ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು.! ಸನ್ಮಾನ ಮಾಡಲು ಹೋದ ನಾಗನ ಸಹಚರರನ್ನು ಬಂಧಿಸಿದ ಪೊಲೀಸರು.!
news.ashwasurya.in
ಅಶ್ವಸೂರ್ಯ/ಬೆಂಗಳೂರು: ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಸನ್ಮಾನ ಮಾಡಲು ಮುಂದಾಗಿದ್ದವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಬೆಳಗಾವಿ ಜೈಲು ಸೇರಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ನಿನ್ನೆ ಸೆಷನ್ಸ್ ಕೋರ್ಟ್ 48, ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಹುಡುಗರ ಗುಂಪೊಂದು ವಿಲ್ಸನ್ ಗಾರ್ಡನ್ ನಾಗ ರಿಲೀಸ್ ಆಗುವ ವೇಳೆ ಸನ್ಮಾನ ಮಾಡಲು ಆತನ ಸಹಚರರು ಮುಂದಾಗಿರುವ ವಿಚಾರ ತಿಳಿದ ಬೆನ್ನಲ್ಲೇ ಸಿಸಿಬಿ, ಒಸಿಡಬ್ಲ್ಯೂ ವಿಂಗ್ ನಾಗನ ಸಹಚರರನ್ನು ವಶಕ್ಕೆ ಪಡೆದಿದ್ದಾರೆ.
ಸನ್ಮಾನದ ಸಿದ್ಧತೆ ನಡೆಸಿದ್ದ ಗ್ಯಾಂಗ್ ಮೇಲೆ ದಾಳಿ ನಡೆಸಿದ ಪೊಲೀಸರು ಹೆಡೆಮುರಿ ಕಟ್ಟಿದ್ದು, ವಿಲ್ಸನ್ ಗಾರ್ಡನ್ ನಾಗನ ಮೇಲು ಕಣ್ಣಿಟ್ಟಿದ್ದಾರೆ.


