ್ತೆ ಕೋಟೆಗೆ ಹೋಗಲು ಕೇತನ್ನನ್ನು ಒಪ್ಪಿಸಿದ್ದಳು. ಅಂದು ಬೆಳಿಗ್ಗೆ, ಸಿಯಾ ಮತ್ತು ಪ್ರಿಯಕರ ಚೇತನ್ ಪುಣೆಯ ಕೆಫೆಯೊಂದರಲ್ಲಿ ಭೇಟಿಯಾಗಿ ಕೊನೆಯ ಹಂತದ ಯೋಜನೆ ರೂಪಿಸಿದ್ದರು. ಕೋಟೆಯ ತುದಿಯಲ್ಲಿ ಫೋಟೋಗೆ ಪೋಸ್ ನೀಡುವ ನೆಪದಲ್ಲಿ ಕೇತನ್ನನ್ನು ನಿಲ್ಲಿಸಿದ ಸಿಯಾ, ಆತನನ್ನು 3,300 ಅಡಿ ಆಳದ ಕಮರಿಗೆ ತಳ್ಳಿ ಕ್ರೂರವಾಗಿ ಕೊಂದಿದ್ದಾಳೆ. ಇದಕ್ಕೆ ಪ್ರಿಯಕರ ಚೇತನ್ ಸಾಥ್ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೇತನ್ ಅಗರ್ವಾಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್: ಸಿಯಾ ಗೋಯಲ್ ಕುರಿತ ಶಾಕಿಂಗ್ ಸಿಸಿಟಿವಿ ದೃಶ್ಯ ತನಿಖಾ ತಂಡಕ್ಕೆ ಸಿಕ್ಕಿದೆ.!
ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪುಣೆ ಗ್ರಾಮಾಂತರ ಪೊಲೀಸರಿಗೆ ಹತ್ಯೆಯ ಹಿಂದಿನ ಗೂಢ ಸಂಚನ್ನು ಸಾಬೀತುಪಡಿಸುವ ಮತ್ತೊಂದು ಪ್ರಮುಖ ಸಿಸಿಟಿವಿ ಸಾಕ್ಷ್ಯ ಲಭ್ಯವಾಗಿದೆಯಂತೆ.!
ಪೊಲೀಸ್ ತನಿಖೆಯ ಪ್ರಕಾರ, ಕೇತನ್ ಜೂನ್ 18 ರಂದು ಲೋಹಗಢ್ ಕೋಟೆಯಲ್ಲಿ ಕಂದಕಕ್ಕೆ ಬಿದ್ದು ಸಾವನ್ನಪ್ಪುವ ಕೇವಲ ಒಂದು ದಿನದ ಮುಂಚೆ, ಅಂದರೆ ಜೂನ್ 17 ರಂದು ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಪುಣೆಯ ಕೆಫೆಯೊಂದರಲ್ಲಿ ಭೇಟಿಯಾಗಿದ್ದರು.
ಸಿಸಿ ಟಿವಿ ದೃಶ್ಯಾವಳಿಗಳ ಪ್ರಕಾರ, ಇವರಿಬ್ಬರೂ ಕೆಫೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಒಟ್ಟಿಗೆ ಕಳೆದಿದ್ದಾರೆ. ಇದೇ ವೇಳೆ ಕೇತನ್ನನ್ನು ಹೇಗೆ ಮುಗಿಸಬೇಕು ಎಂಬ ಅಂತಿಮ ಪ್ಲಾನ್ ರೂಪಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದೆ ಸಮಯದಲ್ಲಿ ಸಿಯಾ ಗೋಯಲ್ ತನ್ನ ಮೊಬೈಲ್ನಲ್ಲಿ ಲೋಹಗಢ್ ಕೋಟೆಯ ಕುರಿತಾದ ವಿಡಿಯೋಗಳನ್ನು ಆನ್ಲೈನ್ನಲ್ಲಿ ಸರ್ಚ್ ಮಾಡಿದ್ದಾಳೆ. ಆ ಕೋಟೆಯ ದುರ್ಗಮ ಹಾದಿ ಮತ್ತು ಕಂದಕಗಳ ಸಂಪೂರ್ಣ ಮಾಹಿತಿಯನ್ನು ಚೇತನ್ ಚೌಧರಿ ಜೊತೆಗೆ ಹಂಚಿಕೊಂಡಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ಬಲ ನೀಡಿದ

ತನಿಖೆಗೆ ಬಲ ನೀಡಿದ ಡಿಜಿಟಲ್ ಪುರಾವೆ ಯೋಜಿತ ಸಂಚು :
ಈ ಕೆಫೆ ಭೇಟಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇಬ್ಬರ ಮೊಬೈಲ್ ಇಂಟರ್ನೆಟ್ ಸರ್ಚ್ ಹಿಸ್ಟರಿ,, ಇದು ಆಕಸ್ಮಿಕವಾಗಿ ನಡೆದ ಕೊಲೆಯಲ್ಲ, ಬದಲಿಗೆ ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿ ಮಾಡಲಾದ ಕೃತ್ಯ ಎಂಬುದಕ್ಕೆ ಪ್ರಮುಖ ತಾಂತ್ರಿಕ ಪುರಾವೆಯಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಸ್ತುತ ಈ ಹೈಪ್ರೊಫೈಲ್ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಪೊಲೀಸರ ಈ ಎಲ್ಲಾ ಆರೋಪಗಳು ಮತ್ತು ಸಾಕ್ಷ್ಯಗಳು ಮುಂದಿನ ದಿನಗಳಲ್ಲಿ ನ್ಯಾಯಾಲಯದ ಕಾನೂನು ಪ್ರಕ್ರಿಯೆಯ ವೇಳೆ ಪರೀಕ್ಷೆಗೆ ಒಳಪಡಲಿವೆ.


