
ಪ್ರೀತಿ ಕೊಂದ ಕೊಲೆಗಾರ….!
ಬೆಂಗಳೂರು : ಪ್ರೀತಿಸಿ ಕದ್ದುಮುಚ್ಚಿ ಮದುವೆಯಾಗಿದ್ದ ಗಂಡನಿಂದಲೆ ಭವಾನಿ ಹತ್ಯೆ.! ಕಾರಣವೇನು.?
ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಿಯಕರ ಕದ್ದು ಮದುವೆಯಾಗಿದ್ದ ಗಂಡ ತನ್ನ ಪ್ರೇಯಸಿಯ (ಹೆಂಡತಿ) ಕತ್ತು ಹಿಸುಕಿ ಕೊಲೆ ಮಾಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಶನಿವಾರ (ಜೂನ್ 13, 2026) ನಡೆದಿದೆ. ಕೊಲೆಯಾದ ಯುವತಿಯನ್ನು ಮೊಬೈಲ್ ಶೋರೂಂ ಉದ್ಯೋಗಿ ಭವಾನಿ (22) ಎಂದು ಗುರುತಿಸಲಾಗಿದ್ದು, ಆರೋಪಿ ಪ್ರಿಯಕರ ಚಂದ್ರಶೇಖರ್ ಅಲಿಯಾಸ್ ಚಂದು (33) ಪ್ರಸ್ತುತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ…

news.ashwasurya.in
ಅಶ್ವಸೂರ್ಯ/ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿನಗರದಲ್ಲಿ ಪ್ರೀತಿಸಿ ಒಂದು ವರ್ಷ ಹಿಂದೆಯೇ ಇವರಿಬ್ಬರು ಗುಟ್ಟಾಗಿ ಮದುವೆಯಾಗಿದ್ದರು ಅದೇಗೊ ಎರಡನೇ ಹೆಂಡತಿ ಭವಾನಿಗೆ ನಾನು ಪ್ರೀತಿಸಿ ಮದುವೆಯಾದ ಚಂದ್ರಶೇಖರ್ ಗೆ ಈ ಹಿಂದೆಯೆ ಮದುವೆಯಾಗಿ ಒಂದು ಮಗುವು ಇರುವ ವಿಷಯ ತಿಳಿದಿದೆ.ಮೋಸ ಮಾಡಿ ತನ್ನನ್ನು ಮದುವೆಯಾದ ಚಂದ್ರಶೇಖರ್ ಗೆ ಬುದ್ಧಿ ಕಲಿಸಬೇಕು ಎಂದು ಆತನಿಂದ ದೂರಾಗಿ ತಾನು ಮತ್ತೊಂದು ಮದುವೆಯಾಗಲು ನಿರ್ಧರಿಸಿದ್ದಳು.! ಈ ವಿಷಯ ಚಂದ್ರಶೇಖರ್ ಗೆ ಗೊತ್ತಾಗಿತ್ತು..ಅ ನಂತರ ನೆಡದದ್ದೆ ಭವಾನಿ ಹತ್ಯೆ.!

ಲವ್ ದೋಖಾ ಮರ್ಡರ್ .!
ಮಾಗಡಿ ಸಮೀಪದ ಗೆಜ್ಜರಗುಪ್ಪೆ ಗ್ರಾಮದ ನಿವಾಸಿ ಭವಾನಿ, ಕೊಲೆಯಾಗಿರೋ ಯುವತಿ ಎಂದು ತಿಳಿದುಬಂದಿದೆ. ವಿಧ್ಯಾಭ್ಯಾಸ ಮುಗಿಸಿದ ಭವಾನಿ ತಂದೆತಾಯಿಗೆ ಸಹಾಯ ಮಾಡುವ ಉದ್ದೇಶದಿಂದ ಕೆಲಸ ಹರಿಸಿ ಬೆಂಗಳೂರಿಗೆ (Bengaluru) ಬಂದಿದ್ದಳು, ಮೊಬೈಲ್ ಶೋ ರೂಂ ಒಂದರಲ್ಲಿ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದಳು. ಬರ್ತಿದ್ದ ಸಂಬಳದಲ್ಲಿ ಒಂದಷ್ಟು ಹಣವನ್ನು ಹೆತ್ತವರಿಗೆ ಕಳಿಸಿಕೊಟ್ಟು ಉಳಿದ ಹಣದಲ್ಲಿ ತನ್ನ ಜೀವನಸಾಗಿಸಲು ಮುಂದಾಗಿದ್ದಳು,ಎಲ್ಲವೂ ಸರಿಯಾದ ಹಾದಿಯಲ್ಲಿ ಬದುಕು ಸಾಗುವಾಗ ಬಿರುಗಾಳಿಯಂತೆ ಬಂದವನು ಚಂದ್ರಶೇಖರ್ ಅಲಿಯಾಸ್ ಚಂದನ್ ಅನ್ನೋ ಪರಿಚಯವಾಗಿದೆ, ಅದು ಪ್ರೀತಿಗೆ ತೀರುಗಿದೆ.

ಕಳೆದ 1 ವರ್ಷದ ಹಿಂದೆ ಇಬ್ಬರು ಯಾರಿಗೂ ಗೊತ್ತಾಗದ ಹಾಗೇ ವಿವಾಹವೂ ಆಗಿ ಸಹ ಜೀವನ ಸಾಗಿಸುತ್ತಿದ್ದರಂತೆ ಇದರ ನಡುವೆ ತಾನು ಕೈಡಿದಿರೋ ಗಂಡನಿಗೆ ಈ ಹಿಂದೆಯೆ ಮದುವೆಯಾಗಿ 6 ವರ್ಷದ 1 ಮಗು ಸಹ ಇದೆ ಅನ್ನೋ ಆಘಾತಕಾರಿ ಸಂಗತಿ ಭವಾನಿಗೆ ಹೇಗೋ ಗೊತ್ತಾಗಿದೆ.! ಯಾವಾಗ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಕೈಹಿಡಿದವನಿಗೆ ಮತ್ತೊಂದು ಮದುವೆಯಾಗಿದೆ ಅನ್ನೋದು ಗೊತ್ತಾಯಿತೊ ನಾನು ಎಲ್ಲರಿಗೂ ಗೊತ್ತಾಗೋ ರೀತಿಯಲ್ಲಿ ಮತ್ತೊಬ್ಬನ ಮದ್ವೆಯಾಗಬೇಕು ಎನ್ನುವ ನಿರ್ಧಾರಕ್ಕೆ ಭವಾನಿ ಬಂದಿದ್ದಳು.
ಅದರಂತೆ ಭವಾನಿ ತನ್ನ ಹೆತ್ತವರಿಗೂ ವಿಷಯ ಹೇಳಿದ್ದಾಳೆ, ವರನೊಬ್ಬನನ್ನು ನೋಡಿದ್ದ ಭವಾನಿ ಪೋಷಕರು ಮುಂದಿನವಾರ ನಿಶ್ಚಿತಾರ್ಥ ಮಾಡೋದಕ್ಕೆ ಸಿದ್ದತೆ ಮಾಡಿಕೊಂಡಿದ್ರು. ಈ ವಿಚಾರ ತಿಳಿದ ಚಂದ್ರಶೇಖರ್ ತಾನೇ ಮನೆ ಮಾಡಿಕೊಟ್ಟು ಭವಾನಿಯನ್ನು ಇರಿಸಿದ್ದ ಬ್ಯಾಡರಹಳ್ಳಿಯ ತಿಗಳರಪಾಳ್ಯದ ತುಳಿಸಿನಗರದಲ್ಲಿರೋ ಮನೆಗೆ ಬಂದು ಭವಾನಿ ಜೊತೆ ಜಗಳ ಮಾಡಿದ್ದಾನೆ. ಬಳಿಕ ನೀನಿಲ್ಲದೇ ನಾನು ಬದುಕಲು ಸಾಧ್ಯವಿಲ್ಲ ಬದುಕಿದ್ರೆ ಇಬ್ಬರು ಒಟ್ಟಿಗೆ ಬದುಕೋಣ ಇಲ್ಲ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದಿದ್ದಾನೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಭವಾನಿ ನಿರಾಕರಿಸಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಚಂದ್ರಶೇಖರ್ ಭವಾನಿಯನ್ನು ಮದುವೆಯಾದಾಗ ತೆಗೆಸಿದ ಫೋಟೋ ಒಂದನ್ನು ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿದ್ದಾನೆ.

ಈ ಫೋಟೋ ಭವಾನಿ ಕುಟುಂಬಸ್ಥರು ಪರಿಚಯಸ್ಥರು ನೋಡಿ ಫೋನ್ ಮಾಡಿದ್ದಾರೆ. ವಿಚಾರ ಎಲ್ಲರಿಗೂ ಗೊತ್ತಾಯ್ತು ಅಂತಾ ಭವಾನಿ ಸಿಟ್ಟಿಗೆದ್ದು ಚಂದ್ರಶೇಖರ ಜೊತೆಗೆ ಗಲಾಟೆ ಮಾಡಿದ್ದಾಳಂತೆ. ಈ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಚಂದ್ರಶೇಖರ್ ಭವಾನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದು ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ತಿಳಿದುಬಂದಿದೆ.!?
ಇತ್ತ ಭವಾನಿ ಇನ್ಸ್ಟಾ ಖಾತೆಯಲ್ಲಿ ಮದುವೆ ಫೋಟೋ ಅಪ್ಲೋಡ್ ಅದ ವಿಷಯ ತಿಳಿಯುತ್ತಿದ್ದಂತೆ ಭವಾನಿ ಫೋಷಕರು ಆಕೆಗೆ ಪದೇ ಪದೇ ಪೋನ್ ಮಾಡಿದ್ದಾರೆ ಭವಾನಿ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.

ಇತ್ತ ಮನೆ ಬಳಿ ಬಂದ ಮಾಲೀಕರು ಬಂದು ನೋಡಿದಾಗ ಚಂದ್ರಶೇಖರ್ ನರಳಾಡ್ತಿರೋ ಸದ್ದು ಕೇಳಿಸಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿ, ಬಾಗಿಲು ಒಡೆದು ಒಳಹೋಗಿ ನೋಡಿದಾಗ ಭವಾನಿ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ವಿಷ ಸೇವಿಸಿ ನರಳಾಡುತ್ತಿದ್ದ ಚಂದ್ರಶೇಖರ್ ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ ಬ್ಯಾಡರಹಳ್ಳಿ ಪೊಲೀಸರು ನಂತರ ಕೊಲೆಯಾದ ಭವಾನಿ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



