

ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ. ಶ್ರೀ ಕ್ಷೇತ್ರ ಹಾಲಾಡಿ ಇವರಿಂದ ಪ್ರೊ| ಪವನ್ ಕಿರಣಕೆರೆ ವಿರಚಿತ “ಪಂಜರ ಪಕ್ಷಿ” ಯಕ್ಷಗಾನ ಜೂನ್ 30 ರಂದು ನಿಮ್ಮ ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಜೂನ್ 30 ರಂದು ನಿಮ್ಮ ಶಿವಮೊಗ್ಗ ನಗರದ “ಸುವರ್ಣ ಸಾಂಸ್ಕೃತಿಕ ಭವನ”ದಲ್ಲಿ ಈ ಸಾಲಿನ ಸೂಪರ್ ಹಿಟ್ ಪ್ರಸಂಗ “ಪಂಜರಪಕ್ಷಿ” ಯಕ್ಷಗಾನವನ್ನು ಪ್ರಾಯೋಜಿಸಲಾಗಿದೆ. ಜೂನ್ 30 ರ ಮಂಗಳವಾರ ಸಂಜೆ 4:30 ರಿಂದ ಕರಾವಳಿಯ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ. ಶ್ರೀ ಕ್ಷೇತ್ರ ಹಾಲಾಡಿ ಇವರಿಂದ ಯಕ್ಷಗಾನದ ವೈಭವ ನೆಡೆಯಲಿದೆ. ಮಲೆನಾಡಿನ ತವರು ನೆಲ ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯುವ “ಪಂಜರಪಕ್ಷಿ” ಯಕ್ಷಗಾನ ಪ್ರಸಂಗದಲ್ಲಿ ಪಾತ್ರದಾರಿಗಳ ಮನಸ್ಸು ಮುಟ್ಟುವ ಆಭಿನಯದ ಜೋತೆಗೆ ಭಾಗವತರ ಕಂಚಿನ ಕಂಠದಲ್ಲಿ ಮೂಡಿ ಬರುವ ಯಕ್ಷ ಪದಗಳು ಮತ್ತು ತಾಳ ಮದ್ದಳೆಯ ಝೇಂಕಾರವು ಮಲೆನಾಡಿನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲಿದೆ.!

🌟 Highlights :
ಬಿಲ್ಲಾಡಿ • ಅಕ್ಷಯ್ ಸುಜನ್ ಟ್ರೆಂಡಿಂಗ್ ಹಿಮ್ಮೇಳದ ಗಾನ – ನಾದದ ಮೋಡಿ
ಜೀವ ವೀಣೆ ಮೀಟಿದಂತೆ ನಲಿಯುವ ತೊಂಬಟ್ಟು ಉಪ್ಪೂರು ಜೋಡಿಯ ನಟನಾ ವೈಭವ,
ಬಿಲ್ಲಾಡಿಯವರ ಟ್ರೆಂಡಿಂಗ್ ಮಂಗಳಪದ್ಯ ಕಲಾಕ್ಷೇತ್ರದಲ್ಲಿ ಯಾವುದಾಗಲಿದೆ !
ಉಳ್ಳೂರು ಚೌಕುಳಮಕ್ಕಿ ಪರಮ ನಾಣಿಯಾಗಿ ಹಾಸ್ಯ ರಸಾಯನ
ಮಿಂಚಿನ ಸಂಚಾರದ ವಿಕ್ರಮನಾಗಿ ಚುರುಕು ಹೆಜ್ಜೆಯ ರಾಘವ ಆಚಾರ್ಯ.
ವಿಚಿತ್ರ ಖಳನಾಯಕ ಮಧನಚಂದ್ರ ಪಾತ್ರದಲ್ಲಿ ಮಂಜುನಾಥ ಚೌಕುಳಮಕ್ಕಿ ಮತ್ತು ಬೀಜಮಕ್ಕಿ ಕರಾಮತ್ತು.
ನವರಸಗಳ ವಿಭಿನ್ನ ಪಾತ್ರ ವಂದನಳಾಗಿ ಯಕ್ಷ ಸುಂದರಿ ಸುಕುಮಾರ ನೀರಜಡ್ದು.
ಶ್ರೀಧರ ಹಾರ್ಸಿಕಟ್ಟೆ ಭಾಗವತರ ಸುಸ್ವರದಲ್ಲಿ ಮೋಡಿಗಾರ ಬಾರೋ ಸುಂದರ ಪದ್ಯ ಸುಧೆ.
ಶ್ರೀಧರ ಹಾರ್ಸಿಕಟ್ಟೆ ಅವರ ಧ್ವನಿಯಲ್ಲಿ ಮೂಡಿಬಂದ “ಪಂಜರಪಕ್ಷಿ” ಯಕ್ಷಗಾನ ಪ್ರಸಂಗದ “ಮೋಡಿಗಾರ ಬಾರೋ ಸುಂದರ…” ಪದ್ಯವು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಸುಶ್ರಾವ್ಯ ಗಾಯನವು ತನ್ನ ವಿಶಿಷ್ಟ ಶೈಲಿ ಮತ್ತು ಲಯಬದ್ಧ ಸಾಂಗತ್ಯದಿಂದಾಗಿ ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ. ನೀವು ಈ ಅದ್ಭುತ ಗಾಯನವನ್ನು ಕಣ್ತುಂಬಿಕೊಳ್ಳಿ ಜೂನ್ 30 ರಂದು ನಿಮ್ಮ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ… ಭಾಗವತರ ಒಂದು ಜಲಕ್ ಇಲ್ಲಿದೆ…
ವಿಶೇಷ ಪಾತ್ರದಲ್ಲಿ ಮಿಂಚಲಿರುವ ಉಮೇಶ ಶಂಕರನಾರಾಯಣ, ಶಾಮ ಗೌಡ.
ಸಾಂದರ್ಭಿಕ ಧ್ವನಿ ಬೆಳಕಿನ ಸಂಯೋಜನೆಯಲ್ಲಿ ಮಾಯಾಲೋಕ ತೆರೆಯುವ ಬೆಳಕು ತಂತ್ರಜ್ಞ ಪವನ್ ನಾರಾವಿ.
ಪೋಷಕ ಪಾತ್ರದ ಪಕ್ವತೆಯಲ್ಲಿ ಬಡಾಳ ರಾಜೇಶ್.
ಜಟ್ಟಿಗಳಾಗಿ ದೃಶ್ಯಾ ರೋಚಕತೆಯನ್ನು ಸೃಷ್ಟಿಸುವ ಕರಿಮನೆ ಚೇತನ್.
“ಮಾನಸವೀಣೆ ತಂತಿಯಮೀಟಿ, ಜೀವ ವೀಣೆ ಮಿಡಿಯುತಿಹುದು”ಎಂಬೆರಡು ಟ್ರೆಂಡ್ ಪದ್ಯದ ದೃಶ್ಯಕಾವ್ಯ.
ಕೆಂಚನೂರು ಯಕ್ಷೋತ್ಸವದ ಮೂಲಕ ಹನುಮಗಿರಿ, ಮೆಕ್ಕೆಕಟ್ಟೆ, ಅತಿಥಿ ದಿಗ್ಗಜರ ಪ್ರದರ್ಶನದ ಮೂಲಕ ಮೂರುವರೆ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸಾಕ್ಷಿಯಾದ ಯಶು ಯಶೋತ್ಸವದ ಮೊಟ್ಟಮೊದಲ ಕಾರ್ಯಕ್ರಮ.
ಪ್ರಸಂಗದ ಆದಿಯಿಂದ ಅಂತ್ಯದವರೆಗೆ ಎರಡು, ಮೂರು ಸಾವಿರ ಜನ ಸೇರಿ 150ನೇ ಪ್ರದರ್ಶನದತ್ತ ಸಾಗುತ್ತಿರುವ ಐತಿಹಾಸಿಕ ಚರಿತ್ರೆ.
ಪ್ರವೇಶ ದರ : ಗೌರವ ಪ್ರವೇಶ ಹೊರತುಪಡಿಸಿ ರೂ – 500/-, ಮತ್ತು ರೂ – 300/-,
ಜೂನ್ – 30 2026 ರ ಸಂಜೆ 4:30 ರಿಂದ ಆರಂಭ.
ಸ್ಥಳ : ಸುವರ್ಣ ಸಾಂಸ್ಕೃತಿಕ ಭವನ , ಹೆಲಿಪ್ಯಾಡ್ ಹತ್ತಿರ, ಆಶೋಕ ನಗರ, ಶಿವಮೊಗ್ಗ.
ಯಕ್ಷ ಕಲಾಭಿಮಾನಿಗಳ ತುಂಬು ಹೃದಯದ ಸಹಾಯ ಸಹಕಾರವನ್ನು ಬಯಸುವ :
• ಕೃಷ್ಣ ಪೂಜಾರಿ, ಸಿದ್ದಾಪುರ.
ಮೊ : 9443887755.
• ರಾಘವೇಂದ್ರ ಬಿಲ್ಲವ.
ಮೊ : 7259658190.
ಯಕ್ಷ ಪ್ರಸಂಗಗಳನ್ನು … ಯಕ್ಷ ಕಲಾವಿದರನ್ನು ಪ್ರೋತ್ಸಾಹಿಸಿ.. ಬೆಳಸಿ.. ಹಾರೈಸಿ..



