ಶಿವಮೊಗ್ಗ : ದ್ವೀತಿಯ ಪಿಯು ವಾಣಿಜ್ಯ ವಿಭಾಗದಲ್ಲಿ ಶಿವಮೊಗ್ಗದ ಕುಮಾರಿ ರಂಜಿತಾ ಜಿ. 600/596 ಅಂಕ ಪಡೆದು ರಾಜ್ಯಕ್ಕೆ 4ನೇ ರ್ಯಾಂಕ್ ಶಿವಮೊಗ್ಗ ಜಿಲ್ಲೆಗೆ ಪ್ರಥಮ ರ್ಯಾಂಕ್.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ “ವಿಕಾಸ ವಿದ್ಯಾ ಸಮಿತಿ” ಪಿಯು ಕಾಲೇಜಿನ ಕುಮಾರಿ ರಂಜಿತಾ G.ದ್ವೀತಿಯ ಪಿಯು ವಾಣಿಜ್ಯ ವಿಭಾಗದಲ್ಲಿ 600/596 ಅಂಕಗಳನ್ನು ಪಡೆದು ರಾಜ್ಯಕ್ಕೆ 4 ನೇ ರ್ಯಾಂಕ್ ಶಿವಮೊಗ್ಗ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಶ್ರೀ ಗಿರೀಶ್ ಹಾಗೂ ಶ್ರೀಮತಿ ಶ್ವೇತ ಹೆಚ್ ಪಿ ಅವರ ಮಗಳಾಗಿದ್ದು ತನ್ನ ವಿದ್ಯಾ ಅಭ್ಯಾಸದ ಆರಂಭದ ದಿನದಿಂದಲೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾ ತಾನು ಓದಿದ ಶಾಲೆಗೂ ಹೆತ್ತವರಿಗೂ ಕೀರ್ತಿ ತಂದಿದ್ದಾರೆ. ಮುಂದಿನ ದಿನಗಳಲ್ಲೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಚಾರ್ಟರ್ಡ್ ಅಕೌಂಟೆಂಟ್ (CA) ಮಾಡುವುದು ಅವರ ಗುರಿಯಾಗಿದೆ.

ರಾಜಕ್ಕೆ 4ನೇ ರ್ಯಾಂಕ್, ಶಿವಮೊಗ್ಗ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದು ಉತ್ತೀರ್ಣರಾಗಿ ಜಿಲ್ಲೆಗೂ ಓದಿದ ಕಾಲೇಜಿಗೂ ಕೀರ್ತಿ ತಂದಿರುತ್ತಾರೆ. ಅತ್ಯುತ್ತಮ ಸಾಧನೆಗೈದ ಕುಮಾರಿ ರಂಜಿತಾ ಜಿ ಅವರಿಗೆ ಸಂಸದರಾದ ಬಿ ವೈ ರಾಘವೇಂದ್ರ ಹಾಗೂ ಶಾಸಕರಾದ ಚನ್ನಬಸಪ್ಪ (ಚನ್ನಿ) ಮತ್ತು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ
ಪತ್ರಿಕೆ ಕೂಡ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ಕುಮಾರಿ ರಂಜಿತಾ ಅವರಿಗೆ ಶುಭ ಕೋರಿದೆ….

