ತೀರ್ಥಹಳ್ಳಿ : ತಾಲೂಕು ದಂಡಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ ಕೇಲವು ಅಧಿಕಾರಿಗಳು ಮತ್ತು ಕೇಲವು ಪೊಲೀಸರಿಗೆ ಹಫ್ತಾ ನಿಗದಿತವಾಗಿ ತಲುಪುವುದರಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರಳು ಲೂಟಿ ನಿರಂತರ.!
ಇವರುಗಳು ಸರ್ಕಾರಿ ಅಧಿಕಾರಿಗಳೆ ಅಥವಾ ಲೂಟಿ ಕೋರರ ಕೃಪಪೋಷಿತರೆ ಎನ್ನುವ ಅನುಮಾನ ಸ್ಥಳೀಯನ್ನು ಕಾಡುತ್ತಿದೆ.
ನಿತ್ಯ ಪಿರನಗುಡ್ಡೆಯಿಂದ 10 ರಿಂದ 15 ಲೋಡ್, ರಂಜದಕಟ್ಟೆಯಿಂದ ಸರಿ ಸುಮಾರು 50 ಲೋಡ್ ಮತ್ತು ಕುಶಾವತಿಯಿಂದ 40 ಲೋಡ್ ಹಾಗೂ ರಾವೆ ಯಿಂದ 50 ಲೋಡ್ ಅಕ್ರಮ ಮರಳು ಸರಾಗವಾಗಿ ತೀರ್ಥಹಳ್ಳಿ ಶಿವಮೊಗ್ಗ ನಗರಕ್ಕೆ ಸಾಗಾಟವಾಗುತ್ತಿದೆ.!ಇನ್ನೂ ಆರಗದ ಪಿರನಗುಡ್ಡೆಯಲ್ಲಿ ಅಕ್ರಮ ಮರಳು ದಂಧೆಕೋರ ಉಪ್ಪಿ ದಿನನಿತ್ಯ ಪಿಕಪ್ ವಾಹನದಲ್ಲಿ ಒಂದು ಸ್ಥಳದಲ್ಲಿ ಅಕ್ರಮವಾಗಿ ಮರಳು ಶೇಖರಣೆಮಾಡಿ ತನ್ನದೇ ನಾಲೈದು ಟಿಪ್ಪರ್ಗಳ ಮುಖಾಂತರ ರಾತ್ರಿ ಹಗಲೆನ್ನದೆ ಮರಳು ಲೂಟಿ ಮಾಡುತ್ತಿದ್ದಾನೆ….

news.ashwasurya.in
ಅಶ್ವಸೂರ್ಯ/ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಆಡಳಿತಕ್ಕೆ ತುಕ್ಕು ಹಿಡಿದಿದೆ. ಜಿಲ್ಲಾಡಳಿತ ಕೂಡ ಮೌನಕ್ಕೆ ಜಾರಿದೆ.! ಸ್ಥಳೀಯ ಶಾಸಕರು ಆದ ಆರಗ ಜ್ಞಾನೇಂದ್ರ ಅವರಿಗೆ ಸ್ಥಳೀಯವಾಗಿ ನೆಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ಮಟ್ಟಹಾಕಬೇಕು ಎನ್ನುವ ಮನಸ್ಸಿದ್ದರು ಆಡಳಿತದ ಚುಕ್ಕಾಣಿ ಕಾಂಗ್ರೆಸ್ ಪಕ್ಷದ ಕೈಯಲ್ಲಿ ಇರುವುದರಿಂದ ಇವರ ಅಧಿಕಾರಕ್ಕೆ ಸ್ವಲ್ಪ ಅಡೆತಡೆಯಾಗಿದೆ. ತಾಲೂಕಿನ ಬೆರಳೆಣಿಕೆಯಷ್ಟು ಅಧಿಕಾರಿಗಳನ್ನು ಬಿಟ್ಟರೆ ಉಳಿದವರೆಲ್ಲ ಅಕ್ರಮ ದಂಧೆಕೋರರ ಹಣಕ್ಕೆ ಕೈಚಾಚಿ ಕುಳಿತಿದ್ದಾರೆ.!

ಮಲೆನಾಡಿಗರ ತವರೂರಾದ ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರಕೃತಿ ಸಂಪತ್ತು ಹಾಡುಹಗಲೇ ಕಳ್ಳಕಾಕರ ಪಾಲಾಗುತ್ತಿದೆ.ಅಕ್ರಮ ಮರಳು ದಂಧೆಕೋರರ ಬೆನ್ನಿಗೆ ನಿಂತು ಪೊರೆಯುತ್ತಿರುವವರು ಭ್ರಷ್ಟ ಅಧಿಕಾರಿಗಳು.ಇಲ್ಲಿ ಅಕ್ರಮ ಮರಳು ಲೂಟಿ ಕೋರರು ಮತ್ತು ಭ್ರಷ್ಟ ಅಧಿಕಾರಿಗಳು ಹಾಗೂ ಕೇಲವು ಜನ ನಾಯಕರಿಂದ ತೀರ್ಥಹಳ್ಳಿ ತಾಲೂಕನ್ನು ಭ್ರಷ್ಟಾಚಾರದ ಗಂಗೋತ್ರಿ ಮಾಡಿದ್ದಾರೆ. ಪರಿಸ್ಥಿತಿ ಯಾವ ಹಂತಕ್ಕೆ ಬಂದಿದೆ ಎಂದರೆ ಈ ಆಧುನಿಕ ಸರ್ಕಾರಿ ಆಸುರರ ಅಟ್ಟಹಾಸ ಕಂಡು ಸಾಕ್ಷತ್ ತಂದೆ ರಾಮೇಶ್ವರನೇ ತುಂಗೆಯ ತಟದಲ್ಲಿ ಕೈ ಚೆಲ್ಲಿ ಕೂತಂತಿದೆ.

ಹೇಳಿ ಕೇಳಿ ತೀರ್ಥಹಳ್ಳಿ ಬುದ್ದಿ ಜೀವಿಗಳ ಬೀಡು. ಮತ್ತು ರಾಜ್ಯದ ನೆಚ್ಚಿನ ಪಟ್ಟಣ. ಇಂತಹ ತಾಲೂಕು ಇವತ್ತು ಅಕ್ರಮ ಮರಳು ಲೂಟಿ, ಅಕ್ರಮ ಕಲ್ಲುಕ್ವಾರ ದಂಧೆಯಿಂದ ಅಧಿಕಾರಿಗಳ ವಲಯದಲ್ಲಿ ಅಂಕೆ ಇಲ್ಲದೆ ಭ್ರಷ್ಟಾಚಾರ ನೆಡೆಯುತ್ತಿದೆ.ಮರಳು ಮಾಫಿಯಾ, ಕಲ್ಲುಕ್ವಾರೆ ಮಾಫಿಯಾ, ಮತ್ತು ಮತಿಗೆಟ್ಟ ಕೆಲವು ರಾಜಕಾರಣಿಗಳಿಂದಾಗಿ ಕುಖ್ಯಾತ ಪಟ್ಟಣವಾಗಿ ತೀರ್ಥಹಳ್ಳಿ ಬದಲಾಗಿದೆ. ತಾಲೂಕಿನ ಇತರೆ ಅಕ್ರಮಗಳನ್ನು ಹೊರತುಪಡಿಸಿ ಕೇವಲ ಇಲ್ಲಿಯ ಮರಳು ಅಕ್ರಮ ದಂಧೆಯೊಂದನ್ನೆ ವಿವರಿಸುತ್ತಾ ಹೋದರೆ ಅದೊಂದು ಹೀನಾ ಚರಿತ್ರೆಯಾಗುತ್ತದೆ.
ಜೊತೆಗೆ ಹೇಗಿದ್ದ ತೀರ್ಥಹಳ್ಳಿ ಹೇಗಾಗಿ ಹೋಯ್ತಲ್ಲ.? ಎಂಬ ಆತಂಕವನ್ನು ಮೂಡಿಸುತ್ತದೆ.
ನಿಜ ತೀರ್ಥಹಳ್ಳಿಯ ಮರಳು ದಂಧೆ ಇಂದು ಮಾಫಿಯಾವಾಗಿ ಪರಿವರ್ತನೆಗೊಂಡಿದೆ.
ಮರಳು ವಹಿವಾಟಿನಿಂದಾಗಿಯೆ ಪ್ರಕೃತಿ ಸಂಪತ್ತು ಕೊಳ್ಳೆ ಹೋಗುತ್ತಿದೆ. ಹಡಬೆ ಹಣ ಕೈ ಬದಲಿಸುತ್ತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇಲ್ಲಿಯಾ ಮರಳು ಮಾಫಿಯಾದ ಅಸಲಿ ಅಪ್ಪ-ಅಮ್ಮಂದಿರು ಇಲ್ಲಿಯ ಕೇಲವು ಸರ್ಕಾರಿ ಅಧಿಕಾರಿಗಳು ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಯ ಕೆಲವರು, ತಾಲೂಕು ಕಛೇರಿಯ ಕೆಲವು ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರಿಂದ ಹಣವನ್ನು ನುಂಗಿ ಕೆರಳಿದ ಗೂಳಿಗಳಂತಾಗಿದ್ದಾರೆ.

ಸ್ಥಳೀಯ ಶಾಸಕರಾದ ಆರಗ ಜ್ಞಾನೇಂದ್ರ ಅವರು ಇತ್ತೀಚೆಗೆ ಅಕ್ರಮ ಮರಳು ಗಣಿಗಾರಿಕೆಯ ಮೇಲೆ ದಾಳಿ ನಡೆಸುವಂತೆ ಆದೇಶಿಸಿದ್ದರು, ಹದ್ದು ಬಸ್ತಿಗೆ ತರುವ ಭರವಸೆ ಮೂಡಿಸಿದ್ದರು. ಒಂದೆರಡು ಭಾಗಗಳಲ್ಲಿ ಅಕ್ರಮ ಮರಳು ದಂಧೆಯ ಮೇಲೆ ರೈಡು ನೆಡೆಯಿತು. ಮರಳು ಬಾಕರ ಮೇಲೆ ಪರಿಣಾಮ ಬಿರಿದ್ದು ಉಂಟು.ಆದರೆ ಒಂದೆರಡು ದಿನ ಕಳೆಯುತ್ತಿದ್ದಂತೆ ಮರಳು ಬಾಕರಿಗೆ ಬಗನಿಗೂಟ ಇಡುವುದನ್ನು ಮರೆತ ಅಧಿಕಾರಿಗಳು ಅವರುಗಳು ಕೊಡುವ ಹಡಬಿಟ್ಟಿ ಹಣಕ್ಕೆ ಕೈಚಾಚಿ ಅಕ್ರಮ ಮರಳು ಲೂಟಿ ಕೋರರ ಬೆನ್ನಿಗೆ ನಿಂತಿದ್ದಾರೆ. ಈ ಕಾರಣದಿಂದಲೇ ತೀರ್ಥಹಳ್ಳಿ ತಾಲೂಕಿನ ಮರಳು ಖದೀಮರು ಹೊಸ ಖದರ್ನೊಂದಿಗೆ ಅಬ್ಬರಿಸಲು ಆರಂಭಿಸಿದ್ದಾರೆ.ಇದರ ಪರಿಣಾಮ ತಾಲೂಕಿನ ರಂಜದಕಟ್ಟೆ,ಕುಶಾವತಿ, ಪಿರನಗುಡ್ಡೆ,ಸರಳ ವ್ಯಾಪ್ತಿಯಲ್ಲಿ ಯಥೇಚ್ಛವಾಗಿ ಹಗಲು ರಾತ್ರಿ ಎನ್ನದೆ ಅಕ್ರಮ ಮರಳು ಸಾಗಾಟ ಭರ್ಜರಿಯಾಗಿ ನೆಡೆಯುತ್ತಿದೆ.ಅದರಲ್ಲೂ ಆರಗದ ಪಿರನಗುಡ್ಡೆಯಲ್ಲಿ ಹಾಡುಹಗಲೇ ಉಪ್ಪಿ ಎನ್ನುವ ಅಕ್ರಮ ಮರಳು ಲೂಟಿಕೋರನಿಂದ ಯಥೇಚ್ಛವಾಗಿ ಮರಳು ಲೂಟಿಯಾಗುತ್ತಿದೆ.

ಆರಗ,ಸರಳ ಪಿರನಗುಡ್ಡೆಯ ವ್ಯಾಪ್ತಿಯಲ್ಲಿ ಮರಳು ಲೂಟಿಗೆ ಉಪ್ಪಿ ನಿಂತಿದ್ದಾನೆ.!
ಇನ್ನೂ ರಂಜದಕಟ್ಟೆ ನದಿ ತೀರದಲ್ಲಿ ಅಕ್ರಮ ಮರಳು ಲೂಟಿ ಭರ್ಜರಿಯಾಗಿ ನೆಡೆಯುತ್ತಿದೆ. ಹಗಲು ರಾತ್ರಿ ಎನ್ನದೆ ಮರಳು ಲೂಟಿ ಮಾಡುತ್ತಿದ್ದಾರೆ ಇನ್ನೂ ರಾವೆಯಲ್ಲಿ ಇರ್ಫಾನ್ ಗ್ಯಾಂಗ್ ಅಕ್ರಮವಾಗಿ ಮರಳು ಲೂಟಿ ಮಾಡುತ್ತಿದ್ದಾರೆ. ಇಲ್ಲಿ ಲೂಟಿ ಮಾಡಿದ ಅಕ್ರಮ ಮರಳು ರಾತ್ರಿ ತೀರ್ಥಹಳ್ಳಿ RMC ಹಿಂಬಾಗದ ಕಲ್ಯಾಣ ಮಂದಿರದ ಸಮೀಪದಲ್ಲಿ ಶೇಖರಣೆಯಾಗಿ ಬೆಳಕು ಕಾಣುವ ಮುನ್ನವೆ ಹೊರ ಜಿಲ್ಲೆಗಳ ಜೋತೆಗೆ ನ್ಯಾಷನಲ್ ಅವರ ಪ್ಲಾಂಟ್ಗೆ ರವಾನೆಯಾಗುತ್ತಿದೆ ಎನ್ನುವ ಮಾತು ತೀರ್ಥಹಳ್ಳಿ ನಗರದಿಂದಲೆ ಕೇಳಿಬರುತ್ತಿದೆ.!? ವರ್ಷಕ್ಕೆ 700 ರಿಂದ 800 ಲೋಡ್ ಅಕ್ರಮ ಮರಳು LP ಲಾರಿಗಳಲ್ಲಿ ನ್ಯಾಷನಲ್ ಪ್ಲಾಂಟ್ಗೆ ಸಾಗಾಟವಾಗುತ್ತಿದೆ ಎನ್ನುವ ಅನುಮಾನ ವಿದ್ದು ಈಗಾಗಲೇ ಕೇಲವು ಜಾಗದಲ್ಲಿ ಸ್ಟಾಕ್ ಆಗಿರುವ ಮರಳು ಶೇಖರಣೆಯ ಅಳತೆ, ತೂಕ ಮತ್ತು ಬಿಲ್ ಗಳ ಸಮಗ್ರ ತನಿಖೆಮಾಡಿದರೆ ಅಕ್ರಮ ಮರಳಿನ ವಹಿವಾಟು ಬಯಲಾಗಲಿದೆ. ಲೋಡ್ ಗಟ್ಟಲೆ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದು ಇರ್ಫಾನ್ ಮತ್ತು ಉಪ್ಪಿ ಎನ್ನುವ ಮರಳು ದಂಧೆಕೋರರು.ಇರ್ಫಾನ್ ಜೋತೆಗೆ ಕೈಜೋಡಿಸಿರುವ ಮರಳು ಲೂಟಿ ಕೋರರು ಇರ್ಫಾನ್ ಅಡ್ಡೆಗೆ ರಾತ್ರೊರಾತ್ರಿ ಅಕ್ರಮವಾಗಿ ಲೂಟಿಮಾಡಿದ ಮರಳನ್ನು ತಂದು ಹಾಕುತ್ತಿದ್ದಾರೆ.!? ರಂಜದ ಕಟ್ಟೆ, ರಾವೆ ಮತ್ತು ಕುಶಾವತಿಯ ನದಿತೀರದಲ್ಲಿ ದಿನನಿತ್ಯ ಲೂಟಿಯಾಗುವ ನೂರಾರು ಲೋಡ್ ಮರಳು ರಾತ್ರೋ ರಾತ್ರಿ ಇರ್ಫಾನ್ ನಾ ನಿಗೂಢ ಸ್ಥಳಗಳಲ್ಲಿ ಶೇಖರಣೆಯಾಗಿ ಬೆಳಕು ಕಾಣುವ ಮುನ್ನವೇ ಬಿಕರಿಯಾಗುತ್ತವೆ.ಸರ್ಕಾರದ ಬೊಕ್ಕಸವನ್ನು ಬರಿದುಮಾಡಿ ನಿರಂತರವಾಗಿ ಮರಳು ಲೂಟಿಗೆ ನಿಂತಿದ್ದಾರೆ. ತೀರ್ಥಹಳ್ಳಿಯ ತಾಲ್ಲೂಕು ಆಡಳಿತದ ಕಣ್ಣೆದುರಿಗೆ ಅಕ್ರಮವಾಗಿ ಮರಳು ಲೂಟಿ ನೆಡೆಯುತ್ತಿದ್ದರು ಕಂಡು ಕಾಣದವರಂತೆ ಮೌನಕ್ಕೆ ಜಾರಿದ್ದು ಮಾತ್ರ ದುರಂತವೆ ಹೌದು.ಹಾಗಾದರೆ ತೀರ್ಥಹಳ್ಳಿಯ ದಂಡಾಧಿಕಾರಿ ತಹಶಿಲ್ದಾರ್ ಅವರ ಗಮನಕ್ಕೆ ಈ ಅಕ್ರಮವಾಗಿ ಮರಳು ಲೂಟಿಯಾಗುತ್ತಿರುವುದು ಕಾಣದೆ ಹೋಯಿತೆ.!? ಅಥವಾ ಕಂಡು ಕಾಣದವರಂತೆ ಕುಳಿತುಬಿಟ್ಟಿದ್ದಾರ.? ಇವರುಗಳು ಸರ್ಕಾರಿ ಅಧಿಕಾರಿಗಳೆ ಅಥವಾ ಲೂಟಿ ಕೋರರ ಕೃಪಪೋಷಿತರೆ ಎನ್ನುವ ಅನುಮಾನ ಸ್ಥಳೀಯನ್ನು ಕಾಡುತ್ತಿದೆ.
ನಿತ್ಯ ಪಿರನಗುಡ್ಡೆಯಿಂದ 10 ರಿಂದ 15 ಲೋಡ್, ರಂಜದಕಟ್ಟೆಯಿಂದ ಸರಿ ಸುಮಾರು 50 ಲೋಡ್ ಮತ್ತು ಕುಶಾವತಿಯಿಂದ 40 ಲೋಡ್ ಹಾಗೂ ರಾವೆ ಯಿಂದ 50 ಲೋಡ್ ಅಕ್ರಮ ಮರಳು ಸರಾಗವಾಗಿ ತೀರ್ಥಹಳ್ಳಿ ಶಿವಮೊಗ್ಗ ನಗರಕ್ಕೆ ಸಾಗಾಟವಾಗುತ್ತಿದೆ.!ಇನ್ನೂ ಆರಗದ ಪಿರನಗುಡ್ಡೆಯಲ್ಲಿ ಅಕ್ರಮ ಮರಳು ದಂಧೆಕೋರ ಉಪ್ಪಿ ದಿನನಿತ್ಯ ಪಿಕಪ್ ವಾಹನದಲ್ಲಿ ಒಂದು ಸ್ಥಳದಲ್ಲಿ ಅಕ್ರಮವಾಗಿ ಮರಳು ಶೇಖರಣೆಮಾಡಿ ತನ್ನದೇ ನಾಲೈದು ಟಿಪ್ಪರ್ಗಳ ಮುಖಾಂತರ ರಾತ್ರಿ ಹಗಲೆನ್ನದೆ ಮರಳು ಲೂಟಿ ಮಾಡುತ್ತಿದ್ದಾನೆ.ಅದರಲ್ಲೂ ತನ್ನದೆ ಬ್ರಿಕ್ಸ್ ತಯಾರಿಸುವ ಘಟಕಕ್ಕೆ ಮರಳು ಸಾಗಾಟ ಮಾಡಿಕೊಳ್ಳುತ್ತಾನೆ ಎನ್ನುವ ದೂರು ಪತ್ರಿಕಾ ಕಛೇರಿಗೆ ತಲುಪಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಯಥೇಚ್ಛವಾಗಿ ಅಕ್ರಮವಾಗಿ ಮರಳು ಲೂಟಿಯಾಗುತ್ತಿದ್ದರು ತಾಲ್ಲೂಕು ದಂಡಾಧಿಕಾರಿಗಳು ಮೌನಕ್ಕೆ ಜಾರಿದ್ದರೆ.!? ಎಲ್ಲೊ ಒಂದೆರಡು ಭಾಗದಲ್ಲಿ ಸಣ್ಣಪುಟ್ಟ ಮರಳು ಲೂಟಿ ಮಾಡುವ ದಂಧೆಕೋರರ ವಿರುದ್ಧ ರೈಡ್ ಬಿದ್ದದ್ದು ಬಿಟ್ಟರೆ ಉಳಿದದ್ದು ಮಾತ್ರ ಶೂನ್ಯ.? ತೀರ್ಥಹಳ್ಳಿ ತಾಲೂಕು ಕಛೇರಿಯ ಕೂಗಳತೆ ದೂರದಲ್ಲೆ ಅಕ್ರಮವಾಗಿ ಮರಳು ಲೂಟಿಯಾಗುತ್ತಿದ್ದು ಇವರ ಗಮನಕ್ಕೆ ಬಾರದೆ ಹೋಗಿರುವುದು ಮಾತ್ರ ದುರಂತವೆ ಹೌದು.ಸಾಕಷ್ಟು ಬಾರಿ ಸ್ಥಳೀಯರು ಮತ್ತು ಪತ್ರಿಕೆಯು ಗಮನಕ್ಕೆ ತಂದರು ಕೇವಲ ಅರಣ್ಯ ರೋಧನವಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ವ್ಯಾಪ್ತಿಯ ನದಿ ಹಳ್ಳ, ಕೆರೆ ಒಡಲು ಸೀಳಿಕೊಂಡು ರಾಶಿ ರಾಶಿ ಮರಳು ಲೂಟಿಯಾಗುತ್ತಿದೆ.
ದಿನವೊಂದಕ್ಕೆ ಅಂದಾಜು ನೂರಾರು ಲೋಡ್ ಅಕ್ರಮ ಮರಳು ಇಲ್ಲಿಂದ ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಕೊಪ್ಪ, ಶೃಂಗೇರಿ, ಕಾರ್ಕಳ, ಇನ್ನಿತರ ನಗರಗಳಿಗೆ ಅಕ್ರಮವಾಗಿ ಸಾಗಣೆಯಾಗುತ್ತಿದೆ.

ಹೀಗೆ ಸಾಗಣೆಯಾದ ಮರಳು ಅಕ್ರಮವಾಗಿ ಎತ್ತಲ್ಪಟ್ಟಿದ್ದು, ಅದು ಕೇವಲ ಅಧಿಕಾರಿಗಳ ಪಹರೆ ಯಲ್ಲಿಯೆ ಸುಸೂತ್ರ ಕಳ್ಳಸಾಗಣೆಯಾಗುತ್ತಿ ರುವುದರಿಂದ ಸಿಂಹಪಾಲು ಲಾಭ ಕೆಲವು ಅಧಿಕಾರಿಗಳಿಗೆ ಸಲ್ಲುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ತಾಲೂಕು ದಂಡಾಧಿಕಾರಿಗಳ ಕಛೇರಿಯ ಮತ್ತು, ಕಂದಾಯ ಇಲಾಖೆ ಹಾಗೂ ಕೇಲವು ಅಧಿಕಾರಿಗಳ ಇಗೆ ಕೇಲವು ಪೊಲೀಸರಿಗೆ ತಿಂಗಳ ಮಾಮೂಲಿ ನಿಗದಿತವಾಗಿ ತಲುಪುವುದರಿಂದ ತಾಲೂಕಿನಲ್ಲಿ ಸಾಗಣೆಯಾಗುವ ಅಷ್ಟು ಮರಳು ಸಕ್ರಮವೆಂಬ ಭಾವನೆ ಸ್ಥಳೀಯ ಜನರಲ್ಲಿ ಮೂಡಿದೆ.
ರಾಜ್ಯದಲ್ಲಿಯೇ ಮರಳು ಮಾಫಿಯಾದ ಕೇಂದ್ರ ಎಂದು ತೀರ್ಥಹಳ್ಳಿ ತಾಲೂಕು ಬಿಂಬಿಸಿಕೊಂಡಿದೆ ಎನ್ನುವುದು ಮಾತ್ರ ದುರಂತವೆ ಹೌದು.!
ಆರಗ ಜ್ಞಾನೇಂದ್ರ , ಶಾಸಕರು

ತೀರ್ಥಹಳ್ಳಿ ತಾಲ್ಲೂಕಿನ ದಬ್ಬಣಗದ್ದೆ ಸರ್ಕಾರಿ ಕ್ವಾರಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮರಳು ಕಳವು ನಡೆದಿದೆ. ಅಕ್ರಮದಲ್ಲಿ ತಹಶೀಲ್ದಾರ್ ಕೂಡ ಶಾಮೀಲಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು’ ಎಂದು ಶಾಸಕ ಆರಗ ಜ್ಞಾನೇಂದ್ರ ಕಳೆದ ಒಂದೆರಡು ವಾರದ ಹಿಂದೆ ಆಗ್ರಹಿಸಿದ್ದರು.
ದಬ್ಬಣಗದ್ದೆಯಲ್ಲಿ ಮರಳು ದಂಧೆ ನಡೆಸುತ್ತಿದ್ದವರ ಜೊತೆಗೆ ಚರ್ಚಿಸಿ ವಾಪಸಾಗಿದ್ದಾರೆ.
ಮಧ್ಯಾಹ್ನ ನಾನು ಸ್ಥಳಕ್ಕೆ ಭೇಟಿ ಕೊಟ್ಟು ಕಳವು ಪ್ರಕರಣ ಬಯಲು ಮಾಡಿದ್ದೇನೆ. ತಹಶೀಲ್ದಾರ್ ಬೆಳಿಗ್ಗೆ ಭೇಟಿ ಕೊಟ್ಟು ಕಾನೂನು ಕ್ರಮ ಜರುಗಿಸದೆ ವಾಪಸ್ಸಾಗಿದ್ದು ಏಕೆ.? ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಜ್ಞಾನೇಂದ್ರ ಅವರು ಪ್ರಶ್ನಿಸಿದ್ದರು.

57 ಟನ್ ಮರಳಿಗೆ ಮಾತ್ರ ಪರ್ಮಿಟ್ ಪಡೆದು ಕಳೆದ ವರ್ಷ ದಬ್ಬಣಗದ್ದೆ ಕ್ವಾರಿಯಲ್ಲಿ ಸಾವಿರ ಟನ್ ಮರಳು ಸಾಗಣೆ ಮಾಡಲಾಗಿತ್ತು.! ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಗುತ್ತಿಗೆದಾರನಿಗೆ ₹1.8 ಕೋಟಿ ದಂಡ ವಿಧಿಸಿದೆ. ಸರ್ಕಾರಕ್ಕೆ ದಂಡ ಪಾವತಿಸದಿದ್ದರೂ ಈ ವರ್ಷ ಮರಳು ಸಾಗಣೆಗೆ ಗಣಿ ಇಲಾಖೆ ಅವಕಾಶ ನೀಡಿದೆ ಎಂದರೆ ಆಶ್ಚರ್ಯವಾಗುತ್ತದೆ. ಮಾಳೂರು ಠಾಣೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮರಳು ಕಳವು ದಂಧೆಯಲ್ಲಿ ಶಾಮೀಲಾಗಿದ್ದಾರ.? ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟುಮಾಡುತ್ತಿದ್ದಾರೆ’ ಎಂದು ಶಾಸಕರು ಪತ್ರಿಕಾ ಗೋಷ್ಠಿಯಲ್ಲಿ ದೂರಿದ್ದರು.
‘ತುಂಗಾ ನದಿ ಪಾತ್ರದಲ್ಲಿ ಮತ್ತು ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಕಳವು ದಂಧೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ.ಈ ಕಾರಣದಿಂದಲೇ ಅಕ್ರಮ ಮರಳು ಲೂಟಿ ಕೋರರು ಯಾರ ಭಯವಿಲ್ಲದೆ ಮರಳು ಲೂಟಿಗೆ ಮುಂದಾಗಿದ್ದಾರೆ ಎಂದರು.
ಆರಗದ ಪಿರನಗುಡ್ಡ,ಸರಳ,ಹೀರೆಸರದ ನದಿ, ಹಳ್ಳಕೊಳ್ಳಗಳಿಂದ ಅಕ್ರಮವಾಗಿ ತೆಗೆಯುತ್ತಿದ್ದ ಮರಳನ್ನು ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ನಿಲ್ಲಿಸದೇ ಹೋದರೆ ಮುಂದೊಂದು ದಿನ ಭಾರಿ ಅನಾಹುತ ಕಾದಿದೆ.ರೈತರ ಜಮೀನುಗಳು ಮರಳು ಲಾರಿಗಳ ಅಕ್ರಮ ಓಡಾಟದಿಂದಾಗಿ ಕಾಂಕ್ರಿಟ್ ನೆಲದಂತಾಗಿದೆ. ಎಷ್ಟೇ ತಡೆಗೋಡೆ ನಿರ್ಮಿಸಿ ಕಂದಕ ತೋಡಿದರು ಮರಳು ಬಾಕರು ಅವುಗಳನ್ನು ದ್ವಂಸಗೊಳಿಸಿ ರಾಜಾರೋಷವಾಗಿ ಮರಳು ಸಾಗಿಸುತ್ತಿದ್ದಾರೆ. ಒಟ್ಟಾರೆ ಸಂಪೂರ್ಣ ತೀರ್ಥಹಳ್ಳಿ ತಾಲೂಕು ಮರಳು ಮಾಫಿಯಾದ ಕೇಂದ್ರವಾಗಿ ರೂಪುಗೊಂಡಿದೆ.!


