
ತೀರ್ಥಹಳ್ಳಿ : ಮಂಡಗದ್ದೆ ತುಂಗಾ ತೀರದಲ್ಲಿ ಅಕ್ರಮ ಮರಳು ದಂಧೆ.! ಪೊಲೀಸರ ಮೌನ.?ಅಧಿಕಾರಿಗಳು ಎಲ್ಲಿ.?
news.ashwasurya.in
ಅಶ್ವಸೂರ್ಯ/ಮಂಡಗದ್ದೆ : ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದಲ್ಲಿ ಹಗಲು-ರಾತ್ರಿ ಎನ್ನದೆ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ ನಡೆಯುತ್ತಿದ್ದು, ಮರಳು ದಂಧೆ ತಡೆಯಬೇಕಾದ ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯ ಮತ್ತು ಮೌನವೇ ದಂಧೆಕೋರರಿಗೆ ಪರೋಕ್ಷ ಬೆಂಬಲವಾಗಿ ಪರಿಣಮಿಸಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.

ಗ್ರಾಮದ ಕೇಲವು ಖದೀಮರ ಗ್ಯಾಂಗಿನ ರಫೀಕ್ ಎಂಬಾತನ ನೇತೃತ್ವದಲ್ಲೇ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು,ಕೇಲವು ನಿಗೂಢ ಸ್ಥಳಗಳಲ್ಲಿ ಅಪಾರ ಪ್ರಮಾಣದ ಮರಳು ಕೂಡ ಸಂಗ್ರಹ ಮಾಡಲಾಗಿದೆ ಎನ್ನಲಾಗಿದೆ.ರಾತ್ರಿ ಹಗಲೆನ್ನದೇ ಪಿಕಪ್ ವಾಹನದಲ್ಲಿ ಅಕ್ರಮ ಮರಳು ಸಾಗಾಟ ನೆಡೆಯುತ್ತಿದ್ದರು ಮಾಳೂರು ಪೋಲಿಸರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಇಲ್ಲಿ ದಕ್ಷ ರಕ್ಷಣಾ ಅಧಿಕಾರಿಗಳು ಗಮನಿಸ ಬೇಕಿರುವುದು ಎನೆಂದರೆ ಮೊದಲ ಹಂತದಲ್ಲಿ ಮಂಡಗದ್ದೆ ಯಿಂದ ತೀರ್ಥಹಳ್ಳಿಯ ತುಂಗಾ ತೀರದಲ್ಲಿ ರಾತ್ರಿ ಹಗಲೆನ್ನದೆ ನೆಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ಮಟ್ಟಹಾಕಲು ಇಲಾಖೆಯ ಹದ್ದಿನ ಕಣ್ಣಿನ “ದ್ರೋಣ್” ಮುಖಾಂತರ ಕೇಲವು ಸ್ಥಳಗಳಲ್ಲಿ ಕಾರ್ಯಚರಣೆ ನಡೆಸಿದರೆ ಸಾಕಷ್ಟು ಅಕ್ರಮ ಮರಳು ದಂಧೆಯ ಸ್ಥಳಗಳು ಮತ್ತು ದಂಧೆಕೋರರ ಮಾಹಿತಿ ಲಭ್ಯವಾಗಲಿದೆ ಜೊತೆಗೆ ರಾಜ್ಯದಲ್ಲೆ ಇದೊಂದು ಕಾರ್ಯಚರಣೆ ಮಹತ್ವದಾಗಿರುತ್ತದೆ. ಸರ್ಕಾರದ ಬೊಕ್ಕಸಕ್ಕೆ ಕನ್ನಹಾಕುತ್ತಿರುವ ಖದೀಮರ ಗ್ಯಾಂಗನ್ನು ಮಟ್ಟ ಹಾಕಬಹುದಾಗಿದೆ.

ಅಧಿಕ ಪ್ರಮಾಣದ ಮರಳು ಅಕ್ರಮವಾಗಿ ಸಾಗಾಟವಾಗುತ್ತಿದ್ದರು ಸಂಭಂದಪಟ್ಟ ಅಧಿಕಾರಿಗಳು ಎಲ್ಲಾ ಗೋತ್ತಿದ್ದು ಗೊತ್ತಿಲ್ಲದವರಂತೆ ಮೌನ ವಹಿಸಿದ್ದಾರೆ.ಅದರಲ್ಲೂ ಮಾಳೂರು ಪೊಲೀಸ್ ಠಾಣೆಯ ಕೇಲವು ಪೊಲೀಸರಿಗಂತು ದಿನನಿತ್ಯದ ಕಮಾಯಿಯ ಗಣಿಯಾಗಿದೆ. ಕೇಲವು ಸ್ಥಳಗಳಲ್ಲಿ ಅಕ್ರಮ ಮರಳು ದಂಧೆಯ ಸ್ಥಳಗಳಲ್ಲಿ ಫೋಟೋ ತೆಗೆಯಲು ಹೋದರೂ ಜೀವ ಭಯದ ವಾತಾವರಣ ನಿರ್ಮಾಣವಾಗಿದೆ” ಮಂಡಗದ್ದೆ ಗ್ರಾಮದ ಮಸೀದಿ ಹಿಂಭಾಗದಲ್ಲಿ ಇರುವ ತುಂಗಾ ನದಿಯ ತೀರದಲ್ಲಿ ರಾತ್ರಿ ವೇಳೆಯಲ್ಲಿ ಟ್ರ್ಯಾಕ್ಟರ್ ಟಿಪ್ಪರ್ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ರಾತ್ರಿ ಹೊತ್ತಿನಲ್ಲಿ ನಿರಂತರವಾಗಿ ಮರಳು ಸಾಗಾಟ ನಡೆಯುತ್ತಿದ್ದರೂ ಗಣಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಂಬಂಧಿತ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ತಪಾಸಣೆ ನಡೆಸದಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ಭೂ ಮತ್ತು ಗಣಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿಗಳ ನಡುವೆ ಸಮನ್ವಯದ ಕೊರತೆಯೇ ಅಕ್ರಮ ಮರಳು ದಂಧೆ ವ್ಯಾಪಕವಾಗಲು ಪ್ರಮುಖ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನೊಂದೆಡೆ, ಮರಳು ದಂಧೆಯಲ್ಲಿ ತೊಡಗಿರುವವರು ಕೆಲ ಅಧಿಕಾರಿಗಳಿಗೆ ನಿಯಮಿತವಾಗಿ ಮಾಮೂಲಿ ನೀಡುತ್ತಿರುವುದರಿಂದಲೇ ಯಾವುದೇ ಕಾನೂನು ಕ್ರಮ ಜರುಗುತ್ತಿಲ್ಲ ಎಂಬ ಚರ್ಚೆಗಳು ಗ್ರಾಮದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.

ಅಕ್ರಮ ಮರಳು ಸಾಗಾಟ ಹಾಗೂ ಸಂಗ್ರಹದಲ್ಲಿ ತೊಡಗಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು, ಅಕ್ರಮವಾಗಿ ಸಂಗ್ರಹಿಸಿರುವ ಮರಳಿನ ತಾಣಗಳನ್ನು ತಪಾಸಣೆ ಮಾಡಿ ಸೀಜ್ ಮಾಡಬೇಕು ಹಾಗೂ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಪಾತ್ರ ಕುರಿತು ಉನ್ನತ ಮಟ್ಟದ ಇಲಾಖಾ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಗಂಭೀರ ಆರೋಪಗಳ ಹಿನ್ನೆಲೆ ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆಗಳು ಯಾವ ರೀತಿಯ ಕ್ರಮ ಕೈಗೊಳ್ಳಲಿವೆ ಎಂಬುದನ್ನು ಸಾರ್ವಜನಿಕರು ಮತ್ತು ಪತ್ರಿಕೆ ಕೂಡ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.ಇಲ್ಲವಾದರೆ ಈ ಅಕ್ರಮ ಮರಳು ದಂಧೆಯಲ್ಲಿ ಕೈಜೋಡಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಪೊಲೀಸರು ಮತ್ತು ಅರಣ್ಯ ಇಲಾಖೆಯ ಯಾವ ಯಾವ ಅಧಿಕಾರಿಗಳಿಗೆ ನಿತ್ಯದ ಮಾಮೂಲು ತಲುಪುತ್ತದೆ ಎನ್ನುವುದನ್ನು ಪತ್ರಿಕೆ ನೇರವಾಗಿಯೆ ಮುಂದಿನ ಸಂಚಿಕೆಯಲ್ಲಿ ಸಂಪೂರ್ಣ ವರದಿ ನಿಮ್ಮ ಮುಂದೆ….

